ಥ್ಯಾಂಕ್ಸ್ ಆರ್‌ಬಿಐ: ರೆಪೋದರ ಬದಲಿಲ್ಲ, ಮನೆ ಕಟ್ಟಲು ಅಡ್ಡಿ ಇಲ್ಲ!

Published : Dec 05, 2018, 05:57 PM IST
ಥ್ಯಾಂಕ್ಸ್ ಆರ್‌ಬಿಐ: ರೆಪೋದರ ಬದಲಿಲ್ಲ, ಮನೆ ಕಟ್ಟಲು ಅಡ್ಡಿ ಇಲ್ಲ!

ಸಾರಾಂಶ

ಹಣಕಾಸು ನೀತಿ ಪ್ರಕಟಣೆ ಹೊರಡಿಸಿದ ಆರ್‌ಬಿಐ! ರೆಪೋ ದರದರಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡ ಆರ್‌ಬಿಐ! ಶೇ.6.5ರಷ್ಟು ರೆಪೋ ದರ ಕಾಯ್ದುಕೊಂಡ ಆರ್‌ಬಿಐ! ರಿವರ್ಸ್ ರೆಪೋ ದರ ಕೂಡ ಶೇ. 6.25 ರಷ್ಟು ಮುಂದುವರಿಕೆ

ಮುಂಬೈ(ಡಿ.05): ಆರ್‌ಬಿಐ ತನ್ನ ಹಣಕಾಸು ನೀತಿಯ ಪ್ರಕಟಣೆ ಹೊರಡಿಸಿದ್ದು, ಮಾರುಕಟ್ಟೆಯ ನಿರೀಕ್ಷಣೆಯಂತೆಯೇ ರೆಪೋ ದರವನ್ನು ಯಥಾ ಸ್ಥಿತಿಯಲ್ಲಿ ಕಾಪಾಡಿಕೊಳ್ಳಲಾಗಿದೆ. 

ಈ ಹಿಂದಿನ ಪ್ರಕಟಣೆಯಂತೆ ರೆಪೋ ದರ ಶೇ.6.5 ರಷ್ಟಿದ್ದು, ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಲ್ಲದೆ ರಿವರ್ಸ್ ರೆಪೋ ದರ ಕೂಡ ಶೇ. 6.25 ರಷ್ಟರಲ್ಲಿ ಮುಂದುವರೆದಿದೆ.

ಎರಡು ಬಾರಿಯ ಸತತ ರೆಪೋ ದರ ಏರಿಕೆಯ ಬಳಿಕ ಆರ್‌ಬಿಐ ಈ ಬಾರಿ ಯಾವುದೇ ದರ ಏರಿಕೆ ಮಾಡಿಲ್ಲ. ರೆಪೋ ದರ ಏರಿಕೆ ಮಾಡಬೇಕೋ ಅಥವಾ ಬೇಡವೋ ಎಂಬುದರ ಕುರಿತು ಈ ಹಿಂದೆ ನಡೆದಿದ್ದ ಸಭೆಯಲ್ಲಿ ವಿತ್ತೀಯ ನೀತಿ ಸಮಿತಿ ಸದಸ್ಯರ ಪೈಕಿ, ಐವರು ಸದಸ್ಯರು ರೆಪೋ ದರ ಯಥಾಸ್ಥಿತಿ ಕಾಪಾಡಿಕೊಳ್ಳುವ ಪರ ಮತ ಹಾಕಿದ್ದರು ಎನ್ನಲಾಗಿದೆ.

ಇನ್ನು ರೆಪೋ ದರ ಬದಲಾವಣೆ ಮಾಡದಿರುವುದರಿಂದ ಗೃಹಸಾಲ ಕೂಡ ಯಥಾ ಸ್ಥಿತಿ ಕಾಪಾಡಿಕೊಳ್ಳಲಿದ್ದು, ಮನೆ ಕೊಳ್ಳುವವರಿಗೆ ಇದು ನಿಜಕ್ಕೂ ಸಿಹಿ ಸುದ್ದಿ ಎಂದೇ ಹೇಳಬೇಕಾಗುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!