ಸೀದಾ ಸಾದಾ ವ್ಯಕ್ತಿ ರಾಧಾಕಿಶನ್‌ ಧಮಾನಿಯನ್ನು ಕೋಟ್ಯಧೀಶನನ್ನಾಗಿ ಮಾಡಿದ ಟಾಪ್‌-10 ಷೇರುಗಳಿವು, ನಿಮ್ಮಲ್ಲಿದ್ಯಾ ಈ ಸ್ಟಾಕ್ಸ್‌?

By Santosh Naik  |  First Published Sep 11, 2024, 7:53 PM IST

ರಾಧಾಕಿಶನ್‌ ಧಮಾನಿ ಅವರು ಸ್ಟಾಕ್‌ ಮಾರ್ಕೆಟ್‌ನಲ್ಲಿ 2.38 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪೋರ್ಟ್‌ಫೋಲಿಯೋ ಹೊಂದಿದ್ದಾರೆ. ಅವರು ಕೇವಲ 13 ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದು, ಅದರಲ್ಲಿ ಅವರ ಸ್ವಂತ ಕಂಪನಿ ಅವೆನ್ಯೂ ಸೂಪರ್‌ಮಾರ್ಟ್‌ ಕೂಡ ಒಂದು.



ಬೆಂಗಳೂರು (ಸೆ.11): ರಾಧಾಕಿಶನ್‌ ಧಮಾನಿ ಇಂದು ಸ್ಟಾಕ್‌ ಮಾರ್ಕೆಟ್‌ನ ಗೂಳಿ. ಸೈಲೆಂಟ್‌ ಬುಲ್‌. ಹೆಚ್ಚಾಗಿ ಸಂದರ್ಶನಗಳಲ್ಲಿ ಅವರು ಕಾಣಿಸಿಕೊಳ್ಳೋದಿಲ್ಲ. ಸಿಂಪಲ್‌ ಫುಲ್‌ ಕೈ ಶರ್ಟು. ಸೀದಾ ಸಾದಾ ಪ್ಯಾಂಟ್‌ನಲ್ಲಿ ಕಾಣಿಸಿಕೊಳ್ಳುವ ರಾಧಾಕಿಶನ್‌ ಧಮಾನಿ, ಸೋಶಿಯಲ್‌ ಮೀಡಿಯಾದಲ್ಲಿ ಅಷ್ಟೇನೂ ಆಕ್ಟೀವ್‌ ಆಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅದು ಅವರ ಸೋಶಿಯಲ್‌ ಮೀಡಿಯಾ ಅಕೌಂಟಾ ಅನ್ನೋದು ಗೊತ್ತಿಲ್ಲ. ಹೀಗಿರುವ ಅವರು, ಫೋರ್ಬ್ಸ್‌ ಪ್ರಕಾರ ವಿಶ್ವದ 85ನೇ ಶ್ರೀಮಂತ ವ್ಯಕ್ತಿ. ಅವರ ನಿವ್ವಳ ಆದಾಯ ಹತ್ತಿರಹತ್ತಿರ 2300 ಕೋಟಿ. ಇನ್ನು ಸ್ಟಾಕ್‌ ಮಾರ್ಕೆಟ್‌ನಲ್ಲಿ ಮಾಡಿರುವ ಹೂಡಿಕೆಗಳು ಲೆಕ್ಕಕ್ಕಿಲ್ಲ. 2015ರ ಡಿಸೆಂಬರ್‌ನಲ್ಲಿ ರಾಧಾಕಿಶನ್‌ ಧಮಾನಿ ಅವರ ಪೋರ್ಟ್‌ಫೋಲಿಯೋದ ನೆಟ್‌ವರ್ತ್‌ ಬರೀ 1531 ಕೋಟಿ ರೂಪಾಯಿ ಆಗಿತ್ತು. 2024ರ ಸೆಪ್ಟೆಂಬರ್‌ ವೇಳೆಗೆ ಅಂದರೆ ಸರಿಸುಮಾರಿ 9 ವರ್ಷಗಳಲ್ಲಿ ಅವರ ಸಂಪತ್ತು ಯಾವ ಪರಿ ದುಪ್ಪಟ್ಟಾಗಿದೆಯೆಂದರೆ, ಅವರ ಪೋರ್ಟ್‌ಫೋಲಿಯೋದ ಈಗಿನ ಮೌಲ್ಯ 2.38 ಲಕ್ಷ ಕೋಟಿ ರೂಪಾಯಿ. ಹಾಗಂತ ಅವರು ನೂರಾರು ಕಂಪನಿಗಳ ಷೇರುಗಳನ್ನು ಹೊಂದಿಲ್ಲ. ಸಾರ್ವಜನಿಕವಾಗಿ ಲಭ್ಯವಾಗಿರುವ ದಾಖಲೆಗಳ ಪ್ರಕಾರ ಅವರು 13 ಕಂಪನಿಯ ಷೇರುಗಳನ್ನು ಹೊಂದಿದ್ದಾರೆ. ಇದರ ಮೌಲ್ಯ 238,385 ಕೋಟಿ ರೂಪಾಯಿ. ಹಾಗಿದ್ದರೆ, ಅವರ ಟಾಪ್‌ 10 ಸ್ಟಾಕ್‌ಗಳು ಯಾವುದು ಅನ್ನೋದರ ವಿವರ ಇಲ್ಲಿದೆ.

