ಚೀನಾ ಜಾಗತಿಕ ಉತ್ಪಾದನಾ ಕೇಂದ್ರ: ರಾಹುಲ್‌ ಗಾಂಧಿ ಪ್ರಶಂಸೆ

Published : Sep 09, 2023, 01:00 AM IST
ಚೀನಾ ಜಾಗತಿಕ ಉತ್ಪಾದನಾ ಕೇಂದ್ರ: ರಾಹುಲ್‌ ಗಾಂಧಿ ಪ್ರಶಂಸೆ

ಸಾರಾಂಶ

ಚೀನಾ ಇಂದು ಜಾಗತಿಕ ಉತ್ಪಾದನಾ ಕೇಂದ್ರವಾಗಿದೆ. ಏಕೆಂದರೆ ಚೀನಾ ಸರ್ಕಾರಕ್ಕೆ ಅದರದ್ದೇ ಆದ ಪರ್ಯಾಯ ದೃಷ್ಟಿಕೋನವಿದೆ. ಆದರೆ ನಾವು (ಭಾರತ) ಈ ಪರ್ಯಾಯ ದೃಷ್ಟಿಕೋನ ಹೊಂದಿಲ್ಲ. ಹೀಗಾಗಿ ಜಾಗತಿಕ ಉತ್ಪಾದನಾ ಕೇಂದ್ರವಾಗಲು ವಿಫಲವಾಗಿದೆ ಎಂದರ ರಾಹುಲ್‌ ಗಾಂಧಿ 

ಬ್ರಸೆಲ್ಸ್‌(ಸೆ.09): ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಭಾರತದ ವೈರಿ ದೇಶ ಆಗಿರುವ ಚೀನಾವನ್ನು ಹೊಗಳಿ ದೇಶದ ಜನತೆ ಹುಬ್ಬೇರುವಂತೆ ಮಾಡಿದ್ದಾರೆ. ‘ಚೀನಾ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದೆ’ ಎಂದು ಅವರು ಶ್ಲಾಘಿಸಿದ್ದು, ಭಾರತ ಈ ಸಾಧನೆ ಮಾಡಲು ವಿಫಲವಾಗಿದೆ ಎಂದಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚೀನಾ ಇಂದು ಜಾಗತಿಕ ಉತ್ಪಾದನಾ ಕೇಂದ್ರವಾಗಿದೆ. ಏಕೆಂದರೆ ಚೀನಾ ಸರ್ಕಾರಕ್ಕೆ ಅದರದ್ದೇ ಆದ ಪರ್ಯಾಯ ದೃಷ್ಟಿಕೋನವಿದೆ. ಆದರೆ ನಾವು (ಭಾರತ) ಈ ಪರ್ಯಾಯ ದೃಷ್ಟಿಕೋನ ಹೊಂದಿಲ್ಲ. ಹೀಗಾಗಿ ಜಾಗತಿಕ ಉತ್ಪಾದನಾ ಕೇಂದ್ರವಾಗಲು ವಿಫಲವಾಗಿದೆ’ ಎಂದರು.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಬಗ್ಗೆ ನಿಮಗೆಷ್ಟು ಗೊತ್ತು? ಅಂಚೆ ಕಚೇರಿಯಲ್ಲಿ ಓಪನ್‌ ಮಾಡೋದು ಹೇಗೆ ನೋಡಿ..!

‘ಚೀನಾ ಒತ್ತಡದ ವಾತಾವರಣದಲ್ಲೂ ಉತ್ತಮ ಉತ್ಪಾದನೆ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟಿದೆ. ಏಕೆಂದರೆ ಆ ದೇಶವು ಪರಾರ‍ಯಯ ದೃಷ್ಟಿಕೋನವಲ್ಲದೆ ನಿರ್ದಿಷ್ಟದೃಷ್ಟಿಕೋನವನ್ನೂ ಹೊಂದಿದೆ’ ಎಂದರು.
ಜಾಗತಿಕವಾಗಿ ಚೀನಾವನ್ನು ವಿಶ್ವದ ದೇಶಗಳು ಮೂಲೆಗುಂಪು ಮಾಡುತ್ತಿರುವ ಸಂದರ್ಭದಲ್ಲಿ ರಾಹುಲ್‌ ಅವರ ಈ ಹೇಳಿಕೆ ವಿವಾದಕ್ಕೀಡಾಗುವ ಸಾಧ್ಯತೆ ಇದೆ. ಅಲ್ಲದೆ, ರಾಹುಲ್‌ ಮೇಲೆ, ‘ವಿದೇಶಿ ನೆಲದಲ್ಲಿ ಭಾರತವನ್ನು ಟೀಕಿಸುತ್ತಾರೆ’ ಎಂಬ ಆರೋಪವನ್ನು ಆಗಾಗ ಬಿಜೆಪಿ ಮಾಡುತ್ತಲೇ ಇರುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..
ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದವರು ಉತ್ತಮ ಉದ್ಯಮಿಗಳಾಗುವುದು ಖಚಿತ