500 ರೂ ಸಾಲ ಮಾಡಿದವನಿಗೆ ಮಗುಚಿದ 11 ಕೋಟಿ ಲಾಟರಿ: ತರಕಾರಿ ವ್ಯಾಪಾರಿ ಬದುಕು ಬದಲಿಸಿದ ಅದೃಷ್ಟದಾಟ

Published : Nov 05, 2025, 02:51 PM ISTUpdated : Nov 05, 2025, 02:52 PM IST
vegetable seller win 11 crore lottery

ಸಾರಾಂಶ

Punjab state lottery winner: ಸ್ನೇಹಿತನಿಂದ 500 ರೂಪಾಯಿ ಸಾಲ ಪಡೆದು ಲಾಟರಿ ಟಿಕೆಟ್ ಖರೀದಿಸಿದ ಜೈಪುರದ ತರಕಾರಿ ಮಾರಾಟಗಾರ ಅಮಿತ್ ಸೆಹ್ರಾ ಅವರಿಗೆ 11 ಕೋಟಿ ರೂಪಾಯಿ ಮೊತ್ತದ ಪಂಜಾಬ್ ರಾಜ್ಯ ಲಾಟರಿ ಒಲಿದಿದೆ. 

ತರಕಾರಿ ಮಾರಾಟಗಾರನಿಗೆ ಒಲಿದ ಪಂಜಾಬ್ ರಾಜ್ಯ ಲಾಟರಿ

ಚಂಡೀಗಢ: ಸ್ನೇಹಿತನ ಬಳಿ 500 ರೂಪಾಯಿ ಸಾಳ ಪಡೆದು ಲಾಟರಿ ಟಿಕೆಟ್ ಖರೀದಿಸಿದ ತರಕಾರಿ ಮಾರಾಟಗಾರನೋರ್ವನಿಗೆ ಬಂಪರ್ ಲಾಟರಿ ಮಗುಚಿದೆ. ಹೌದು, ಜೈಪುರದ ಸಾಮಾನ್ಯ ತರಕಾರಿ ಮಾರಾಟಗಾರ ಅಮಿತ್ ಸೆಹ್ರಾ ಅವರಿಗೆ 11ಕೋಟಿ ಮೊತ್ತದ ಪಂಜಾಬ್ ರಾಜ್ಯ ಲಾಟರಿ ಮಗುಚಿದೆ. ದೀಪಾವಳಿ ಅಂಗವಾಗಿ ಈ ಲಾಟರಿಯನ್ನು ಆಯೋಜಿಸಲಾಗಿತ್ತು. ಅಮಿತ್ ಸೆಹ್ರಾ ಅವರು ಸ್ನೇಹಿತನಿಂದ 500 ರೂ. ಸಾಲ ಪಡೆದು ಈ ಲಾಟರಿ ಟಿಕೆಟ್ ಖರೀದಿಸಿದ್ದು, ಈಗ ಆ ಸ್ನೇಹಿತನಿಗೂ ಲಾಟರಿ ಹಣದಲ್ಲಿ ಸ್ವಲ್ಪ ಹಣ ಕೊಡುವುದಾಗಿ ಅವರು ವಾಗ್ದಾನ ಮಾಡಿದ್ದಾರೆ.

ಸ್ನೇಹಿತನ ಜೊತೆ ಸಾಲ ಮಾಡಿ ಲಾಟರಿ ಖರೀದಿಸಿದ್ದ ಅಮಿತ್ ಮಿಶ್ರಾ

ಲಾಟರಿ ಆಯೋಜಿಸಿದ್ದ ಸಂಸ್ಥೆ ಅದೃಷ್ಟಶಾಲಿ ವಿಜೇತರ ಸಂಖ್ಯೆಗಳನ್ನು ಘೋಷಿಸಿದ ಕೆಲವು ದಿನಗಳ ನಂತರ, ಲಾಟರಿ ಹಣವನ್ನು ಪಡೆಯುವುದಕ್ಕಾಗಿ ಅಮಿತ್ ಸೆಹ್ರಾ ಮಂಗಳವಾರ ಚಂಡೀಗಢಕ್ಕೆ ಬಂದಿದ್ದರು. 16 ಜನರ ಕೂಡು ಕುಟುಂಬವನ್ನು ಸಲಹುವ ಅಮಿತ್ ಸೆಹ್ರಾ, ಈ ಖರೀದಿ ಸಂಪೂರ್ಣ ಆಕಸ್ಮಿಕವಾಗಿತ್ತು ಎಂದು ಹೇಳಿದ್ದಾರೆ. ನಾನು ಮೊದಲ ಬಾರಿಗೆ ಲಾಟರಿ ಟಿಕೆಟ್ ಖರೀದಿಸಿದೆ. ನನ್ನ ಜೇಬಿನಲ್ಲಿ ಒಂದೇ ಒಂದು ಪೈಸೆಯೂ ಇರಲಿಲ್ಲ, ಮತ್ತು ನನ್ನ ಸ್ನೇಹಿತ ಮುಖೇಶ್ ಟಿಕೆಟ್‌ಗೆ ಹಣ ಪಾವತಿಸಿದರು ಎಂದು ಹೇಳಿದ್ದಾರೆ.

