
ನವದೆಹಲಿ(ಡಿ.25): 200 ರೂ. ಹಾಗೂ 2,000 ರೂ. ಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ಇದೀಗ 20 ರೂ. ಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.
500 ರೂ. ಹಾಗೂ 1,000 ರೂ. ಮುಖಬೆಲೆಯ ನೋಟುಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಬಳಿಕ, ಆರ್‌ಬಿಐ 50 ರೂ., 100 ರೂ., 500 ರೂ., 200 ರೂ. ಹಾಗೂ 2,000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು.
2016ರ ನವೆಂಬರ್ ಬಳಿಕ ಆರ್‌ಬಿಐ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನು ಹೊಂದಿರುವ ಹೊಸ ನೋಟುಗಳನ್ನು ಪರಿಚಯಿಸುತ್ತಿದೆ. ಈ ಹೊಸ ನೋಟುಗಳು ಹಿಂದಿನ ನೋಟುಗಳಿಗಿಂತ ಗಾತ್ರ ಹಾಗೂ ವಿನ್ಯಾಸದಲ್ಲಿ ಭಿನ್ನತೆಗಳನ್ನು ಹೊಂದಿದೆ.
ಮಾರುಕಟ್ಟೆಗೆ ಬರಲಿದೆ ಹೊಸ ನೋಟು : ಹಳೆಯ ನೋಟು ಏನಾಗುತ್ತದೆ..?
2016 ಮಾರ್ಚ್ 31ರವರೆಗೂ 20 ರೂ. ಮುಖಬೆಲೆಯ ಒಟ್ಟು 4.92 ಬಿಲಿಯನ್ ನೋಟುಗಳು ಚಾಲನೆಯಲ್ಲಿರುವುದಾಗಿ ಹೇಳಲಾಗಿದೆ. 2018ರ ಮಾರ್ಚ್ ವೇಳೆ ಇದರ ಚಾಲನೆ ದುಪ್ಪಟ್ಟಾಗಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯದ ಬ್ಯಾಂಕುಗಳ ಬಗ್ಗೆ RBI ಹೇಳಿದ ಆತಂಕದ ಸಂಗತಿ
‘ಮೀಸಲು ಹಣದ ಮೇಲೆ ಕಣ್ಣು: ಆರ್ಥಿಕತೆಗೆ ಮಾಡಲಿದೆ ಹುಣ್ಣು’!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.