ಆರ್ಥಿಕತೆಗೆ ಬಲ ತುಂಬಲು ಆರ್‌ಬಿಐ 4 ಅಸ್ತ್ರ: ಸಾಲಗಾರರಿಗೆ ಬಿಗ್ ರಿಲೀಫ್!

Published : May 22, 2020, 10:45 AM ISTUpdated : May 22, 2020, 12:34 PM IST
ಆರ್ಥಿಕತೆಗೆ ಬಲ ತುಂಬಲು ಆರ್‌ಬಿಐ 4 ಅಸ್ತ್ರ: ಸಾಲಗಾರರಿಗೆ ಬಿಗ್ ರಿಲೀಫ್!

ಸಾರಾಂಶ

ದೇಶದ ಆರ್ಥಿಕ ವ್ಯವಸ್ಥೆಗೆ ಮತ್ತಷ್ಟು ವೇಗ ತುಂಬಲು ಆರ್‌ಬಿಐ ಗವರ್ನರ್ ಟಾನಿಕ್| ಆರ್ಥಿಕತೆ ಮೇಲೆತ್ತಲು 4 ಮಹತ್ತರ ಹೆಜ್ಜೆ| ಸಾಲಗಾರರಿಗೆ ಶುಕ್ರ ದೆಸೆ

ನವದೆಹಲಿ(ಮೇ.22): ಕೊರೋನಾ ಅಟ್ಟಹಾಸದ ನಡುವೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ದೇಶದ ಆರ್ಥಿಕ ವ್ಯವಸ್ಥೆಗೆ ಮತ್ತಷ್ಟು ನೀಡಲು ವಿವಿಧ ಕ್ರಮಗಳನ್ನು ಘೋಷಿಸಿದ್ದು, ಪ್ರಮುಖವಾಗಿ ರೆಪೋ ಮತ್ತು ರಿವರ್ಸ್ ರೆಪೋ ದರ ಇಳಿಕೆ ಮಾಡಿದ್ದಾರೆ.

"

ಸಾಲ ಪಡೆಯಲು ಇದು ಸಕಾಲ

ಕೊರೋನಾ ಬಿಕ್ಕಟ್ಟಿನ ನಡುವೆ ಮೂರನೇ ಬಾರಿ ಸುದ್ದಿಗೋಷ್ಟಿ ನಡೆಸಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ ಮಾಡಲಾಗಿದೆ ಎಂದಿದ್ದಾರೆ. ಅಂದರೆ ಶೇ. 4.4ರಷ್ಟಿದ್ದ ರೆಪೋ ದರ ಶೇ. 4ಕ್ಕೆ ಇಳಿಕೆ ಮಾಡಲಾಗಿದೆ. ರಿವರ್ಸ್ ರಿಪೋ ದರವನ್ನೂ ಕೂಡ ಶೇ. 3.75ರಿಂದ 3.35ಕ್ಕೆ ಇಳಿಸಲಾಗಿದೆ. ಇದರಿಂದ ಸಾಲ ಪಡೆಯುವವರಿಗೆ ಲಾಭವಾಗಲಿದೆ. ಈ ಮೂಲಕ ವೈಯುಕ್ತಿಕ ಸಾಲ, ಗೃಹ ಸಾಲ ಹಾಗೂ ವಾಹನ ಸಾಲದ ಬಡ್ಡಿ ದರ ಇಳಿಕೆಯಾಗಲಿದೆ. ಆರ್‌ಬಿಐ ಗವರ್ನರ್ ನಡೆಸಿದ ಸುದ್ದಿಗೋಷ್ಟಿಯ ಪ್ರಮುಖ ಅಂಶಗಳು ಹೀಗಿವೆ

"

* ಜಾಗತಿಕ ಆರ್ಥಿಕತೆ ಮೇಲೆ ಕೊರೋನಾ ವೈರಸ್‌ ಭೀಕರ ಪರಿಣಾಮ ಬೀರಿದೆ. ಇದರಿಂದಾಗಿ ಏಪ್ರಿಲ್‌ ತಿಂಗಳಲ್ಲೇ ಆಹಾರ ಹಾಗೂ ಹಣದುಬ್ಬರು ಶೇ. 8.6ರಷ್ಟು ಏರಿಕೆಯಾಗಿದೆ. 

