ಆರ್‌ಬಿಐ ಸಾಲ ನೀತಿ ಪ್ರಕಟ: ರೆಫೊ ದರ ಶೇ. 0.50 ಹೆಚ್ಚಳ

By Kannadaprabha NewsFirst Published Sep 30, 2022, 9:48 AM IST
Highlights

ಭಾರತೀಯ ರಿಸರ್ವ್ ಬ್ಯಾಂಕ್‌ ಶುಕ್ರವಾರ ತನ್ನ ದ್ವೈಮಾಸಿಕ ಹಣಕಾಸು ನೀತಿ ಪ್ರಕಟ ಮಾಡಲಿದ್ದು, ಸಾಲದ ಮೇಲಿನ ಬಡ್ಡಿದರಗಳನ್ನು ಶೇ.0.5ರಷ್ಟುಹೆಚ್ಚಿಸುವ ಸಾಧ್ಯತೆ ಇದೆ.

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌  ಇಂದು  ತನ್ನ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದೆ. ಇದರಂತೆ, ಸಾಲದ ಮೇಲಿನ ಬಡ್ಡಿದರಗಳನ್ನು ಶೇ.0.5ರಷ್ಟು ಹೆಚ್ಚಿಸಲಾಗಿದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಅಮೆರಿಕ ಸೇರಿದಂತೆ ಬಹುತೇಕ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಈಗಾಗಲೇ ಹಲವು ಸುತ್ತಿನಲ್ಲಿ ಬಡ್ಡಿದರವನ್ನು ಶೇ.0.5ರಷ್ಟು ಹೆಚ್ಚಳ ಮಾಡಿವೆ. ಹೀಗಾಗಿ ಆರ್‌ಬಿಐ ಕೂಡಾ ಅದೇ ಪ್ರಮಾಣದಲ್ಲಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಈ ಹಿಂದೆ ವಿಶ್ಲೇಷಿಸಿದ್ದರು. 

ತಜ್ಞರ ವಿಶ್ಲೇಷಣೆ ಈಗ ನಿಜವಾಗಿದ್ದು,  ರಿಸರ್ವ್ ಬ್ಯಾಂಕ್‌ ಸಾಲದ ಮೇಲಿನ ಬಡ್ಡಿದರಗಳನ್ನು ಶೇ.0.5ರಷ್ಟು ಹೆಚ್ಚಿಸಿದೆ. ಈ ಹಿಂದೆ ಜೂನ್‌ ಮತ್ತು ಆಗಸ್ಟ್‌ನಲ್ಲಿ ಪ್ರಕಟಿಸಿದ್ದ ಸಾಲ ನೀತಿಯಲ್ಲೂ ಆರ್‌ಬಿಐ, ಸಾಲದ ಮೇಲಿನ ಬಡ್ಡಿದರಗಳನ್ನು ಶೇ.0.5ರಷ್ಟು ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್‌ ನೀಡಿತ್ತು. ಈ ಶಾಕ್‌ ಟ್ರೀಟ್ಮೆಂಟ್‌ ಈ ಬಾರಿಯೂ ಮುಂದುವರೆದಿದೆ.

ಕಳೆದ ಮೇ ತಿಂಗಳ ಬಳಿಕ ಆರ್‌ಬಿಐ ಸಾಲದ (RBI Loan) ಮೇಲಿನ ಬಡ್ಡಿದರವನ್ನು ಶೇ.1.40 ರಷ್ಟು ಹೆಚ್ಚಳ ಮಾಡಿದೆ. ಶೇ.4 ರಷ್ಟಿದ್ದ ರೆಪೋ ದರವನ್ನು (Repo rate) ಆರ್‌ಬಿಐ (RBI) ಶೇ.5.4ರವರೆಗೆ ಹೆಚ್ಚಳ ಮಾಡಿತ್ತು. ಇಂದು ಅದನ್ನು ಶೇ.5.9ಕ್ಕೆ ಹೆಚ್ಚಿಸಿದೆ.

click me!