
ನವದೆಹಲಿ(ಫೆ.07): ಕೇಂದ್ರದ ಮಧ್ಯಂತರ ಬಜೆಟ್ ತರುವಾಯ ಜನಸಾಮಾನ್ಯನಿಗೆ ಗಿಫ್ಟ್ ನೀಡುವ ಸರದಿ ಇದೀಗ ಆರ್‌ಬಿಐನದ್ದು.
ಹೌದು, ಸುಮಾರು 17 ತಿಂಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಶೇ. 6.25ಕ್ಕೆ ಕಡಿತಗೊಳಿಸಿದೆ.
ಇಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ವಿತ್ತೀಯ ನೀತಿ ಸಮಿತಿ, 6ನೇ ದ್ವೈಮಾಸಿಕ ವಿತ್ತೀಯ ಸಭೆಯಲ್ಲಿ ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ.
ಪರಿಣಾಮವಾಗಿ, ರಿವರ್ಸ್ ರೆಪೋ ದರ ಶೇ. 6.25 ರಿಂದ ಶೇ. 6ಕ್ಕೆ ಇಳಿದಿದ್ದು, ಕಾರು, ಮನೆ ಲೋನ್ ಅಗ್ಗವಾಗಲಿವೆ.
ಹಣದುಬ್ಬರವನ್ನು ಶೇ.4ರಷ್ಟು ನಿಭಾಯಿಸಲು ಆರ್‌ಬಿಐ ರೆಪೋ ದರ ಕಡಿಮೆ ಮಾಡಿದೆ. ಆದರೆ ಸಿಎಲ್‌ಆರ್ ಮತ್ತು ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ಕೊನೆಯ ಬಾರಿ ರೆಪೋ ದರ ಕಡಿತ 2017 ರ ಆಗಸ್ಟ್ ತಿಂಗಳಲ್ಲಿ ನಡೆದಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.