
ನವದೆಹಲಿ (ಮಾ.3): ಕಳೆದ ಐದು ವರ್ಷಗಳಲ್ಲಿ ಭಾರತೀಯ ರಾಜ್ಯಗಳ ಬಾಕಿ ಸಾಲದ ಪ್ರಮಾಣದಲ್ಲಿ ತೀವ್ರ ಏರಿಕೆಯಾಗಿದೆ ಎಂದು ಆರ್‌ಬಿಐ ವರದಿ ತಿಳಿಸಿದೆ. ಆರ್ಥಿಕ ಸವಾಲುಗಳ ನಡುವೆ ಸಾಲ ಪಡೆಯುವಲ್ಲಿನ ಹೆಚ್ಚಳವನ್ನು ಇದು ತೋರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಡೇಟಾ ಪ್ರಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UT) ಒಟ್ಟು ಬಾಕಿ ಸಾಲಗಳು 2019 ರಲ್ಲಿ 47.9 ಲಕ್ಷ ಕೋಟಿ ರೂ.ಗಳಿಂದ 2024 ರಲ್ಲಿ 83.3 ಲಕ್ಷ ಕೋಟಿ ರೂ.ಗಳಿಗೆ ಏರಿದೆ, ಇದು 74% ಹೆಚ್ಚಳವನ್ನು ಸೂಚಿಸುತ್ತದೆ.
2024 ರಲ್ಲಿ ಅತಿ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿರುವ ಟಾಪ್ 10 ರಾಜ್ಯಗಳು: ರಾಜ್ಯಗಳ ಪೈಕಿ, ತಮಿಳುನಾಡು 8.3 ಲಕ್ಷ ಕೋಟಿ ರೂ.ಗಳೊಂದಿಗೆ ಅತಿ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿದೆ, ನಂತರ ಉತ್ತರ ಪ್ರದೇಶ 7.7 ಲಕ್ಷ ಕೋಟಿ ರೂ.ಗಳೊಂದಿಗೆ ಮತ್ತು ಮಹಾರಾಷ್ಟ್ರ 7.2 ಲಕ್ಷ ಕೋಟಿ ರೂ.ಗಳೊಂದಿಗೆ ನಂತರದ ಎರಡು ಸ್ಥಾನಗಳಲ್ಲಿವೆ. ಪಶ್ಚಿಮ ಬಂಗಾಳ 6.6 ಲಕ್ಷ ಕೋಟಿ ರೂ.ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಕರ್ನಾಟಕ 6.0 ಲಕ್ಷ ಕೋಟಿ ರೂ.ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ರಾಜಸ್ಥಾನ (5.6 ಲಕ್ಷ ಕೋಟಿ ರೂ.), ಆಂಧ್ರಪ್ರದೇಶ (4.9 ಲಕ್ಷ ಕೋಟಿ ರೂ.), ಗುಜರಾತ್ (4.7 ಲಕ್ಷ ಕೋಟಿ ರೂ.), ಕೇರಳ (4.3 ಲಕ್ಷ ಕೋಟಿ ರೂ.) ಮತ್ತು ಮಧ್ಯಪ್ರದೇಶ (4.2 ಲಕ್ಷ ಕೋಟಿ ರೂ.) ಅತಿ ಹೆಚ್ಚು ಸಾಲದ ಹೊರೆ ಹೊಂದಿರುವ ಟಾಪ್ 10 ರಾಜ್ಯಗಳ ಪಟ್ಟಿಯನ್ನು ಪೂರ್ಣಗೊಳಿಸಿವೆ.
ಕಳೆದ ಐದು ವರ್ಷಗಳಲ್ಲಿ ರಾಜ್ಯವಾರು ಸಾಲದ ಬೆಳವಣಿಗೆ:ಬಾಕಿ ಸಾಲದ ಬೆಳವಣಿಗೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನಾವಾಗಿದೆ. ಪ್ರಮುಖ ರಾಜ್ಯಗಳಲ್ಲಿ, ಮಧ್ಯಪ್ರದೇಶವು 114% ರಷ್ಟು ಅತಿ ಹೆಚ್ಚು ಹೆಚ್ಚಳವನ್ನು ದಾಖಲಿಸಿದ್ದು, 2019 ರಲ್ಲಿ 2 ಲಕ್ಷ ಕೋಟಿ ರೂ.ಗಳಿಂದ 2024 ರಲ್ಲಿ 4.2 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕರ್ನಾಟಕ ಮತ್ತು ತಮಿಳುನಾಡು ಕ್ರಮವಾಗಿ 109% ಮತ್ತು 108% ಹೆಚ್ಚಳದೊಂದಿಗೆ ನಂತರದ ಸ್ಥಾನದಲ್ಲಿವೆ. ಆಂಧ್ರಪ್ರದೇಶದ ಬಾಕಿ ಸಾಲವು 84% ರಷ್ಟು ಏರಿಕೆಯಾದರೆ, ರಾಜಸ್ಥಾನ ಮತ್ತು ಕೇರಳ ಕ್ರಮವಾಗಿ 80% ಮತ್ತು 76% ರಷ್ಟು ಏರಿಕೆ ಕಂಡಿವೆ. ಮಹಾರಾಷ್ಟ್ರವು 65% ರಷ್ಟು ಕಡಿಮೆ ಸಾಲದ ಬೆಳವಣಿಗೆಯನ್ನು ಹೊಂದಿದ್ದರೆ, ಉತ್ತರ ಪ್ರದೇಶವು 35% ರಷ್ಟು ಕಡಿಮೆ ಹೆಚ್ಚಳವನ್ನು ದಾಖಲಿಸಿದೆ.
