ಸರ್ಕಾರದಿಂದ 50 ಪರ್ಸೆಂಟ್ ಹಣ ಪಡೆದು ಈ ಬ್ಯುಸಿನೆಸ್ ಆರಂಭಿಸಿದ್ರೆ ತಿಂಗಳಿಗೆ 3 ಲಕ್ಷ ರೂ ಸಂಪಾದನೆ

Published : Feb 02, 2025, 02:29 PM IST
ಸರ್ಕಾರದಿಂದ 50 ಪರ್ಸೆಂಟ್ ಹಣ ಪಡೆದು ಈ ಬ್ಯುಸಿನೆಸ್ ಆರಂಭಿಸಿದ್ರೆ ತಿಂಗಳಿಗೆ 3 ಲಕ್ಷ ರೂ ಸಂಪಾದನೆ

ಸಾರಾಂಶ

ಸರ್ಕಾರದಿಂದ 50% ಸಹಾಯಧನ ಪಡೆದು ಮುತ್ತು ಕೃಷಿ ಆರಂಭಿಸಿ ತಿಂಗಳಿಗೆ 3 ಲಕ್ಷ ರೂ.ವರೆಗೆ ಗಳಿಸಬಹುದು. ಈ ವ್ಯವಹಾರಕ್ಕೆ ಕಡಿಮೆ ಬಂಡವಾಳ ಮತ್ತು ತರಬೇತಿಯ ಅವಶ್ಯಕತೆಯಿದೆ.

ರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ತಮ್ಮದೇ ಆದ ಸ್ವಂತ ವ್ಯವಹಾರ ಮಾಡಬೇಕು ಮತ್ತು ಯಾರ ಅಡಿಯಲ್ಲಿಯೂ ಇರಬಾರದು ಎಂದು ಕನಸು ಕಾಣುತ್ತಿರುತ್ತಾರೆ. ಆದ್ರೆ ಯಾವ ವ್ಯವಹಾರ ಆರಂಭಿಸಬೇಕು ಎಂಬ ಗೊಂದಲದ ಜೊತೆಯಲ್ಲಿ ಬಂಡವಾಳದ ಕೊರತೆಯನ್ನು ಎದುರಿಸುತ್ತಾರೆ. ಆದ್ರೆ ಇಂದು ಹೊಸ ಉದ್ದಿಮೆ ಆರಂಭಿಸುವ ಯುವ ಕನಸುಗಳಿಗೆ ಸರ್ಕಾರ ರೆಕ್ಕೆ ಕಟ್ಟುವ ಕೆಲಸ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಯಡಿಯಲ್ಲಿ ಯುವ ಸಮುದಾಯಕ್ಕೆ ಆರ್ಥಿಕ ನೆರವನ್ನು ನೀಡುತ್ತದೆ. ಇಂದು ನಾವು ಹೇಳುತ್ತಿರುವ ಈ ಬ್ಯುಸಿನೆಸ್ ಆರಂಭಿಸಲು ಸರ್ಕಾರ ನಿಮಗೆ ಶೇ.50ರಷ್ಟು ಬಂಡವಾಳವನ್ನು ಸಾಲದ ರೂಪದಲ್ಲಿ ನೀಡುತ್ತದೆ. ಒಮ್ಮೆ ಈ ಬ್ಯುಸಿನೆಸ್ ಆರಂಭಿಸಿದರೆ ತಿಂಗಳಿಗೆ 3 ಲಕ್ಷ ರೂಪಾಯಿವರೆಗೂ ಸಂಪಾದನೆ ಮಾಡಬಹುದು. 

ಈ ಬ್ಯುಸಿನೆಸ್ ಆರಂಭಿಸಲು ಯಾವುದೇ ವಿಶೇಷ ತರಬೇತಿ ಬೇಕಾಗಲ್ಲ. ನೀವು ಉದ್ಯೋಗದ ಹೊರತಾಗಿ ಹೆಚ್ಚುವರಿ ಆದಾಯವನ್ನು ಗಳಿಸಲು ಪ್ಲಾನ್ ಮಾಡಿಕೊಂಡಿದ್ದರೆ, ಈ ವ್ಯವಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರವು ಸ್ಟಾರ್ಟ್‌ಅಪ್‌ಗಳಿಗೆ ನೀಡುವ 50 ಪ್ರತಿಶತ ಸಬ್ಸಿಡಿಯ ಲಾಭ ಪಡೆದುಕೊಳ್ಳೋದರಿಂದ ಯಾವುದೇ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ. 

