RTGS ಸಮಯ ವಿಸ್ತರಣೆ: RBIನಿಂದ ಸಿಹಿ ಸುದ್ದಿ ಘೋಷಣೆ!

By Web Desk  |  First Published Aug 22, 2019, 9:30 PM IST

RTGS ಸಮಯ ವಿಸ್ತರಣೆ ಮಾಡಿ RBI ಘೋಷಣೆ| ಡಿಜಿಟಲ್ ವಹಿವಾಟು ಉತ್ತೇಜನಕ್ಕೆ ಮುಂದಡಿ ಇಟ್ಟ RBI| ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅವಕಾಶ| ಅಂತರ ಬ್ಯಾಂಕ್ ವ್ಯವಹಾರಕ್ಕೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 7.45ರ ವರೆಗೆ ಅವಕಾಶ|


ನವದೆಹಲಿ(ಆ.22): ಡಿಜಿಟಲ್ ವಹಿವಾಟು ಉತ್ತೇಜನಕ್ಕೆ ಮುಂದಿಡಿ ಇಟ್ಟಿರುವ ಭಾರತೀಯ ರಿಸರ್ವ್ ಬ್ಯಾಂಕ್(RBI), ಆರ್'ಟಿಜಿಎಸ್ ಸಮಯವನ್ನು ವಿಸ್ತರಿಸುವ ನಿರ್ಣಯ ಕೈಗೊಂಡಿದೆ.

ಇತ್ತೀಚಿಗಷ್ಟೇ ಆರ್'ಟಿಜಿಎಸ್ ಹಾಗೂ ನೆಫ್ಟ್ ಶುಲ್ಕವನ್ನು ರದ್ದುಪಡಿಸಿದ್ದ RBI, ಇದೀಗ ಆರ್ ಟಿಜಿಎಸ್ ಸಮಯವನ್ನು ವಿಸ್ತರಿಸಿದೆ.

Latest Videos

ಸದ್ಯ ಆರ್'ಟಿಜಿಎಸ್ ವಹಿವಾಟು ನಡೆಸಲು ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅವಕಾಶವಿದೆ. ಇದೀಗ ಈ ಸಮಯವನ್ನು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿಸ್ತರಿಸಲು RBI ನಿರ್ಧರಿಸಿದೆ.

ಇದೇ ವೇಳೆ ಅಂತರ ಬ್ಯಾಂಕ್ ವ್ಯವಹಾರಕ್ಕೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 7.45ರ ವರೆಗೆ ಅವಕಾಶ ನೀಡಲಾಗಿದೆ. ಈ ನೂತನ ಆದೇಶ ಇದೇ ಆ. 26ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 

click me!