ಅವೆನ್ಯೂ ಸೂಪರ್‌ಮಾರ್ಟ್ (Avenue Supermarts): ಸ್ವತಃ ರಾಧಾಕಿಶನ್‌ ಧಮಾನಿ ಅವರ ಕಂಪನಿಯೇ ಇದಾಗಿದ್ದು, ಡಿಮಾರ್ಟ್‌ನ ಮಾಲೀಕತ್ವ ಹೊಂದಿದೆ. ಜೂನ್‌ 2024ರ ವೇಳೆಗೆ ಈ ಕಂಪನಿಯ ಶೇ. 67.2ರಷ್ಟು ಷೇರುಗಳು ಧಮಾನಿ ಅವರ ಬಳಿ ಇವೆ.  2.31 ಲಕ್ಷ ಕೋಟಿ ರೂಪಾಯಿಯ 4.37 ಕೋಟಿ ಷೇರುಗಳನ್ನು ಇವರು ಹೊಂದಿದ್ದಾರೆ. 2023ರ ಮಾರ್ಚ್‌ನಲ್ಲಿ ಶೇ. 0.3ರಷ್ಟು ಷೇರನ್ನು ಮಾರಾಟ ಮಾಡಿದ್ದರು.

Tap to resize

Latest Videos

undefined

ಟ್ರೆಂಟ್‌ ಲಿಮಿಟೆಡ್‌ (Trent Ltd): ಟಾಟಾ ಗ್ರೂಪ್‌ನ ಡಿಪಾರ್ಟ್‌ಮೆಂಟ್‌ ಸ್ಟೋರ್ಸ್‌ ಕಂಪನಿ ಇದಾಗಿದೆ. ಈ ಕಂಪನಿಯಲ್ಲಿ 3222 ಕೋಟಿ ರೂಪಾಯಿ ಮೌಲ್ಯದ 45 ಲಕ್ಷ ಷೇರುಗಳನ್ನು ಧಮಾನಿ ಹೊಂದಿದ್ದಾರೆ. ಪ್ರಸ್ತುತ ಟ್ರೆಂಟ್‌ನ ಒಂದು ಷೇರು 7148 ರೂಪಾಯಿ ಆಗಿದೆ.

ಸುಂದರಂ ಫೈನಾನ್ಸ್‌ ಲಿಮಿಟೆಡ್‌ (Sundaram Finance Ltd): 70 ವರ್ಷಗಳ ಹಿಂದೆ ಟಿಎಸ್‌ ಶಾತನಂ ಅವರಿಂದ ಸ್ಥಾಪನೆಯಾದ ಸುಂದರಂ ಫೈನಾನ್ಸ್‌ ಲಿಮಿಟೆಡ್‌ ಕಂಪನಿಯ ಷೇರುಗಳನ್ನು ಬಹಳ ವರ್ಷಗಳಿಂದ ಹೊಂದಿದ್ದಾರೆ.  1216 ಕೋಟಿ ರೂಪಾಯಿಯ 26.30 ಲಕ್ಷ ಷೇರುಗಳನ್ನು ಇವರು ಹೊಂದಿದ್ದಾರೆ.

ಯುನೈಟೆಡ್‌ ಬ್ರೇವರೀಸ್‌ (United Breweries Ltd): ದೇಶದ ಅತ್ಯಂತ ಪ್ರಮುಖ ಬಿಯರ್‌ ಕಂಪನಿಯಾಗಿರುವ ಯುನೈಟೆಡ್‌ ಬ್ರೇವರಿಸ್‌ನಲ್ಲೂ  ಹೂಡಿಕೆ ಮಾಡಿದ್ದಾರೆ. 659 ಕೋಟಿ ರೂಪಾಯಿ ಮೌಲ್ಯದ 31.67 ಲಕ್ಷ ಷೇರುಗಳನ್ನು ಅವರು ಹೊಂದಿದ್ದಾರೆ. ಕಂಪನಿಯಲ್ಲಿ ಇವರ ಪಾಲು ಶೇ. 1.2ರಷ್ಟಿದೆ.

