Repo Rate: ಇದು ಆರಂಭ; ಆರ್‌ಬಿಐ ರೆಪೊ ದರ ಇನ್ನೂ ಎಷ್ಟು ಬಾರಿ ಹೆಚ್ಚಿಸಲಿದೆ? ಗೋಲ್ಡ್‌ಮನ್ ಸ್ಯಾಚ್ಸ್ ಶಾಕಿಂಗ್‌ ಭವಿಷ್ಯ

Published : Oct 09, 2026, 04:19 PM IST
rbi repo rate

ಸಾರಾಂಶ

ಹಣದುಬ್ಬರ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಆರ್‌ಬಿಐ ಮುಂದಿನ ದಿನಗಳಲ್ಲಿ ಮತ್ತೆ 3 ಬಾರಿ ರೆಪೊ ದರ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಮುನ್ಸೂಚನೆ ನೀಡಿದೆ. ಇದರಿಂದ ಗೃಹ ಮತ್ತು ವಾಹನ ಸಾಲಗಳ ಇಎಂಐ ಹೆಚ್ಚಾಗಲಿದ್ದು, ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವೂ ಏರಿಕೆಯಾಗಲಿದೆ.

ಈಗಾಗಲೇ ಆರ್‌ಬಿಐ ರೇಪೋದರ ಹೆಚ್ಚಿಸಿದೆ, ಅಲ್ಲದೇ ಇದರ ಪ್ರಹಾರ ಇನ್ನು ಹಲವುಬಾರಿ ಆಗಲಿದೆ ಎಂದು ಗೋಲ್ಡಮನ್‌ ಸ್ಯಾಚ್ಸ್‌ ಹೇಳಿದೆ. ಅಲ್ಲದೇ ಎಷ್ಟು ಏರಿಕೆಯಾಗಬಹುದು ಎಂಬ ಹಿಂಟನ್ನು ಕೊಟ್ಟಿದ್ದಾರೆ. ಹಾಗಾದರೆ ಇದರ ಏರಿಕೆಗೆ ಕಾರಣವೇನು ಮತ್ತು ಜನಸಾಮನ್ಯರಿಗೆ ಎದುರಾಗುವ ಸಮಸ್ಯೆ ಏನು? ಗೋಲ್ಡ್‌ ಮ್ಯಾನ್ ಸ್ಯಾಚ್ ಹೇಳಿದ ಆ ಮಾತಿನ ಮರ್ಮವನ್ನು ತಿಳಿಯೋಣ ಬನ್ನಿ.

ರೆಪೊ ದರ ಏರಿಕೆಗೆ ಕಾರಣಗಳೇನು?

ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಆಗಸ್ಟ್‌ನಲ್ಲಿ 22 ತಿಂಗಳ ಗರಿಷ್ಠ ಮಟ್ಟವಾದ ಶೇ 4.82 ಕ್ಕೆ ತಲುಪಿದೆ. ಇದು ಆರ್‌ಬಿಐನ 4% ಮಧ್ಯಮ ಅವಧಿಯ ಗುರಿಗಿಂತ ಹೆಚ್ಚಾಗಿದೆ. ಇದಷ್ಟೆ ಅಲ್ಲ ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 100 ಡಾಲರ್‌ ದಾಟಿರುವುದು ಹಣದುಬ್ಬರ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಅದರೊಂದಿಗೆ 2027 ರಲ್ಲಿ 'ಎಲ್ ನಿನೊ' ಪ್ರಭಾವದಿಂದಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡು ಆಹಾರ ಪದಾರ್ಥಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ ಎಂದು ಕೆಲ ವರದಿಗಳು ಹೇಳಿವೆ. ಈ ನಿಟ್ಟಿನಲ್ಲಿ ಅಕ್ಟೋಬರ್ 7 ರ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ಬಿಐ ತನ್ನ ನಿಲುವನ್ನು 'ನ್ಯೂಟ್ರಲ್' ಇಂದ 'ಕ್ಯಾಲಿಬ್ರೇಟೆಡ್ ಟೈಟನಿಂಗ್' ಗೆ ಬದಲಾಯಿಸಿದೆ. ಅಂದರೆ ಮುಂದೆ ದರ ಕಡಿತದ ಸಾಧ್ಯತೆ ಇಲ್ಲ, ಏರಿಕೆಯ ಮುನ್ಸೂಚನೆ ಮಾತ್ರ ಇದೆ ಎಂದರ್ಥ.

