ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ಆರ್ ಬಿಐ ನಿಯಂತ್ರಿತ ನಿಷೇಧ
ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವಂತಿಲ್ಲ ಎಂದು ಸೂಚನೆ
ಐಟಿ ವ್ಯವಸ್ಥೆಯ ಸಮಗ್ರ ಸಿಸ್ಟಮ್ ಆಡಿಟ್ ಮಾಡುವಂತೆ ಆದೇಶ
ನವದೆಹಲಿ (ಮಾ.11): ದೇಶದ ಡಿಜಿಟಲ್ (Digital) ಜಗತ್ತಿನ ಪ್ರಮುಖ ಕಂಪನಿ, ಕ್ಯಾಶ್ ಲೆಸ್ ಪೇಮೆಂಟ್ ಅನ್ನು (Cashless Payment) ಇನ್ನಷ್ಟು ಸರಳವಾಗಿಸಿದ ಪೇಟಿಎಂ (Paytm) ಕಂಪನಿಯ ಪೇಮೆಂಟ್ ಬ್ಯಾಂಕ್ ಗೆ (Payment Bank) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ( Reserve Bank of India) ನಿಷೇಧ (Ban)ಹೇರಿದೆ. ಮುಂದಿನ ಆದೇಶದವರೆಗೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ಯಾವುದೇ ಹೊಸ ಗ್ರಾಹಕರನ್ನು ತನ್ನ ಸೇವೆಗೆ ಸೇರಿಸಿಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದೆ.
"ಬ್ಯಾಂಕಿಂಗ್ ರೆಗ್ಯುಲೇಶನ್ ಆಕ್ಟ್, 1949 ರ ಸೆಕ್ಷನ್ 35 ಎ ಅಡಿಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ಕ್ರಮ" ಎಂದು ತನ್ನ ಸುತ್ತೋಲೆಯ ಲಿಂಕ್ ಅನ್ನು ಹೊಂದಿರುವ ಪ್ರಕಟಣೆಯಲ್ಲಿ ಆರ್ ಬಿಐ ಟ್ವಿಟರ್ ನಲ್ಲಿ ಪ್ರಕಟಿಸಿದೆ. ತನ್ನ ಐಟಿ ವ್ಯವಸ್ಥೆಯ ಸಮಗ್ರ ಸಿಸ್ಟಮ್ ಆಡಿಟ್ ನಡೆಸಲು ಐಟಿ ಆಡಿಟ್ (IT Audit) ಸಂಸ್ಥೆಯನ್ನು ನೇಮಿಸುವಂತೆ ಬ್ಯಾಂಕ್‌ಗೆ ಸೂಚಿಸಲಾಗಿದೆ ಎಂದು ಆರ್‌ಬಿಐ (RBI) ಪ್ರಕಟಣೆಯಲ್ಲಿ ತಿಳಿಸಿದೆ.
"ಪೇಟಿಎಂ ಪೇಮೆಂಟ್ ಬ್ಯಾಂಕ್ ನಿಂದ ಹೊಸ ಗ್ರಾಹಕರನ್ನು ಸೇರಿಕೊಳ್ಳುವುದು, ಐಟಿ ಲೆಕ್ಕ ಪರಿಶೋಧಕರ ವರದಿಯನ್ನು ಪರಿಶೀಲಿಸಿದ ನಂತರ ಆರ್ ಬಿಐ ನೀಡುವ ನಿರ್ದಿಷ್ಟ ಅನುಮತಿಗೆ ಒಳಪಟ್ಟಿರುತ್ತದೆ. ಈ ಕ್ರಮವು ಬ್ಯಾಂಕಿನಲ್ಲಿ ಗಮನಿಸಿದ ಕೆಲವು ವಸ್ತು ಮೇಲ್ವಿಚಾರಣಾ ಕಾಳಜಿಗಳನ್ನು ಆಧರಿಸಿದೆ" ಎಂದು ಆರ್ ಬಿಐ ಪ್ರಕಟಣೆಯಲ್ಲಿ ಹೇಳಿದೆ.
