ರಾಮಮಂದಿರ ಉದ್ಘಾಟನೆ: 50,000 ಕೋಟಿ ರೂ. ಬಿಸಿನೆಸ್; ರಾಮಮಂದಿರ ಪ್ರತಿಕೃತಿಗೆ ಹೆಚ್ಚು ಬೇಡಿಕೆ

By Kannadaprabha News  |  First Published Dec 30, 2023, 11:55 AM IST

ದೇಶಾದ್ಯಂತ ವಿಶೇಷ ಬಟ್ಟೆಗಳು, ಹೂ ಹಾರಗಳು, ಲಾಕೆಟ್‌ಗಳು, ಕೀ ಚೈನ್‌ಗಳು, ಶ್ರೀರಾಮನ ಚಿತ್ರಗಳು, ರಾಮ ದರ್ಬಾರ್‌ನ ಚಿತ್ರಗಳು, ಮಂದಿರದ ಪ್ರತಿರೂಪಗಳು, ಶ್ರೀರಾಮ ಅಂಗವಸ್ತ್ರಗಳು ಸೇರಿ ಹಲವು ವಸ್ತುಗಳು ಮಾರಾಟವಾಗಲಿವೆ ಎಂದು ವ್ಯಾಪಾರ ಒಕ್ಕೂಟದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ನವದೆಹಲಿ (ಡಿಸೆಂಬರ್ 30, 2023): ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮವು ದೇಶವ್ಯಾಪಿ ಹೆಚ್ಚುವರಿ 50000 ಕೋಟಿ ರೂ. ವಹಿವಾಟಿಗೆ ಕಾರಣವಾಗಲಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಅಂದಾಜಿಸಿದೆ. ರಾಮ ಮಂದಿರ ಎಂಬುದು ದೇಶಾದ್ಯಂತ ತನ್ನದೇ ಆದ ಗೌರವವನ್ನು ಸಂಪಾದಿಸಿದ್ದು, ಇದು ದೇಶದಲ್ಲಿ ಬಹುದೊಡ್ಡ ವ್ಯಾಪಾರವನ್ನು ಸೃಷ್ಟಿಸಲಿದೆ.

ಈ ವೇಳೆ ದೇಶಾದ್ಯಂತ ವಿಶೇಷ ಬಟ್ಟೆಗಳು, ಹೂ ಹಾರಗಳು, ಲಾಕೆಟ್‌ಗಳು, ಕೀ ಚೈನ್‌ಗಳು, ಶ್ರೀರಾಮನ ಚಿತ್ರಗಳು, ರಾಮ ದರ್ಬಾರ್‌ನ ಚಿತ್ರಗಳು, ಮಂದಿರದ ಪ್ರತಿರೂಪಗಳು, ಶ್ರೀರಾಮ ಅಂಗವಸ್ತ್ರಗಳು ಸೇರಿ ಹಲವು ವಸ್ತುಗಳು ಮಾರಾಟವಾಗಲಿವೆ ಎಂದು ವ್ಯಾಪಾರ ಒಕ್ಕೂಟದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tap to resize

Latest Videos

ಇಂದು ಮೋದಿ ಮೆಗಾ ಶೋ: ಅಯೋಧ್ಯೆಯಲ್ಲಿ 15,000 ಕೋಟಿ ರೂ. ಯೋಜನೆಗೆ ಚಾಲನೆ

ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ First Look!

click me!