ಗೋಲ್ಡಮನ್‌ ಸ್ಯಾಚ್ಸ್‌ ಹೇಳಿದ ಅರ್ಥವೇನು?

ಜಾಗತಿಕ ಹೂಡಿಕೆ ಬ್ಯಾಂಕಿಂಗ್ ಸಂಸ್ಥೆ ಗೋಲ್ಡ್‌ಮನ್ ಸ್ಯಾಚ್ಸ್ ಪ್ರಕಾರ, ಆರ್‌ಬಿಐ ಮುಂಬರುವ ದಿನಗಳಲ್ಲಿ ಇನ್ನೂ 3 ಬಾರಿ ರೆಪೊ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಲ್ಲದೇ ಮುಂದಿನ 3 ಹಂತಗಳಲ್ಲಿ ಒಟ್ಟು 75 ಬೇಸಿಸ್ ಪಾಯಿಂಟ್‌ಗಳಷ್ಟು (0.75%) ದರ ಏರಿಕೆಯಾಗಬಹುದು ಎಂದು ಗೋಲ್ಡ್‌ಮನ್ ಸ್ಯಾಚ್ಸ್‌ನ ಮುಖ್ಯ ಭಾರತೀಯ ಅರ್ಥಶಾಸ್ತ್ರಜ್ಞ ಶಂತನು ಸೇನ್‌ಗುಪ್ತಾ ಮುನ್ಸೂಚನೆ ನೀಡಿದ್ದಾರೆ. ಈ ಏರಿಕೆಯು ಡಿಸೆಂಬರ್, ಫೆಬ್ರವರಿ ಮತ್ತು ಏಪ್ರಿಲ್ ಅಥವಾ ಜೂನ್ 2027 ರೊಳಗೆ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ.

ಜನಸಾಮಾನ್ಯರು ಮತ್ತು ಆರ್ಥಿಕತೆಯ ಮೇಲಾಗುವ ಪರಿಣಾಮ!

ಈಗಾಗಲೇ ಆರ್‌ಬಿಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಹೆಚ್ಚಿಸಿ ಶೇ 5.50 ಕ್ಕೆ ತಂದಿದೆ. ಗೋಲ್ಡ್‌ಮನ್ ಸ್ಯಾಚ್ಸ್ ಹೇಳಿದಂತೆ ಇನ್ನೂ ಏರಿಕೆಯಾದರೆ ಹೋಮ್ ಲೋನ್, ಕಾರ್ ಲೋನ್ ಇಎಂಐಗಳು (EMI) ಗಣನೀಯವಾಗಿ ಹೆಚ್ಚಲಿವೆ ಅದರಲ್ಲಿ ಎರಡು ಮಾತಿಲ್ಲ. ಸಾಲದ ದರ ಹೆಚ್ಚಾಗುವ ಜತೆಗೆ, ಬ್ಯಾಂಕಲ್ಲಿ ಇಡುವ ಸ್ಥಿರ ಠೇವಣಿ ಮೇಲಿನ ಬಡ್ಡಿ ದರಗಳೂ ಹೆಚ್ಚಾಗುವುದರಿಂದ ಉಳಿತಾಯಗಾರರಿಗೆ ಲಾಭವಾಗಲಿದೆ ಎಂದು ಸ್ಯಾಚ್ಸ್‌ ಅಂದಾಜು ಮಾಡಿದೆ . ಸತತ ದರ ಏರಿಕೆಯ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆಯ ವೇಗ ಕುಂಠಿತವಾಗುವುದಿಲ್ಲ, ಜಿಡಿಪಿ (GDP) ಪ್ರಗತಿಯು ಶೇ 7 ರ ಆಸುಪಾಸಿನಲ್ಲಿ ಸುಸ್ಥಿರವಾಗಿರಲಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಆಶಾವಾದ ವ್ಯಕ್ತಪಡಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

3 ವರ್ಷ Oracleನಲ್ಲಿ ಕೆಲಸ… ಬಳಿಕ Uber ಡ್ರೈವರ್! ಇಂದು ಸ್ವಂತ ಕಂಪನಿ, 5 ಪಟ್ಟು ಹೆಚ್ಚು ಆದಾಯ!
ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್: 110 ಪ್ರಮುಖ ಔಷಧಗಳ ಬೆಲೆ ಶೀಘ್ರವೇ ಭಾರಿ ಇಳಿಕೆ!