Action against Paytm Payments Bank Ltd under section 35 A of the Banking Regulation Act, 1949https://t.co/tqWfwt7mT3
— ReserveBankOfIndia (@RBI)
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, 2017ರ ಮೇ 23 ರಂದು ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭ ಮಾಡಿತ್ತು. ಮಾರ್ಚ್ 9 ರಂದು ಕಂಪನಿ ಸಂಸ್ಥಾಪಕ ವಿಜಯ್ ಶೇಖರ್ ಶರ್ಮ (Vijay Shekar Sharma), ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೂನ್ ವೇಳೆಗೆ ಸಣ್ಣ ಹಣಕಾಸು ಬ್ಯಾಂಕ್ (ಎಸ್ಎಫ್ ಬಿ) ಪರವಾನಿಗಿಗಾಗಿ ಆರ್ ಬಿಐಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ ಅಧ್ಯಕ್ಚ ವಿಜಯ್ ಶೇಖರ್ ವರ್ಮಾ, ಕಂಪನಿಯಲ್ಲಿ ಶೇ. 51ರಷ್ಟು ಪಾಲನ್ನು ಹೊಂದಿದ್ದಾರೆ. ಆರ್ ಬಿಐ ಕ್ರಮವನ್ನು ಕೈಗೊಳ್ಳಲು ನಿಖರವಾದ ಕಾರಣಗಳು ಯಾವುವು ಎಂಬುದು ಸ್ಪಷ್ಟವಾಗಿಲ್ಲ. ಬ್ಯಾಂಕಿನಲ್ಲಿ ಗಮನಿಸಿದ ಕೆಲವು ವಸ್ತು ಮೇಲ್ವಿಚಾರಣಾ ಕಾಳಜಿಗಳನ್ನು ಆಧರಿಸಿ ಈ ಕ್ರಮವನ್ನು ಮಾಡಲಾಗಿದೆ ಎಂದು ಆರ್‌ಬಿಐ ಹೇಳಿದೆ.
SBI Interest Rate: ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ; ಎಷ್ಟು ಮೊತ್ತದ FDಗೆ ಅನ್ವಯ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಕಂಪನಿಯು 100 ಮಿಲಿಯನ್ ಕೆವೈಸಿ ಗ್ರಾಹಕರನ್ನು ಹೊಂದಿದೆ ಮತ್ತು ಇದು ಪ್ರತಿ ತಿಂಗಳಿನಲ್ಲಿ 0.4 ಮಿಲಿಯನ್ ಬಳಕೆದಾರರನ್ನು ಸೇರಿಸುತ್ತಿದೆ. "ನಾವು 8 ಮಿಲಿಯನ್‌ಗಿಂತಲೂ ಹೆಚ್ಚು ಫಾಸ್ಟ್‌ಟ್ಯಾಗ್ ಘಟಕಗಳನ್ನು ನೀಡುವುದರೊಂದಿಗೆ ಫಾಸ್ಟ್‌ಟ್ಯಾಗ್‌ನ ಅತಿದೊಡ್ಡ ವಿತರಕರಾಗಿದ್ದೇವೆ" ಎಂದು ವೆಬ್‌ಸೈಟ್ ತಿಳಿಸಿದೆ. ಡಿಸೆಂಬರ್ 9 ರಂದು, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1934 ರ ಎರಡನೇ ಶೆಡ್ಯೂಲ್‌ನಲ್ಲಿ ಸೇರಿಸಲಾಗಿದೆ ಎಂದು ಹೇಳಿದೆ. ಇದು ಹೊಸ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಸಾಧ್ಯವಾಗಿಸಿತು ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಡ್ರೈವರ್ ಆಗಿ ಬಂದ ಊಬರ್ ಸಿಇಒ :ಕ್ಯಾಬ್ ಬುಕ್ ಮಾಡಿದಾಕೆಗೆ ಅಚ್ಚರಿ
ಇವುಗಳಲ್ಲಿ ಸರ್ಕಾರ ಮತ್ತು ಇತರ ದೊಡ್ಡ ನಿಗಮಗಳು ನೀಡಲಾದ ಪ್ರಸ್ತಾವನೆಗಳಿಗೆ ವಿನಂತಿ (RFP), ಪ್ರಾಥಮಿಕ ಹರಾಜುಗಳು, ಸ್ಥಿರ ದರ ಮತ್ತು ವೇರಿಯಬಲ್ ದರದ ರೆಪೊಗಳು ಮತ್ತು ರಿವರ್ಸ್ ರೆಪೊಗಳು, ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿಯಲ್ಲಿ ಭಾಗವಹಿಸುವಿಕೆಯೊಂದಿಗೆ ಸೇರಿವೆ ಎಂದು ಕಂಪನಿ ಹೇಳಿದೆ. ಅಕ್ಟೋಬರ್, 2021 ರಲ್ಲಿ, ಆರ್ ಬಿಐ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೇಟಿಎಂ ಪಾವತಿಗಳ ಬ್ಯಾಂಕ್‌ಗೆ ವಿತ್ತೀಯ ದಂಡವನ್ನು ವಿಧಿಸಿತ್ತು. ಪಿಪಿಬಿಎಲ್ ವಾಸ್ತವಿಕ ಸ್ಥಿತಿಯನ್ನು ಪ್ರತಿಬಿಂಬಿಸದ ಮಾಹಿತಿಯನ್ನು ಸಲ್ಲಿಸಿದೆ ಎಂದು ಆರ್ ಬಿಐ ಗಮನಿಸಿದೆ. ನಂತರ, ಆರ್‌ಬಿಐ ಪಿಪಿಬಿಎಲ್‌ಗೆ ನೋಟಿಸ್ ಜಾರಿ ಮಾಡಿ ದಂಡ ವಿಧಿಸಿತ್ತು,