* ಬೇಳೆ ಕಾಳುಗಳ ಬೆಲೆ ಏರಿಕೆ ಆತಂಕ ಹುಟ್ಟಿಸುತ್ತಿದೆ. ಸದ್ಯ ದೇಶದಲ್ಲಿ ಉತ್ತಮ ಮುಂಗಾರು ಆರಂಭದ ಮುನ್ಸೂಚನೆ ಇದೆ. ದೇಶದ ಆಹಾರ ಭದ್ರತೆಗೆ ಇದು ಅನುಕೂಲಕರವಾಗಲಿದೆ. 

* ದೇಶದಲ್ಲಿ ಈ ಮಹಾಮಾರಿ ಹೊಡೆತಕ್ಕೆ ಕೈಗಾರಿಕೆ ಉತ್ಪಾದನೆ ಶೇ. 17ರಷ್ಟು ಕುಸಿದಿದೆ. 

* ದೇಶದ ಒಟ್ಟಾರೆ ಆಮದು ಶೇ. 5.8ರಷ್ಟು ಕುಸಿತ. ಕಳೆದ 30 ವರ್ಷದಲ್ಲೇ ರಫ್ತು ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿದಿದೆ.

* ಆಹಾರ ಧಾನ್ಯ ಉತ್ಪಾದನೆ ಶೇ. 3.7ರಷ್ಟು ಹೆಚ್ಚಳವಾಗಿದೆ. ಕೃಷಿ ವಲಯ ದೇಶದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

* GDP ಬೆಳವಣಿಗೆ ಶೂನ್ಯಕ್ಕಿಂತಲೂ ಇಳಿಕೆಯಾಗಲಿದೆ. 2010-21ರವರೆಗೂ ಜಿಡಿಪಿ ಬೆಳವಣಿಗೆ ನಿರೀಕ್ಷೆಗಿಂತ ಕೆಳಗಿಳಿಯಲಿದೆ. 

* ಮಾರ್ಚ್ ತಿಂಗಳಲ್ಲಿ ಸಿಮೆಂಟ್ ಉತ್ಪಾದನೆ ಶೇ. 19ರಷ್ಟು ಕುಸಿತ ಕಂಡಿದೆ.

* ವಿದೇಶಿ ವಿನಿಮಯ ಸಂಗ್ರಹ 9.2 ಬಿಲಿಯನ್‌ ಡಾಲರ್‌ಗೆ ಏರಿಕೆ

ಆರ್‌ಬಿಐ ಬಳಿ 653 ಟನ್‌ ಚಿನ್ನ ಸಂಗ್ರಹ: ಅರ್ಧ ವಿದೇಶದಲ್ಲಿ!

ಆರ್ಥಿಕತೆ ಮೇಲೆತ್ತಲು 4 ಮಹತ್ತರ ಹೆಜ್ಜೆ

1. ಮಾರುಕಟ್ಟೆ ಪುನಶ್ಚೇತನ

2. ರಫ್ತು ಉತ್ತೇಜನ

3. ಕೊರೋನಾದಿಂದಾದ ಆರ್ಥಿಕ ಹೊರೆ ತಗ್ಗಿಸುವುದು

4. ಸಾಲದ ಮೇಲಿನ EMI ಮತ್ತೆ ಮೂರು ತಿಂಗಳು ವಿಸ್ತರಣೆ. ಆಗಸ್ಟ್ 31ವರೆಗೂ ವಿಸ್ತರಣೆ. ಕ್ರೆಡಿಟ್ ಕಾರ್ಡ್ ಸಾಲಕ್ಕೂ ಇಎಂಐ ವಿನಾಯ್ತಿ. 

"

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!