ಶೀಘ್ರದಲ್ಲಿ ಯುಪಿಐಗೆ ಕ್ರೆಡಿಟ್ ಕಾರ್ಡ್ ಲಿಂಕ್; ಮಾಹಿತಿ ನೀಡಿದ RBI ಗವರ್ನರ್

By Suvarna News  |  First Published Jun 8, 2022, 10:21 PM IST

*ಯುಪಿಐ ಪ್ಲಾಟ್ ಫಾರ್ಮ್ ಗೆ ಕ್ರೆಡಿಟ್ ಕಾರ್ಡ್ ಗಳನ್ನು ಲಿಂಕ್ ಮಾಡೋದ್ರಿಂದ ಬಳಕೆದಾರರಿಗೆ ಅನುಕೂಲ
*ಡಿಜಿಟಲ್ ಪಾವತಿಗಳ ವ್ಯಾಪ್ತಿ ಹೆಚ್ಚಳ
*ಪ್ರಸ್ತುತ ಉಳಿತಾಯ ಖಾತೆಗೆ ಬಳಕೆದಾರರ ಡೆಬಿಟ್ ಕಾರ್ಡ್ ಲಿಂಕ್ ಮಾಡೋ ಮೂಲಕ ಯುಪಿಐ ವಹಿವಾಟಿಗೆ ಅವಕಾಶ
 


ನವದೆಹಲಿ ( ಜೂ.8): ಯುಪಿಐ ಪ್ಲಾಟ್ ಫಾರ್ಮ್ ಗೆ (UPI platform) ಕ್ರೆಡಿಟ್ ಕಾರ್ಡ್ ಗಳನ್ನು (credit cards) ಜೋಡಣೆ (Link) ಮಾಡಲು ಅವಕಾಶ ನೀಡುವ ಪ್ರಸ್ತಾವನೆಯನ್ನು ಆರ್ ಬಿಐ (RBI) ಹೊಂದಿದೆ ಎಂದು ಗರ್ವನರ್ (Governor) ಶಕ್ತಿಕಾಂತ್ ದಾಸ್ ಬುಧವಾರ ತಿಳಿಸಿದ್ದಾರೆ. ಮೊದಲಿಗೆ ರುಪೇ ಕ್ರೆಡಿಟ್ ಕಾರ್ಡ್ ಗಳ ಮೂಲಕ ಈ ಕೆಲಸ ಪ್ರಾರಂಭಿಸೋದಾಗಿಯೂ ಅವರು ಮಾಹಿತಿ ನೀಡಿದ್ದಾರೆ. 

ರೆಪೋ ದರ (Repo rate) ಹೆಚ್ಚಳದ ಬಗ್ಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಗವರ್ನರ್ ಈ ವಿಷಯ ಪ್ರಸ್ತಾಪಿಸಿದ್ದಾರೆ. ಯುಪಿಐ  ಪ್ಲಾಟ್ ಫಾರ್ಮ್ ಗೆ ಕ್ರೆಡಿಟ್ ಕಾರ್ಡ್ ಗಳನ್ನು (Credit cards) ಲಿಂಕ್ (Link) ಮಾಡೋದ್ರಿಂದ ಬಳಕೆದಾರರಿಗೆ (Users) ಹೆಚ್ಚುವರಿ ಅನುಕೂಲ ಸಿಗಲಿದೆ. ಅಲ್ಲದೆ, ಡಿಜಿಟಲ್ ಪಾವತಿಗಳ (Digital payments) ವ್ಯಾಪ್ತಿಯನ್ನು ಹೆಚ್ಚಿಸಲಿದೆ ಎಂದು ದಾಸ್ ತಿಳಿಸಿದ್ದಾರೆ.

Tap to resize

Latest Videos

Repo Rate Hike:ನಿರೀಕ್ಷೆಯಂತೆ ಮತ್ತೆ ರೆಪೋ ದರ ಹೆಚ್ಚಿಸಿದ ಆರ್ ಬಿಐ; ಸಾಲಗಾರರಿಗೆ ಗಾಯದ ಮೇಲೆ ಬರೆ

