10 ರೂಪಾಯಿ ನಾಣ್ಯದಲ್ಲಿ ಯಾವುದು ಅಸಲಿ, ಯಾವುದು ನಕಲಿ?

ಮಾರುಕಟ್ಟೆಯಲ್ಲಿರುವ ಹತ್ತು ರೂಪಾಯಿ ನಾಣ್ಯದಲ್ಲಿ ಯಾವುದು ನಕಲಿ, ಯಾವುದು ಅಸಲಿ. ಈ ಪ್ರಶ್ನೆಗೆ ಆರ್ ಬಿಐ ಮತ್ತೆ ಉತ್ತರ ನೀಡಿದೆ. ಕಿರಣಗಳ ಬಗ್ಗೆ ಆರ್ ಬಿಐ ಸ್ಪಷ್ಟನೆ ನೀಡಿದೆ. 
 

RBI Confirms  All 14 Designs of  10 Rs Coins Are Valid  No More Confusion

ಹತ್ತು ರೂಪಾಯಿ ನಾಣ್ಯ (Ten rupee coin)ಗಳ ಬಗ್ಗೆ ಜನರಲ್ಲಿ ಈಗ್ಲೂ ಗೊಂದಲ ಇದೆ. ಅನೇಕ ವ್ಯಾಪಾರಸ್ಥರು ಹತ್ತು ರೂಪಾಯಿ ನಾಣ್ಯಗಳನ್ನು ಸ್ವೀಕರಿಸೋದಿಲ್ಲ. ಆಟೋ, ಬಸ್, ತರಕಾರಿ ವ್ಯಾಪಾರಸ್ಥರು ಸೇರಿದಂತೆ ಅನೇಕ ಕಡೆ ಹತ್ತು ರೂಪಾಯಿ ನಾಣ್ಯವನ್ನು ಪಡೆಯಲು ಹಿಂದೆ ಮುಂದೆ ನೋಡ್ತಾರೆ. ಇದು ನಕಲಿ, ಇದನ್ನು ಮಾನ್ಯ ಮಾಡೋದಿಲ್ಲ ಎನ್ನುವ ಸಬೂಬು ಹೇಳಿ ನಾಣ್ಯವನ್ನು ಸ್ವೀಕರಿಸೋದಿಲ್ಲ. ಈ ಹಿಂದೆ ಆರ್ ಬಿಐ ಹತ್ತು ರೂಪಾಯಿ ನಾಣ್ಯದ ಬಗ್ಗೆ ಸ್ಪಷ್ಟನೆ ನೀಡಿತ್ತು. ಹತ್ತ ರೂಪಾಯಿ ನಾಣ್ಯಗಳು ಮಾನ್ಯವಾಗಿದ್ದು, ಅದನ್ನು ಸ್ವೀಕರಿಸಬಹುದು ಎಂದಿತ್ತು. ಈಗ ಮತ್ತೊಮ್ಮೆ ನಾಣ್ಯದ ಬಗ್ಗೆ ಹೇಳಿಕೆ ನೀಡಿದೆ. ಮಾರುಕಟ್ಟೆಯಲ್ಲಿರುವ ಎಲ್ಲ ಹತ್ತು ರೂಪಾಯಿ ನಾಣ್ಯಗಳೂ ಮಾನ್ಯ ಮತ್ತು ಕಾನೂನು ಬದ್ಧವಾಗಿವೆ ಎಂದಿದೆ. 

ಸದ್ಯ ಮಾರುಕಟ್ಟೆಯಲ್ಲಿ 10 ರೂಪಾಯಿ ನಾಣ್ಯದ 14 ವಿನ್ಯಾಸಗಳಿವೆ. ಎಲ್ಲ ನಾಣ್ಯಗಳಲ್ಲಿ ಯಾವುದು ಮಾನ್ಯ ಯಾವುದು ಮಾನ್ಯವಲ್ಲ ಎನ್ನುವ ಗೊಂದಲ ಜನರಲ್ಲಿದೆ. ಈ ಗೊಂದಲಕ್ಕೆ ಮುಖ್ಯ ಕಾರಣ ನಾಣ್ಯದ ಮೇಲಿರುವ ಕಿರಣಗಳು. ನಾಣ್ಯದ ಮೇಲ್ಭಾಗದಲ್ಲಿ 10 ಕಿರಣ ಹಾಗೂ 15 ಕಿರಣವಿದೆ. ಹತ್ತಕ್ಕಿಂತ ಹೆಚ್ಚು ಕಿರಣ ಇರುವ ನಾಣ್ಯಗಳು ಮಾತ್ರ ಮಾನ್ಯ ಎಂದು ಅನೇಕರು ನಂಬಿದ್ದಾರೆ. ಹತ್ತು ರೂಪಾಯಿ ನಾನ್ಯ ಸ್ವೀಕರಿಸಿ ಸಮಸ್ಯೆ ಮೈಮೇಲೆ ಎಳೆದುಕೊಳ್ಳುವುದು ಬೇಡ ಎನ್ನುವ ಕಾರಣಕ್ಕೆ ಹತ್ತು ರೂಪಾಯಿ ನಾಣ್ಯ ಸ್ವೀಕರಿಸೋದನ್ನೇ ಬಿಟ್ಟಿದ್ದಾರೆ. 

