
ನೈಸರ್ಗಿಕ ವಜ್ರದ ಥರವೇ ಕಾಣುವ ಹಾಗೂ ಅದೇ ಗುಣಮಟ್ಟಹೊಂದಿರುವ ಲ್ಯಾಬ್ ನಿರ್ಮಿತ ವಜ್ರದ ಸಂಶೋಧನೆ ಹಾಗೂ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ವಿವಿಧ 5 ಐಐಟಿಗಳಲ್ಲಿ ಅಭಿವೃದ್ಧಿ ಹಾಗೂ ಸಂಶೋಧನೆ ನಡೆಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆಮದಿನ ಮೇಲೆ ಅವಲಂಬಿತರಾಗದೇ ದೇಶದಲ್ಲೇ ಕಡಿಮೆ ವೆಚ್ಚದಲ್ಲಿ ಲ್ಯಾಬ್ ನಿರ್ಮಿತ ವಜ್ರಗಳನ್ನು ರೂಪಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಲಿವೆ. ದೇಶದ ವಜ್ರದ ರಾಜಧಾನಿ ಎನ್ನಿಸಿಕೊಂಡಿರುವ ಗುಜರಾತ್‌ನ ಸೂರತ್‌ನಲ್ಲಿ ಲ್ಯಾಬ್ ನಿರ್ಮಿಸುವ ಉದ್ದೇಶವಿದೆ. ಲ್ಯಾಬ್ ನಿರ್ಮಿತ ವಜ್ರ ನಿರ್ಮಾಣಕ್ಕೆ 15ರಿಂದ 30 ದಿನಗಳ ಸಮಯ ಹಿಡಿಯಲಿದೆ.
ಲ್ಯಾಬ್ ನಿರ್ಮಿತ ವಜ್ರಗಳು ನೈಸರ್ಗಿಕ ವಜ್ರದಷ್ಟೇ ಮೂಲ ಸ್ವರೂಪ ಹೊಂದಿರುತ್ತವೆ ಹಾಗೂ ನೈಸರ್ಗಿಕ ವಜ್ರಕ್ಕಿಂತ ಪರಿಸರ ಸ್ನೇಹಿ ಆಗಿವೆ. ನೈಸರ್ಗಿಕ ವಜ್ರಗಳನ್ನು ಗಣಿಯಿಂದ ತೆಗೆದರೆ ಲ್ಯಾಬ್ ವಜ್ರಗಳನ್ನು ಪ್ರಯೋಗಾಲಯದಲ್ಲಿ ರೂಪಿಸಲಾಗುತ್ತದೆ. ಮೈಕ್ರೋವೇವ್ ಚೇಂಬರ್‌ನಲ್ಲಿ ಇಂಗಾಲ ಬೀಜ ಇರಿಸಲಾಗುತ್ತದೆ ಹಾಗೂ ಅದನ್ನು ಕಾಯಿಸಿದ ಬಳಿಕ ಹೊಳೆಯುವ ವಜ್ರ ಸೃಷ್ಟಿಯಾಗುತ್ತದೆ. ಭಾರತವು ವಜ್ರೋದ್ಯಮದಲ್ಲಿ ಮುಂಚೂಣಿಯಲ್ಲಿದ್ದು, ಲ್ಯಾಬ್ ನಿರ್ಮಿತ ವಜ್ರವು ವಜ್ರೋದ್ಯಮಕ್ಕೆ ಮತ್ತಷ್ಟುಬಲ ನೀಡುವ ನಿರೀಕ್ಷೆಯಿದೆ.
ಮಧ್ಯಪ್ರದೇಶದ ರೈತನಿಗೆ ಒಲಿದ ಅದೃಷ್ಟ, ಗುತ್ತಿಗೆ ಗಣಿಯಲ್ಲಿ ಸಿಕ್ತು 12 ಕ್ಯಾರಟ್ ವಜ್ರ!
ಗಿನ್ನೆಸ್ ದಾಖಲೆ ಸೃಷ್ಟಿಸಿದ ಡೈಮೆಂಡ್ ವಾಚ್, ಇದರಲ್ಲಿವೆ ಬರೋಬ್ಬರಿ 17,524 ವಜ್ರಗಳು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.