3ಎಂ ಇಂಡಿಯಾ ಲಿಮಿಟೆಡ್‌ (3M India Ltd): ಇಂಡಸ್ಟ್ರಿಯಲ್‌ ಮಷಿನರಿ ಕಂಪನಿಯಾಗಿರುವ 3 ಎಂ ಇಂಡಿಯಾ ಲಿಮಿಟೆಡ್‌ನಲ್ಲಿ ರಾಧಾಕಿಶನ್‌ ಧಮಾನಿ 585.7 ಕೋಟಿ ರೂಪಾಯಿ ಮೌಲ್ಯದ 1.66 ಲಕ್ಷ ಷೇರುಗಳನ್ನು ಹೊಂದಿದ್ದಾರೆ.

ಬ್ಲ್ಯೂ ಡಾರ್ಟ್‌ ಎಕ್ಸ್‌ಪ್ರೆಸ್‌ ಲಿಮಿಟೆಡ್‌ (Blue Dart Express Ltd): ಇತ್ತೀಚೆಗೆ ರಾಧಾಕಿಶನ್‌ ಧಮಾನಿ ಈ ಕಂಪನಿಯಲ್ಲಿದ್ದ ತಮ್ಮ ಹೂಡಿಕೆಯ ಶೇ. 0.1ರಷ್ಟು ಷೇರನ್ನು ಮಾರಾಟ ಮಾಡಿದ್ದಾರೆ. ಪ್ರಸ್ತುತ ಅವರು 230 ಕೋಟಿ ರೂಪಾಯಿಯ 2.81  ಲಕ್ಷ ಷೇರುಗಳನ್ನು ಹೊಂದಿದ್ದಾರೆ.

ವಿಎಸ್‌ಟಿ ಇಂಡಸ್ಟ್ರೀಸ್‌ ಲಿಮಿಟೆಡ್‌ (VST Industries Ltd): ತಂಬಾಕು ಕಂಪನಿ ವಿಎಸ್‌ಟಿ ಇಂಡಸ್ಟ್ರೀಸ್‌ನ ಷೇರುಗಳನ್ನು ಬರೀ 85 ರೂಪಾಯಿ ಧಮಾನಿ ಖರೀದಿ ಮಾಡಿದ್ದರು. ಇಂದು ಅವರ ಬಳಿ 226.9 ಕೋಟಿ ರೂಪಾಯಿ ಮೌಲ್ಯದ 53.51 ಲಕ್ಷ ಷೇರುಗಳನ್ನು ಹೊಂದಿದ್ದಾರೆ.

'ಒಂದು ವಾರ ತಡವಾಗಿದ್ದರೆ ದಿವಾಳಿಯಾಗಿರ್ತಿದ್ದೆ..' ಕೋಟಿಗಳ ಒಡೆಯ ಡಿಮಾರ್ಟ್‌ ಮಾಲೀಕ ರಾಧಾಕಿಶನ್‌ ಧಮಾನಿ ಹೀಗೆ ಹೇಳಿದ್ದೇಕೆ?

ಭಗೀರಥ ಕೆಮಿಕಲ್‌ & ಇಂಡಸ್ಟ್ರೀಸ್‌ ಲಿಮಿಟೆಡ್‌ (Bhagiradha Chemicals & Industries Ltd): ಆಗ್ರೋ ಕೆಮಿಕಲ್ಸ್‌ ಕಂಪಮಿಯಾಗಿರುವ ಭಗೀರಥ ಕೆಮಿಕಲ್‌ & ಇಂಡಸ್ಟ್ರೀಸ್‌ ಲಿಮಿಟೆಡ್‌ನಲ್ಲೂ ಧಮಾನಿ ಪಾಲು ಹೊಂದಿದ್ದಾರೆ. 168.4 ಕೋಟಿ ರೂಪಾಯಿ ಮೌಲ್ಯದ 43.06 ಲಕ್ಷ ಷೇರುಗಳನ್ನು ಇವರು ಹೊಂದಿದ್ದಾರೆ.

72,814 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಈಕೆ, ಭಾರತದ 2ನೇ ಶ್ರೀಮಂತ ಮಹಿಳೆ!

ಸುಂದರಂ ಫೈನಾನ್ಸ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ (Sundaram Finance Holdings Ltd): ಇನ್ವೆಸ್ಟ್‌ಮೆಂಟ್‌ ಕಂಪನಿಯಾಗಿರುವ ಸುಂದರಂ ಫೈನಾನ್ಸ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ ಕಂಪನಿಯಲ್ಲಿ ಧಮಾನಿ 160.4 ಕೋಟಿ ರೂಪಾಯಿ ಮೌಲ್ಯದ 41.70 ಲಕ್ಷ ಷೇರುಗಳನ್ನು ಹೊಂದಿದ್ದಾರೆ.

click me!