ಎರಡು ಸಾವಿರ ರೂಪಾಯಿ (2000) ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ನಂತರವೂ ಸುಮಾರು 7,755 ಕೋಟಿ ಮೌಲ್ಯದ 2 ಸಾವಿರ ರೂಪಾಯಿಯ ನೋಟುಗಳು ಮಾತ್ರ ಇನ್ನೂ ಸಾರ್ವಜನಿಕರ ಬಳಿಯೇ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಹಿತಿ ನೀಡಿದೆ.
ನವದೆಹಲಿ: ಎರಡು ಸಾವಿರ ರೂಪಾಯಿ (2000) ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಅಥವಾ ವಾಪಸ್ ಪಡೆದ ನಂತರ ಶೇಕಡಾ 97.82 ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಂದಿವೆ. ಆದರೆ ಸುಮಾರು 7,755 ಕೋಟಿ ಮೌಲ್ಯದ 2 ಸಾವಿರ ರೂಪಾಯಿಯ ನೋಟುಗಳು ಮಾತ್ರ ಇನ್ನೂ ಸಾರ್ವಜನಿಕರ ಬಳಿಯೇ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಹಿತಿ ನೀಡಿದೆ.
ಮೇ 19, 2023 ರಂದು ಭಾರತೀಯ ರಿಸರ್ವ್ ಬ್ಯಾಂಕ್ 2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿತ್ತು. ಈ ಘೋಷಣೆ ಆಗಿ ಒಂದು ವರ್ಷವೇ ಕಳೆದು ಹೋಗಿದೆ. ಆದರೂ ಶೇಕಡಾ 2.18ರಷ್ಟು ನೋಟುಗಳು ಅಂದರೆ ಬರೋಬ್ಬರಿ 7,755 ಕೋಟಿ ರೂಪಾಯಿಗಳು ಇನ್ನು ಜನರ ಬಳಿಯೇ ಇರುವುದು ಅಚ್ಚರಿ ಮೂಡಿಸಿದೆ.
undefined
₹2000 ನೋಟು ಇನ್ನೂ ಇದೆಯಾ? ಅಂಚೆ ಮೂಲಕ ಕಳಿಸಿ ನಗದಾಗಿಸಿ
ಚಲಾವಣೆಯಲ್ಲಿರುವ 2000 ರೂಪಾಯಿಯ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯ ಮೇ 19, 2023 ರಂದು ದಿನದ ವಹಿವಾಟಿನ ಮುಕ್ತಾಯದ ವೇಳೆಗೆ 3.56 ಲಕ್ಷ ಕೋಟಿ ಆಗಿತ್ತು( ಜನರ ಬಳಿ ಇರುವ ನೋಟು). ಆದರೆ ಮೇ 31, 2024 ರ ವೇಳೆ ವ್ಯವಹಾರದ ಮುಕ್ತಾಯದ ವೇಳೆಗೆ ಚಲಾವಣೆಯಲ್ಲಿಲ್ಲದಿದ್ದರೂ ಬ್ಯಾಂಕ್‌ಗೆ ಬಾರದ 2 ಸಾವಿರ ರೂಪಾಯಿಯ ನೋಟುಗಳ ಮೊತ್ತ ಕೇವಲ 7,755 ಕೋಟಿಗೆ ಇಳಿಕೆಯಾಗಿದೆ.
2000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡುವುದಕ್ಕೆ ಅಥವಾ ವಿನಿಮಯ ಮಾಡಿಕೊಳ್ಳುವುದಕ್ಕೆ 2023ರ ಅಕ್ಟೋಬರ್ 7ರವರೆಗೂ ದೇಶದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಅವಕಾಶವಿತ್ತು. ಅಲ್ಲದೇ 2023 ರ ಮೇ 19ರಿಂದ ರಿಸರ್ವ್ ಬ್ಯಾಂಕ್‌ನ 19 ಶಾಖಾ ಕಚೇರಿಗಳಲ್ಲಿ 2000 ನೋಟುಗಳ ವಿನಿಮಯದ ಸೌಲಭ್ಯ ಲಭ್ಯವಿದೆ.
ನೆನಪಿರಲಿ, ಸೆಪ್ಟೆಂಬರ್ ತಿಂಗಳಲ್ಲಿ ಈ 7 ಹಣಕಾಸು ಕೆಲಸ ಮಾಡದಿದ್ರೆ ನಷ್ಟ ಗ್ಯಾರಂಟಿ!
2023 ರ ಅಕ್ಟೋಬರ್ 9ರ ನಂತರ ಆರ್‌ಬಿಐ ವಿತರಣಾ ಕಚೇರಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ 2 ಸಾವಿರ ರೂಪಾಯಿ ನೋಟುಗಳನ್ನು ಠೇವಣಿ ಮಾಡಲು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಅವಕಾಶ ನೀಡಿವೆ. ಇದಲ್ಲದೆ, ಸಾರ್ವಜನಿಕರು 2000 ರೂಪಾಯಿಯ ಬ್ಯಾಂಕ್ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಕ್ರೆಡಿಟ್ ಮಾಡಲು ದೇಶದ ಯಾವುದೇ ಅಂಚೆ ಕಚೇರಿಯಿಂದ ಭಾರತೀಯ ಅಂಚೆ ಮೂಲಕ ಯಾವುದೇ ಆರ್‌ಬಿಐ ವಿತರಣಾ ಕಚೇರಿಗಳಿಗೆ ಕಳುಹಿಸಬಹುದಾಗಿದೆ.