Health Sector:ಆರೋಗ್ಯ ಕ್ಷೇತ್ರಕ್ಕೂ ಅದಾನಿ ಎಂಟ್ರಿ; ಮೆಟ್ರೋಪಾಲಿಸ್ ಖರೀದಿಗೆ ಅದಾನಿ, ಅಪೋಲೋ ಸಜ್ಜು

By Suvarna News  |  First Published Jun 8, 2022, 6:30 PM IST

*ಮೆಟ್ರೋಪಾಲಿಸ್ ಖರೀದಿಗೆ 1 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದ
*ಮೊದಲ ಬಾರಿಗೆ ಆರೋಗ್ಯ ಕ್ಷೇತ್ರ ಪ್ರವೇಶಿಸುತ್ತಿರುವ ಅದಾನಿ ಗ್ರೂಪ್
*19 ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಅದಾನಿ ಗ್ರೂಪ್


ನವದೆಹಲಿ (ಜೂ.7): ಅದಾನಿ ಗ್ರೂಪ್ (Adani Group) ಈಗ ಆರೋಗ್ಯ ಕ್ಷೇತ್ರಕ್ಕೂ (Health Sector) ಪದಾರ್ಪಣೆ ಮಾಡಲು ಸಜ್ಜಾಗಿದೆ. ಭಾರತದ (India) ಅತೀದೊಡ್ಡ ಖಾಸಗಿ ಆಸ್ಪತ್ರೆಗಳ ಸಮೂಹ ಅಪೋಲೋ ಹಾಸ್ಪಿಟಲ್ಸ್ ಎಂಟರ್ ಪ್ರೈಸರ್ಸ್ (Apollo Hospitals Enterprises) ಹಾಗೂ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ (Adani Group) ದೇಶಾದ್ಯಂತ ಪ್ರಯೋಗಾಲಯಗಳನ್ನು ಹೊಂದಿರುವ ಮೆಟ್ರೋಪಾಲಿಸ್ ಹೆಲ್ತ್ ಕೇರ್ ನ (Metropolis Healthcare) ಬಹುತೇಕ ಷೇರುಗಳನ್ನು ಖರೀದಿಸಲು ಮುಂದಾಗಿವೆ ಎಂದು ಹೇಳಲಾಗಿದೆ.

ಇದು 1 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದವಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದು ಆರೋಗ್ಯ ಸೇವಾಕ್ಷೇತ್ರಕ್ಕೆ ಅದಾನಿ ಗ್ರೂಪ್ಸ್ ನ ಮೊದಲ ಹೆಜ್ಜೆಯಾಗಿದೆ. ಆದರೆ, ಈ ಬಗ್ಗೆ  ಮೆಟ್ರೋಪಾಲಿಸ್ (Metropolis), ಅದಾನಿ ಗ್ರೂಪ್ ಹಾಗೂ ಅಪೊಲೋ (Apollo) ಆಸ್ಪತ್ರೆಗಳು (Hospitals) ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೆಟ್ರೋಪಾಲಿಸ್ ಪ್ರಯೋಗಾಲಯಗಳು ಹಾಗೂ ರೋಗಪತ್ತೆ ಕೇಂದ್ರಗಳನ್ನು ಹೊಂದಿದ್ದು, 1980ರಲ್ಲಿ ಮೊದಲ ಪ್ರಯೋಗಾಲಯದೊಂದಿಗೆ ಪ್ರಾರಂಭವಾಗಿತ್ತು. ಪ್ರಸ್ತುತ ಇದು ಪಶ್ಚಿಮ ಹಾಗೂ ದಕ್ಷಿಣ ಭಾರತ ಸೇರಿದಂತೆ 19 ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದೆ.

Tap to resize

Latest Videos

ಟೈಮ್‌ ವಿಶ್ವದ 100 ಪ್ರಭಾವಿಗಳಲ್ಲಿ ಭಾರತದ ಮೂವರು

ಆರೋಗ್ಯಸೇವಾ ಕ್ಷೇತ್ರಕ್ಕೆ ಕಾಲಿಡುತ್ತಿರೋದಾಗಿ ಮೇ 19ರಂದು ಅದಾನಿ ಗ್ರೂಪ್ (Adani Group) ಘೋಷಿಸಿತ್ತು. ಆರೋಗ್ಯ ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದ ಸೇವೆಗಳನ್ನು ಕಲ್ಪಿಸುವ ಅಂಗಸಂಸ್ಥೆಯೊಂದನ್ನು ಪ್ರಾರಂಭಿಸೋದಾಗಿಯೂ ತಿಳಿಸಿತ್ತು. 