Latest Videos

ಏಪ್ರಿಲ್ 1ರಿಂದ ಇವರಿಗೆ ಯುಪಿಐ ಪಾವತಿ ಸೇವೆ ಬಂದ್, ನಿಮ್ಮ ನಂಬರ್ ಇದೆಯಾ ನೋಡಿ

ಹತ್ತು ರೂಪಾಯಿ ನಾಣ್ಯದ ಬಗ್ಗೆ ಆರ್ ಬಿಐ (RBI )ಹೇಳೋದೇನು? : ಹತ್ತು ರೂಪಾಯಿ ನಾಣ್ಯ ಮತ್ತು ಕಿರಣಗಳ ಬಗ್ಗೆ ಜನರಲ್ಲಿರುವ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಆರ್ ಬಿಐ ಮಾಡಿದೆ. ಆರ್ ಬಿಐ 10 ರೂಪಾಯಿಯ 14 ವಿನ್ಯಾಸದ ನಾಣ್ಯಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಅದ್ರಲ್ಲಿ ಒಂದು 10 ಕಿರಣಗಳನ್ನು ಹೊಂದಿದ್ದರೆ ಇನ್ನೊಂದು 15 ಕಿರಣಗಳನ್ನು ಹೊಂದಿದೆ. ಹತ್ತು ಕಿರಣವಿರುವ ಹಾಗೂ 15 ಕಿರಣವಿರುವ ಎರಡೂ ನಾಣ್ಯಗಳು ಮಾನ್ಯ, ಕಾನೂನುಬದ್ಧವಾಗಿದ್ದು, ಎಲ್ಲರೂ ಇದನ್ನು ಸ್ವೀಕರಿಸಬಹುದು ಎಂದು ಆರ್ ಬಿಐ ಸ್ಪಷ್ಟನೆ ನೀಡಿದೆ. 

15 ಕಿರಣವಿರುವ ನಾಣ್ಯಗಳ ಮೇಲೆ ₹ ಕಾಣಿಸೋದಿಲ್ಲ : ಆರ್‌ಬಿಐ ಪ್ರಕಾರ, ನಾಣ್ಯದ ಮೇಲ್ಭಾಗದಲ್ಲಿ 15 ಕಿರಣದ ಗುರುತುಗಳಿದ್ದು, ಈ ನಾಣ್ಯಗಳ ಮೇಲೆ ರೂಪಾಯಿ ಚಿಹ್ನೆ ಇಲ್ಲ. ಈ ನಾಣ್ಯಗಳು ಸಹ ನಿಜವಾದವು. 15 ಕಿರಣಗಳ ನಾಣ್ಯ ತಯಾರಿಸುವ ಸಮಯದಲ್ಲಿ ರೂಪಾಯಿ ಚಿಹ್ನೆ ಬಂದಿರಲಿಲ್ಲ. ಹಾಗಾಗಿ ನಾಣ್ಯದ ಮೇಲೆ ರೂಪಾಯಿ ಚಿಹ್ನೆ ಇಲ್ಲ ಎಂದು ಆರ್ ಬಿಐ ಹೇಳಿದೆ. 

ಮಾರ್ಚ್‌ 31 ಬರೋ ಮುನ್ನ ಈ ಕೆಲಸ ಮಾಡಿಲ್ಲ ಅಂದ್ರೆ ಜೇಬಿಗೆ ಕತ್ತರಿ ಪಕ್ಕಾ! ಬಚಾವ್‌ ಆಗಲು ಈ

ಎರಡನೇ ಬಾರಿ ಬಿಡುಗಡೆಯಾಗಿದ್ದು ಯಾವ ನಾಣ್ಯ? : 15 ಕಿರಣಗಳಿರುವ ನಾಣ್ಯದ ಮುದ್ರಣದ ನಂತ್ರ 10 ಕಿರಣವಿರುವ ನಾಣ್ಯವನ್ನು ಮುದ್ರಿಸಲಾಗಿದೆ. ಜುಲೈ 22, 2011 ರಂದು ಹತ್ತು ಕಿರಣವಿರುವ 10 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಾಯಿತು. 10 ಕಿರಣಗಳ ಗುರುತಿನ ಜೊತೆಗೆ ಈ ನಾಣ್ಯದ ಮೇಲೆ ₹ ಚಿಹ್ನೆಯನ್ನು ಸಹ ಮುದ್ರಿಸಲಾಗಿದೆ.  

ಇಲ್ಲಿ ಸಿಗುತ್ತೆ ಹೆಚ್ಚಿನ ಮಾಹಿತಿ : 10 ರೂಪಾಯಿ ನಾಣ್ಯದ ಬಗ್ಗೆ ನಿಮಗೆ ಗೊಂದಲ ಇದ್ರೆ ನೀವು 14440 ಗೆ ಕರೆ ಮಾಡುವ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಎರಡೂ ರೀತಿಯ ನಾಣ್ಯಗಳನ್ನು ಸ್ವೀಕರಿಸಬೇಕೆಂದು ಆರ್‌ಬಿಐ ಹಲವಾರು ಬಾರಿ ಸ್ಪಷ್ಟಪಡಿಸಿದೆಯಾದ್ರೂ ನೋಟಿನಂತೆ ನಾಣ್ಯ ಚಲಾವಣೆ ಆಗ್ತಿಲ್ಲ. 
 

vuukle one pixel image
click me!