ಪ್ರಸ್ತುತ ಉಳಿತಾಯ (Saving) ಅಥವಾ ಚಾಲ್ತಿ ಖಾತೆಗಳನ್ನು (Current accounts) ಬಳಕೆದಾರರ ಡೆಬಿಟ್ ಕಾರ್ಡ್ ಗೆ (Debit card) ಲಿಂಕ್ ಮಾಡುವ ಮೂಲಕ ಯುಪಿಐ ಆಧಾರಿತ ವಹಿವಾಟುಗಳಿಗೆ (Transaction) ಅವಕಾಶ ನೀಡಲಾಗಿದೆ. 'ಭಾರತದಲ್ಲಿ ಯುಪಿಐ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಪಾವತಿ ವಿಧಾನವಾಗಿದೆ. 26 ಕೋಟಿ ವಿಶಿಷ್ಟ ಬಳಕೆದಾರರು ಹಾಗೂ 5 ಕೋಟಿ ವ್ಯಾಪಾರಿಗಳನ್ನು ಈ ಫ್ಲಾಟ್ ಫಾರ್ಮ್ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಯುಪಿಐ ಪ್ರಗತಿಗೆ ಸರಿಸಮಾನದದ್ದು ಬೇರೆಯಿಲ್ಲ. ಹೀಗಾಗಿ ಬೇರೆ ರಾಷ್ಟ್ರಗಳು ಕೂಡ ಇಂಥದ್ದೇ ವಿಧಾನಗಳನ್ನು ತಮ್ಮ ರಾಷ್ಟ್ರಗಳಲ್ಲಿ ಅಳವಡಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ' ಎಂದು ದಾಸ್ ತಿಳಿಸಿದ್ದಾರೆ.
ಈ ವರ್ಷದ ಮೇನಲ್ಲಿ10.4ಲಕ್ಷ ಕೋಟಿ ರೂ. ಹಣವನ್ನು ಯುಪಿಐ (UPI) ಮೂಲಕ ವರ್ಗಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಅನೇಕ ಬ್ಯಾಂಕ್ (Bank) ಖಾತೆಗಳನ್ನು (Accounts) ಒಂದೇ ಮೊಬೈಲ್ ಅಪ್ಲಿಕೇಷನ್ ಗೆ ಲಿಂಕ್ (Link) ಮಾಡುವ ವ್ಯವಸ್ಥೆಯಾಗಿದೆ. ಒಟಿಪಿ (OTP) ಇಲ್ಲದೆ ಡೆಬಿಟ್ (Debit) ಅಥವಾ ಕ್ರೆಡಿಟ್ ಕಾರ್ಡ್ಗಳ (Credit cards) ಮೂಲಕ ಮಾಡುವ ಆವರ್ತಕ ಪಾವತಿಗಳ (recurring payments) ಮಿತಿಯನ್ನು ಪ್ರತಿ ವಹಿವಾಟಿಗೆ  5 ಸಾವಿರ ರೂ.ನಿಂದ 15 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಕೂಡ ಗವರ್ನರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ (ಜೂ.8) ರೆಪೋ ದರವನ್ನು (Repo Rate) 50 ಬೇಸಿಸ್‌ ಪಾಯಿಂಟ್ಸ್‌ ಏರಿಕೆ ಮಾಡಿದೆ. ಇದ್ರಿಂದ ರೆಪೋ ದರ  ಶೇ.4.40ರಿಂದ ಶೇ.4.90ಕ್ಕೆ ಏರಿಕೆಯಾಗಿದೆ.  ರೆಪೋ ದರವನ್ನು 50 ಮೂಲ ಅಂಕಗಳಷ್ಟು ಏರಿಕೆ ಮಾಡಲು ಹಣಕಾಸು ನೀತಿ ಸಮಿತಿ (MPC) ಸರ್ವಾನುಮತದ ನಿರ್ಣಯ ಕೈಗೊಂಡಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ (Inflation) ಹಾಗೂ ಪೂರೈಕೆ ವ್ಯವಸ್ಥೆಯಲ್ಲಿನ ವ್ಯತ್ಯಯದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಂಡಿರೋದಾಗಿ ಅವರು ತಿಳಿಸಿದ್ದಾರೆ. ಆರ್‌ಬಿಐನ (RBI) ಗವರ್ನರ್‌ ಶಕ್ತಿಕಾಂತ್‌ ನೇತೃತ್ವದ ಹಣಕಾಸು ನೀತಿ ಸಮಿತಿಯ ಮೂರು ದಿನಗಳ ದೈಮಾಸಿಕ ಸಭೆ ಸೋಮವಾರದಿಂದ (ಜೂ.6) ಬುಧವಾರದ (ಜೂ.8) ತನಕ ಒಟ್ಟು ಮೂರು ದಿನಗಳ ಕಾಲ ನಡೆದಿತ್ತು.

EPF Vs NPS: ನಿವೃತ್ತಿ ನಂತರದ ಬದುಕಿಗೆ ಯಾವುದು ಬೆಸ್ಟ್? ಇಪಿಎಫ್ ಅಥವಾ ಎನ್ ಪಿಎಸ್?

ಕಳೆದ ತಿಂಗಳಷ್ಟೇ (ಮೇ 4ರಂದು ) ಆರ್ ಬಿಐ ರೆಪೋ ದರವನ್ನು 40 ಮೂಲ ಅಂಕಗಳಷ್ಟು( ಶೇ.0.40ರಷ್ಟು) ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ಶಾಕ್‌ ನೀಡಿತ್ತು. ರೆಪೋ ದರ ಹೆಚ್ಚಳದ ಬೆನ್ನಲ್ಲೇ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬಹುತೇಕ ಬ್ಯಾಂಕುಗಳು ಈಗಾಗಲೇ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ. ಈಗ ಮತ್ತೊಮ್ಮೆ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗಲಿದೆ. ಇದ್ರಿಂದ ಗೃಹ, ವಾಹನ ಸಾಲಗಳ ಮೇಲಿನ ಇಎಂಐ ಕೂಡ ಹೆಚ್ಚಲಿದ್ದು, ಜನಸಾಮಾನ್ಯರ ಜೇಬಿನ ಮೇಲಿನ ಹೊರೆ ಮತ್ತಷ್ಟು ಹೆಚ್ಚಲಿದೆ.
 

click me!