ರಾಜ್ಯಗಳ ಜಿಡಿಪಿಗೆ ಸಂಬಂಧಿಸಿದಂತೆ ಸಾಲ (ಪ್ರಸ್ತುತ ಬೆಲೆಗಳಲ್ಲಿ ಜಿಎಸ್‌ಡಿಪಿ): ರಾಜ್ಯಗಳ ಮೇಲಿನ ಸಾಲದ ಹೊರೆಯನ್ನು ಅವುಗಳ ಒಟ್ಟು ರಾಜ್ಯ ದೇಶೀಯ ಉತ್ಪನ್ನಕ್ಕೆ (ಜಿಎಸ್‌ಡಿಪಿ) ಸಂಬಂಧಿಸಿದಂತೆ ಹೆಚ್ಚಾಗಿ ಅಳೆಯಲಾಗುತ್ತದೆ. ಪ್ರಮುಖ ರಾಜ್ಯಗಳಲ್ಲಿ, ಮಹಾರಾಷ್ಟ್ರವು 18% ರಷ್ಟು ಕಡಿಮೆ ಬಾಕಿ ಇರುವ ಸಾಲ-ಜಿಡಿಪಿ ಅನುಪಾತವನ್ನು ಹೊಂದಿದೆ, ನಂತರ ಕರ್ನಾಟಕವು 24% ರಷ್ಟಿದೆ. ಮತ್ತೊಂದೆಡೆ, ಪಶ್ಚಿಮ ಬಂಗಾಳವು 39% ರಷ್ಟು ಅತಿ ಹೆಚ್ಚು ಸಾಲ-ಜಿಡಿಪಿ ಅನುಪಾತವನ್ನು ಹೊಂದಿದೆ, ನಂತರ ಕೇರಳ ಮತ್ತು ರಾಜಸ್ಥಾನವು ತಲಾ 37% ರಷ್ಟಿದೆ. ತಮಿಳುನಾಡು ಮತ್ತು ಮಧ್ಯಪ್ರದೇಶವು 31% ರಷ್ಟಿದ್ದರೆ, ಆಂಧ್ರಪ್ರದೇಶವು 34% ರಷ್ಟಿದೆ. ಉತ್ತರ ಪ್ರದೇಶವು ತನ್ನ ಜಿಎಸ್‌ಡಿಪಿಯ 30% ರಷ್ಟಿದ್ದು, ತುಲನಾತ್ಮಕವಾಗಿ ಮಧ್ಯಮ ಸಾಲದ ಹೊರೆಯನ್ನು ಹೊಂದಿದೆ.
ಹಣಕಾಸು ವರ್ಷಾಂತ್ಯ: ಮಾರ್ಚ್‌ನಲ್ಲಿ ನಿಮ್ಮ ಪರ್ಸ್ ಮೇಲೆ ಪರಿಣಾಮ ಬೀರಲಿದೆ ಈ ಐದು ಬದಲಾವಣೆಗಳು!
ಮಹಾರಾಷ್ಟ್ರ ರಾಜ್ಯ ಜಿಡಿಪಿಯಲ್ಲಿ ಮುಂಚೂಣಿ: 2023-24ರಲ್ಲಿ ಮಹಾರಾಷ್ಟ್ರವು ಭಾರತದ ಆರ್ಥಿಕ ಶಕ್ತಿ ಕೇಂದ್ರವಾಗಿ ಮುಂದುವರೆದಿದ್ದು, ಪ್ರಸ್ತುತ ಬೆಲೆಯಲ್ಲಿ 40.44 ಲಕ್ಷ ಕೋಟಿ ರೂ.ಗಳಲ್ಲಿ ಅತಿ ಹೆಚ್ಚು ಜಿಡಿಪಿ ಹೊಂದಿದೆ. ತಮಿಳುನಾಡು 27.22 ಲಕ್ಷ ಕೋಟಿ ರೂ.ಗಳೊಂದಿಗೆ ನಂತರದ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ 25.48 ಲಕ್ಷ ಕೋಟಿ ರೂ.ಗಳೊಂದಿಗೆ ಮುಂದುವರಿದಿದೆ. ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ 25.01 ಲಕ್ಷ ಕೋಟಿ ರೂ. ಮತ್ತು 17.01 ಲಕ್ಷ ಕೋಟಿ ರೂ.ಗಳ ಜಿಡಿಪಿಯನ್ನು ಹೊಂದಿವೆ. 2024 ರ ಗುಜರಾತ್ ರಾಜ್ಯ ಜಿಡಿಪಿಯ ಡೇಟಾ ಲಭ್ಯವಿಲ್ಲ.
ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಎಸಿ ಅಳವಡಿಕೆ ರಹಸ್ಯ ರಿವೀಲ್; ಇದು ನೌಕರರು, ಗ್ರಾಹಕಸ್ನೇಹಿ ಕಾರ್ಯವಲ್ಲ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.