SBI ಗ್ರಾಹಕರಿಗೆ ಭರ್ಜರಿ ಆಫರ್ : 5 ಲೀಟರ್ ಪೆಟ್ರೋಲ್ ಉಚಿತ

Published : Dec 05, 2018, 04:00 PM ISTUpdated : Dec 05, 2018, 04:13 PM IST
SBI ಗ್ರಾಹಕರಿಗೆ ಭರ್ಜರಿ ಆಫರ್ :  5 ಲೀಟರ್ ಪೆಟ್ರೋಲ್ ಉಚಿತ

ಸಾರಾಂಶ

ಎಸ್ ಬಿಐ ಗ್ರಾಹಕರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ನಿಮಗೆ ಎಸ್ ಬಿಐ ಬ್ಯಾಂಕ್ ಆಫರ್ ಒಂದನ್ನು ನೀಡುತ್ತಿದ್ದು, 100 ರು.ಗೆ ತೈಲ ಕೊಂಡಲ್ಲಿ 5 ಲೀಟರ್ ಪೆಟ್ರೋಲ್  ಉಚಿತವಾಗಿ ದೊರೆಯಲಿದೆ. 

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ವೊಂದನ್ನು ನೀಡಿದೆ. ತನ್ನ ಗ್ರಾಹಕರಿಗೆಲ್ಲಾ ಉಚಿತವಾಗಿ 5 ಲೀಟರ್ ಪೆಟ್ರೋಲ್ ನೀಡಲು ಸಿದ್ಧವಾಗಿದೆ! ಗ್ರಾಹಕರು 100 ರು. ಪೆಟ್ರೋಲ್ ಖರೀದಿಸಿದರೆ 5 ಲೀಟರ್ ಉಚಿತ ಪೆಟ್ರೋಲ್ ಪಡೆಯಬಹುದು!

ತನ್ನ ಟ್ವಿಟ್ಟರ್ ಅಕೌಂಟ್‌ನಲ್ಲಿ ಈ ಬಗ್ಗೆ ಪ್ರಕಟಿಸಿದ ಎಸ್‌ಬಿಐ ಬೀಮ್ ಪೇ ಆ್ಯಪ್ ಮೂಲಕ ಪೇ ಮಾಡಿ 100 ರು. ಪೆಟ್ರೋಲ್ ಕೊಂಡಲ್ಲಿ ಈ ಆಫರ್ ದೊರೆಯಲಿದೆ. ಡಿಸೆಂಬರ್ 15ರವರೆಗೆ ಈ ಭರ್ಜರಿ ಆಫರ್‌ಗೆ ಸಮಯಾವಕಾಶ ಇರಲಿದೆ.  ಈ ಹಿಂದೆ ನವೆಂಬರ್ 23ರವರೆಗೆ ಇದ್ದ ಆಫರ್‌ನ ಸಮಯಾವಕಾಶವನ್ನೂ ವಿಸ್ತರಿಸಲಾಗಿದೆ, ಎಂದು ಹೇಳಿದೆ. 

ಉಚಿತವಾಗಿ ಪೆಟ್ರೋಲ್ ಪಡೆಯಲು ನೀವೇನು ಮಾಡಬೇಕು?

ಹಂತ  1 : ನೀವು ಇಂಡಿಯನ್ ಆಯಿಲ್ ರೀಟೇಲರ್‌ಗಳಿಂದ ಪೆಟ್ರೋಲ್ ಕೊಳ್ಳಬೇಕು. ಭೀಮ್ ಯುಪಿಐ ಮೂಲಕ ಹಣ ಪೇ ಮಾಡಬೇಕು. ಕನಿಷ್ಠ 100 ರೂ. ವ್ಯವಹರಿಸಬೇಕು.

ಹಂತ 2 : ಕೊಂಡ ಬಳಿಕ 9222222084 ಸಂಖ್ಯೆಗೆ  <UPI Reference No. (12-Digit)> <DDMM>  ಟೈಪ್ ಮಾಡಿ ಸಂದೇಶ ಕಳುಹಿಸಿ.  ಈ ಸಂದೇಶಕ್ಕೆ ಚಾರ್ಜ್ ಅನ್ವಯವಾಗುತ್ತದೆ. 

ಅಲ್ಲದೇ ಕಷ್ಟಮರ್ ಕೇರ್ ಸಂಖ್ಯೆ 1800 22 8888ಕ್ಕೆ ಕರೆ ಮಾಡಬಹುದು. ಇದು ಟೋಲ್ ಫ್ರೀಯಾಗಿರುತ್ತದೆ. ಅಕ್ಟೋಬರ್ 15ರಿಂದಲೇ ಈ ಯೋಜನೆ ಆರಂಭವಾಗಿದ್ದು,  ಡಿಸೆಂಬರ್ 15ಕ್ಕೆ ಕೊನೆಯಾಗಲಿದೆ. ಡಿಸೆಂಬರ್ 15ರ ಮಧ್ಯರಾತ್ರಿವರೆಗೂ ಆಫರ್ ಮುಂದುವರಿಯಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?