ಮುತ್ತು ಕೃಷಿಯಲ್ಲಿ ತಿಂಗಳಿಗೆ 2.5 ರಿಂದ 3 ಲಕ್ಷ ರೂಪಾಯಿ ಹಣ ಸಂಪಾದನೆ ಮಾಡಬಹುದು. ಇದಕ್ಕಾಗಿ ನೀವು ಸಣ್ಣದಾದ ಕೊಳವೊಂದನ್ನು ನಿರ್ಮಾಣ ಮಾಡಿಕೊಳ್ಳಬೇಕಾಗುತ್ತದೆ. ಮುತ್ತು ಕೃಷಿ ಆರಂಭಿಸಲು 25 ರಿಂದ 30 ಸಾವಿರ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಮೀನುಗಾರರರಿಂದ ಚಿಪ್ಪುಗಳನ್ನು ಖರೀದಿಸಿ, ಮುತ್ತು ಕೃಷಿ ಆರಂಭಿಸಬಹುದಾಗಿದೆ. ಈ ಕೃಷಿಗೆ ಸಂಬಂಧಿಸಿದ ತರಬೇತಿಯನ್ನು  ಹೋಶಂಗಾಬಾದ್ ಮತ್ತು ಮುಂಬೈನಲ್ಲಿ ನೀಡಲಾಗುತ್ತದೆ. ಬೇಕಿದ್ದರೆ ಈ ತರಬೇತಿಯನ್ನು ಪಡೆದುಕೊಳ್ಳಬಹುದು. ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಈ ಕೃಷಿಗೆ ಬೇಕಾದ ಚಿಪ್ಪುಗಳನ್ನು ಮಾರಾಟ ಮಾಡಲಾಗುತ್ತದೆ. 

ಒಂದು ಚಿಪ್ಪಿನಿಂದ 2 ಮುತ್ತುಗಳು ರಚನೆಯಾಗುತ್ತವೆ. ಮಾರುಕಟ್ಟೆಯಲ್ಲಿ ಒಂದು ಮುತ್ತು 150 ರೂ.ಯಿಂದ 200 ರೂ.ಗಳವರೆಗೆ ಮಾರಾಟವಾಗುತ್ತದೆ. ಮುತ್ತಗಳ ಗುಣಮಟ್ಟ ಉತ್ತಮವಾಗಿದ್ರೆ ಬೆಲೆಯನ್ನು ಏರಿಕೆ ಮಾಡಬಹುದು. ಒಂದು ವೇಳೆ ಮುತ್ತುಗಳು ಒಡೆದ್ರೆ ಅವುಗಳನ್ನು ಸಹ ಮಾರಾಟ ಮಾಡಬಹುದು. ಅಲಂಕಾರಿಕ ವಸ್ತುಗಳಲ್ಲಿ ಒಡೆದ ಮುತ್ತುಗಳನ್ನು ಬಳಕೆ ಮಾಡಲಾಗುತ್ತದೆ. ಆದ್ದರಿಂದ ನಿಮಗೆ ಯಾವುದೇ  ನಷ್ಟದ ಅಪಾಯವೂ ಈ ಕೃಷಿಯಲ್ಲಿರಲ್ಲ. 

ಇದನ್ನೂ ಓದಿ: 1 ಎಕರೆ ಖಾಲಿ ಜಾಗ ಇದೆಯಾ? ಈ ಬೆಳೆ ಬೆಳೆಯಿರಿ, ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆಗಿಂತ ಹೆಚ್ಚು ಲಾಭ!

ಒಂದು ಎಕರೆ ವಿಸ್ತೀರ್ಣದ ಕೆರೆಗೆ 25 ಸಾವಿರ ಮತ್ಸ್ಯಗಳನ್ನು ಹಾಕಿದರೆ ಸುಮಾರು 6 ರಿಂದ 8 ಲಕ್ಷ ರೂ ಲಾಭಗಳಿಸಹುದು. ಒಂದು ವೇಳೆ ಮುತ್ತುಗಳು ರೂಪುಗೊಳ್ಳದಿದ್ದರೂ ಸಹ, ನಿಮ್ಮ ಸುಮಾರು 50 ಪ್ರತಿಶತದಷ್ಟು ಚಿಪ್ಪುಗಳು ಹಾಗೇ ಉಳಿದು ಉತ್ತಮ ಮುತ್ತುಗಳಾಗಿ ಬದಲಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ರೀತಿಯಾಗಿ,ನಿಮ್ಮ ಶೇಕಡ 50 ರಷ್ಟು ಚಿಪ್ಪುಗಳು ಹಾಳಾದ್ರೂ ಕನಿಷ್ಠ 3 ಲಕ್ಷ ರೂಪಾಯಿ ಹಣ ಸಂಪಾದನೆ ಮಾಡಬಹುದು.

Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ಉತ್ತಮ ಆದಾಯ ನೀಡುವ 5 ಆನ್‌ಲೈನ್ ಬ್ಯುಸಿನೆಸ್ ಐಡಿಯಾ; ಮನೆಯಲ್ಲೇ ಕುಳಿತು ಎಣಿಸಿ ಹಣ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!