RBI Norms:ಎನ್ ಬಿಎಫ್ ಸಿ ಸಾಲ ಪಡೆಯೋದು ಇನ್ಮುಂದೆ ಸುಲಭವಲ್ಲ; ನಿಯಮ ಬಿಗಿಗೊಳಿಸಿದ ಆರ್ ಬಿಐ

Published : Apr 20, 2022, 06:08 PM IST
RBI Norms:ಎನ್ ಬಿಎಫ್ ಸಿ ಸಾಲ ಪಡೆಯೋದು ಇನ್ಮುಂದೆ ಸುಲಭವಲ್ಲ; ನಿಯಮ ಬಿಗಿಗೊಳಿಸಿದ ಆರ್ ಬಿಐ

ಸಾರಾಂಶ

*ಹೊಸ ನಿಯಮಗಳು 2022ರ ಅಕ್ಟೋಬರ್ 1ರಿಂದ ಜಾರಿಗೆ * ಎನ್ ಬಿಎಫ್ ಸಿ ತನ್ನ ನಿರ್ದೇಶಕರು ಹಾಗೂ ಅವರ ಸಂಬಂಧಿಕರಿಗೆ ಸಾಲ ವಿತರಿಸುವ ನಿಯಮ ಬಿಗಿಗೊಳಿಸಿದ ಆರ್ ಬಿಐ *5 ಕೋಟಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಸಾಲಗಳಿಗೆ ಮಂಡಳಿಯಿಂದ ಅನುಮೋದನೆ ಪಡೆಯೋದು ಕಡ್ಡಾಯ

ಮುಂಬೈ (ಏ.20): ಸಾಲ (Loan) ಅನುಮೋದನೆ (approval) ನಿಯಮ ಸೇರಿದಂತೆ ಬ್ಯಾಂಕಿಂಗೇತರ ಹಣಕಾಸು ಕಂಪೆನಿಗಳಿಗೆ (NBFC) ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದ್ದು, 2022ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.

ಎನ್ ಬಿಎಫ್ ಸಿಗೆ (NBFCs) ಸಂಬಂಧಿಸಿ ಆರ್ ಬಿಐ (RBI) 4 ಪ್ರತ್ಯೇಕ ಸುತ್ತೋಲೆಗಳನ್ನು (Circulars) ಹೊರಡಿಸಿದೆ. ಇದರಲ್ಲಿ ಸಾಲ  (Loan) ನೀಡುವಿಕೆಗೆ ಸಂಬಂಧಿಸಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಮುಖ್ಯವಾಗಿ ಎನ್ ಬಿಎಫ್ ಸಿ ತನ್ನ ನಿರ್ದೇಶಕರು (Directors) ಹಾಗೂ ಅವರ ಸಂಬಂಧಿಕರಿಗೆ (Relatives) ಸಾಲಗಳನ್ನು ವಿತರಿಸುವುದಕ್ಕೆ ಸಂಬಂಧಿಸಿ ಸಾಲ ಅನುಮೋದನೆ ನಿಯಮಗಳನ್ನು ಬಿಗಿಗೊಳಿಸಿದೆ. 5 ಕೋಟಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಸಾಲಗಳಿಗೆ ಮಂಡಳಿಯಿಂದ ಅನುಮೋದನೆ ಪಡೆಯೋದು ಕಡ್ಡಾಯ. ಮಂಡಳಿ ಅನುಮೋದನೆ ನೀಡಿದ ಬಳಿಕವಷ್ಟೇ ಸಾಲ ಮಂಜೂರು ಮಾಡಬೇಕೆಂದು ಆರ್ ಬಿಐ (RBI) ಹೇಳಿದೆ. ಇನ್ನು ಎನ್ ಬಿಎಫ್ ಸಿ ಆಡಳಿತ ಮಂಡಳಿಯ ನಿರ್ದೇಶಕರು ಅದರ ಪಾಲುದಾರರೂ ಆಗಿದ್ದರೆ ಆಗ ಅವರಿಗೂ ಕೂಡ ಸಾಲ ನೀಡುವ ಸಂದರ್ಭದಲ್ಲಿ ಈ ನಿಯಮ ಅನ್ವಯಿಸುತ್ತದೆ ಎಂದು ಆರ್ ಬಿಐ ತಿಳಿಸಿದೆ. ಸಾಲ ನೀಡಿಕೆಗೆ ಸಂಬಂಧಿಸಿ ಬಿಗಿಗೊಳಿಸಿರುವ ನಿಯಮಗಳು 2022ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ.