ವೈದ್ಯಕೀಯ ಹಾಗೂ ರೋಗಪತ್ತೆ ಸೌಲಭ್ಯಗಳು ಸೇರಿದಂತೆ ಅದಾನಿ ಹೆಲ್ತ್ ವೆಂಚರ್ಸ್  (AHVL) ಆರೋಗ್ಯಸೇವೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲಿದೆ ಎಂದು ಕಂಪನಿ ತಿಳಿಸಿತ್ತು. 'ಅದಾನಿ ಎಂಟರ್ ಪ್ರೈಸರ್ಸ್ ಲಿ. ಅದಾನಿ ಹೆಲ್ತ್ ವೆಂಚರ್ಸ್ ಲಿ. ಸಹಸಂಸ್ಥೆಯನ್ನು 2022ರ ಮೇ 17ರಿಂದ ಪ್ರಾರಂಭಿಸಲಿದೆ. ಆರೋಗ್ಯ ಸೇವೆಗಳು, ವೈದ್ಯಕೀಯ ಹಾಗೂ ರೋಗಪತ್ತೆ ಸೌಲಭ್ಯಗಳು, ಆರೋಗ್ಯ ತಂತ್ರಜ್ಞಾನ ಸೌಲಭ್ಯಗಳು, ಸಂಶೋಧನಾ ಕೇಂದ್ರಗಳು ಸೇರಿದಂತೆ ಆರೋಗ್ಯ ಕಾಳಜಿ ಉದ್ಯಮಗಳನ್ನು ನಡೆಸಲು ಪ್ರತಿಯೊಂದಕ್ಕೂ 1,00,000 ಷೇರು ಬಂಡವಾಳ (Sare Capital) ಒದಗಿಸಲಾಗೋದು ಎಂದು ಎಕ್ಸ್ ಚೇಂಜ್ ಫೈಲಿಂಗ್ ನಲ್ಲಿ (Exchange Filing) ತಿಳಿಸಲಾಗಿದೆ.
2014ರಿಂದ ಅದಾನಿ ಗ್ರೂಪ್ ವಿವಿಧ ಕ್ಷೇತ್ರಗಳಿಗೆ ಪ್ರವೇಶಿಸಿದ್ದು, 30ಕ್ಕೂ ಹೆಚ್ಚು ಉದ್ಯಮಗಳನ್ನು ಸ್ವಾಧೀನಪಡಿಸಿಕೊಂಡಿದೆ. ಸಿಮೆಂಟ್ (Cement), ಬಂದರು (Port), ವಿಮಾನ ನಿಲ್ದಾಣ (Aiport) ಹಾಗೂ ವಿದ್ಯುತ್ (Electricity) ಸೇರಿದಂತೆ ಅನೇಕ ವಲಯಗಳಲ್ಲಿ ಈಗಾಗಲೇ ಮೇಲುಗೈ ಸಾಧಿಸಿದೆ.

ನೀತಿ ಆಯೋಗ (Niti Ayoga) ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ಪ್ರಕಾರ 2016ರಿಂದ ಭಾರತದ ಆರೋಗ್ಯ ಕ್ಷೇತ್ರದಲ್ಲಿ(Health Sector) ಸಮಗ್ರ ವಾರ್ಷಿಕ ಪ್ರಗತಿ ದರ (CAGR) ಸುಮಾರು ಶೇ.22ರಷ್ಟಿದೆ. ಇದೇ ದರದಲ್ಲಿ 2022ರ ವೇಳೆಗೆ 372 ಬಿಲಿಯನ್ ಡಾಲರ್ ಗುರಿ ತಲುಪುವ ನಿರೀಕ್ಷೆಯಿದೆ.

ವಿಶ್ವದ ಟಾಪ್-5 ಶ್ರೀಮಂತರಲ್ಲಿ ಗೌತಮ್ ಅದಾನಿ, ಈ ಬಿಲಿಯನೇರ್‌ ಕೂಡಾ ರೇಸ್‌ನಲ್ಲಿ ಹಿಂದೆ!

ಸಿಮೆಂಟ್ ಕ್ಷೇತ್ರಕ್ಕೂ ಪ್ರವೇಶ
ಭಾರತದ ಎಸಿಸಿ (ACC)  ಮತ್ತು ಅಂಬೂಜಾ ಸಿಮೆಂಟ್ಸ್‌ (Ambuja Ceents) ಕಂಪನಿಯಲ್ಲಿ ಸ್ವಿಜರ್ಲೆಂಡ್‌ (Switzerland)  ಮೂಲದ ಹೋಲ್‌ಸಿಮ್ಸ್‌ ಕಂಪನಿ ಹೊಂದಿದ್ದ ಪೂರ್ಣ ಪಾಲನ್ನು ಅದಾನಿ ಸಮೂಹ 10.5 ಶತಕೋಟಿ ಡಾಲರ್‌ (ಅಂದಾಜು 78000 ಕೋಟಿ ರು.)ಗೆ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಹಾಲಿ ಅಂಬೂಜಾ ಸಿಮೆಂಟ್ಸ್‌ನಲ್ಲಿ (Ambuja Cements) ಶೇ.63.19 ಮತ್ತು ಎಸಿಸಿಯಲ್ಲಿ (ACC) ಶೆ.54.53ರಷ್ಟುಪಾಲನ್ನು ಹೋಲ್‌ಸಿಮ್ಸ್‌ ಕಂಪನಿ ಹೊಂದಿತ್ತು. ಈ ಖರೀದಿಯೊಂದಿಗೆ ಅದಾನಿ ಕಂಪನಿ ಸಿಮೆಂಟ್‌ ಉತ್ಪಾದನಾ ವಲಯ ಪ್ರವೇಶ ಮಾಡಿದ್ದೂ, ಅಲ್ಲದೆ ಒಂದೇ ಬಾರಿಗೆ ದೇಶದ 2ನೇ ಅತಿದೊಡ್ಡ ಸಿಮೆಂಟ್‌ ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಲಿದೆ.

click me!