ಎಸ್‌ಬಿಐ ಸೇರಿ ಹಲವು ಬ್ಯಾಂಕ್‌ಗಳ ಸಾಲದ ಬಡ್ಡಿದರ ಏರಿಕೆ

ರಿಯಲ್ ಎಸ್ಟೇಟ್ ವಲಯಕ್ಕೆ ಎನ್ ಬಿಎಫ್ ಸಿ (NBFCs)ಸಾಲ ನೀಡುವ ನಿಯಮಗಳನ್ನು ಕೂಡ ಆರ್ ಬಿಐ ಬಿಗಿಗೊಳಿಸಿದೆ. ಸಾಲ ಪಡೆದುಕೊಳ್ಳುವ ವ್ಯಕ್ತಿ ಪ್ರಾಜೆಕ್ಟ್ ಗೆ ಸರ್ಕಾರ ಅಥವಾ ಸ್ಥಳೀಯ ಸರ್ಕಾರದಿಂದ ಪೂರ್ವಾನುಮತಿಯನ್ನು (Pre-approval) ಕಡ್ಡಾಯವಾಗಿ ಪಡೆಯಬೇಕು ಎಂದು ಹೊಸ ನಿಯಮ ಹೇಳಿದೆ. 
ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿ ಅನೇಕ ವಂಚನೆ  ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆರ್ ಬಿಐ (RBI) ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.

ಕಳೆದ ಕೆಲವು ವರ್ಷಗಳಿಂದ ಎನ್ ಬಿಎಫ್ ಸಿ ಹಾಗೂ ಬ್ಯಾಂಕುಗಳ ನಡುವಿನ ನಿಯಮಗಳಲ್ಲಿ ಸಮಾನತೆ ತರಲು  ಆರ್ ಬಿಐ (RBI) ಪ್ರಯತ್ನಿಸುತ್ತಿದೆ.ಅಷ್ಟೇ ಅಲ್ಲದೆ, ಸಾಲ ಮರುಪಾವತಿ ಹಾಗೂ ಸಾಲದ ಭದ್ರೆತೆಗೆ ಸಂಬಂಧಿಸಿ ನಡೆದ ಎಲ್ಲ ವಂಚನೆ ಪ್ರಕರಣಗಳನ್ನು ಬಹಿರಂಗಪಡಿಸುವಂತೆ ಆರ್ ಬಿಐ ತಿಳಿಸಿದೆ. ಖಾತೆಗಳು, ರಿಯಲ್ ಎಸ್ಟೇಟ್, ಕ್ಯಾಪಿಟಲ್ ಮಾರ್ಕೆಟ್, ವಿದೇಶಿ ವಿನಿಮಯ, ವೈಯಕ್ತಿಕ ಸಾಲ ಹೀಗೆ ಈ ಎಲ್ಲ ವಲಯಗಳಿಗೆ ಸಂಬಂಧಿಸಿದ ವಹಿವಾಟಿನ ಮಾಹಿತಿಯನ್ನುಎಲ್ಲ ಎನ್ ಬಿಎಫ್ ಸಿಗಳು ಬಹಿರಂಗಪಡಿಸುವಂತೆ ಆರ್ ಬಿಐ ಕೋರಿದೆ. 

Bank Locker Rules ಬ್ಯಾಂಕ್‌ ಲಾಕರ್‌ನಲ್ಲಿದ್ದ ವಸ್ತು ನಾಪತ್ತೆಯಾದರೆ ಬಾಡಿಗೆಯ 100 ಪಟ್ಟು ಪರಿಹಾರ, ಹೊಸ ನಿಯಮ ಜಾರಿ!

ಕಂಪೆನಿ ಕಾಯ್ದೆಯಡಿ ನೋಂದಣಿಯಾಗಿ ಸಾಲ, ಮುಂಗಡಗಳು, ಶೇರುಗಳನ್ನು ಹೊಂದುವುದು, ಬಾಂಡ್‌ಗಳ ವಿತರಣೆ ಸೇರಿದಂತೆ ಇತರ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕಂಪೆನಿಗಳನ್ನು ಬ್ಯಾಂಕೇತರ ಹಣಕಾಸು ಕಂಪೆನಿ ಎನ್ನಲಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಅನೇಕ ಎನ್ ಬಿಎಫ್ ಸಿ ಕಂಪೆನಿಗಳ ವಿರುದ್ಧ ವಂಚನೆ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಈ ಸಂಸ್ಥೆಗಳಿಗೆ ಸಂಬಂಧಿಸಿ ನಿಯಮಗಳನ್ನು ಬಿಗಿಗೊಳಿಸುವ ಮೂಲಕ ಅಕ್ರಮ ಹಾಗೂ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಆರ್ ಬಿಐ ಮುಂದಾಗಿದೆ. ಎನ್ ಬಿಎಫ್ ಸಿ ವಂಚನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಆರ್ ಬಿಐ ಅನೇಕ ಕ್ರಮಗಳನ್ನು ಕೈಗೊಂಡಿದೆ. ಬ್ಯಾಂಕ್ ಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ವಿರುದ್ಧ ಸಾರ್ವಜನಿಕರು ದೂರುಗಳನ್ನು ದಾಖಲಿಸಲು ಆರ್ ಬಿಐ ದೂರು ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!