ಸ್ನೇಹಿತ ಮುಕೇಶ್‌ಗೆ 1 ಲಕ್ಷ ನೀಡಲು ನಿರ್ಧಾರ:

ಹೀಗಾಗಿ ಲಾಟರಿ ಟಿಕೆಟ್ ಖರೀದಿಸಿ ನೀಡಿದ ಸ್ನೇಹಿತ ಮುಖೇಶ್‌ಗೆ ಕೃತಜ್ಞತೆಯ ಸಂಕೇತವಾಗಿ, ಅಮಿತ್ ಸೆಹ್ರಾ 1 ಲಕ್ಷ ರೂ.ಗಳನ್ನು ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಈ ಲಾಟರಿ ಹಣದಿಂದ ತಮ್ಮ ಕುಟುಂಬಕ್ಕೆ ಯಾವುದೇ ಯೋಜನೆಗಳನ್ನು ರೂಪಿಸುವ ಮೊದಲು ತನ್ನ ಸ್ನೇಹಿತನ ಇಬ್ಬರು ಹೆಣ್ಣುಮಕ್ಕಳಿಗೆ ತಲಾ 50,000 ರೂ.ಗಳನ್ನು ಹಸ್ತಾಂತರಿಸುವ ಉದ್ದೇಶ ಹೊಂದಿದ್ದಾಗಿ ಹೇಳಿದ್ದಾರೆ. ಈ ಅದೃಷ್ಟಶಾಲಿ ಟಿಕೆಟ್‌ನ್ನು ಬಟಿಂಡಾದಲ್ಲಿರುವ ರತನ್ ಲಾಟರಿ ಟಿಕೆಟ್ ವಿತರಕರಿಂದ ಖರೀದಿಸಲಾಗಿದೆ. ಪಂಜಾಬ್ ಸರ್ಕಾರ ಅಕ್ಟೋಬರ್ 31 ರಂದು ವಿಜೇತರನ್ನು ಘೋಷಿಸಿದಾಗ, ಮೊಬೈಲ್ ಫೋನ್ ಬಳಸದ ಸೆಹ್ರಾ ಅವರು ಆರಂಭದಲ್ಲಿ ತಮ್ಮ ಪಾಲಿನ ಅದೃಷ್ಟದ ವರದಿಗಳನ್ನು ಸುಳ್ಳು ಎಂದು ಹೇಳಿದರಂತೆ. 

ಮೊದಲಿಗೆ ನಂಬಲಾಗಲಿಲ್ಲ

ಲಾಟರಿ ಡ್ರಾ ಫಲಿತಾಂಶಗಳನ್ನು ಹೇಗೆ ಪರಿಶೀಲಿಸಬೇಕೆಂದು ನನಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ. ನನಗೆ ಲಾಟರಿ ಏಜೆನ್ಸಿಯಿಂದ ಕರೆ ಬಂತು ಆದರೆ ಅದು ನಿಜವೆಂದು ನಂಬಲಿಲ್ಲ. ಅವರು ಅಂತಿಮವಾಗಿ ನನ್ನ ಮನೆಗೆ ಬಂದು ಬಹುಮಾನವನ್ನು ಪಡೆಯುವ ಕಾರ್ಯವಿಧಾನದ ಬಗ್ಗೆ ನನಗೆ ವಿವರಿಸಿದರು ಎಂದು ಅವರು ಹೇಳಿದರು. ನಿಯಮಗಳ ಪ್ರಕಾರ, ಲಾಟರಿ ವಿಜೇತರು 25 ದಿನಗಳಲ್ಲಿ ಬಹುಮಾನವನ್ನು ಪಡೆಯಬೇಕು. ಕೆಲವು ಲಾಟರಿ ಟಿಕೆಟ್ ಖರೀದಿದಾರರು ತಮ್ಮ ಹೆಸರು ಮತ್ತು ಫೋನ್ ನಂಬರ್‌ಗಳನ್ನು ಮಾರಾಟಗಾರರ ಬಳಿ ಬಿಟ್ಟು ಹೋದರೆ, ಇನ್ನು ಕೆಲವರು ಡ್ರಾ ಫಲಿತಾಂಶಗಳನ್ನು ಸ್ವತಃ ಪರಿಶೀಲಿಸಲುತ್ತಾರೆ.

ಖುಷಿಯಾಗಿದೆ, ಲಾಟರಿ ಹಣ ಮಕ್ಕಳ ಶಿಕ್ಷಣ ಮನೆ ಕಟ್ಟಲು ಬಳಸುವೆ

ಲಾಟರಿ ಗೆಲುವಿನ ನಂತರ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅಮಿತ್ ಸೆಹ್ರಾ, ನನ್ನ ಸಂತೋಷವನ್ನು ವ್ಯಕ್ತಪಡಿಸಲು ಸಾಧ್ಯವಾಗ್ತಿಲ್ಲ, ಪಂಜಾಬ್ ಸರ್ಕಾರ ಮತ್ತು ಲಾಟರಿ ಏಜೆನ್ಸಿಗೆ ನಾನು ಧನ್ಯವಾದ ಹೇಳುತ್ತೇನೆ. ನನ್ನ ಎಲ್ಲಾ ಕಷ್ಟ ಮತ್ತು ದುಃಖಗಳು ಇಂದು ಮಾಯವಾಗಿವೆ. ನಾನು 11 ಕೋಟಿ ರೂ. ಗೆದ್ದಿದ್ದೇನೆ. ನಾನು ಇಲ್ಲಿಗೆ ಭೇಟಿ ನೀಡಲು ಬಂದು ಎರಡು ಟಿಕೆಟ್‌ಗಳನ್ನು ಖರೀದಿಸಿದೆ, ಒಂದು ನನಗಾಗಿ ಮತ್ತು ಇನ್ನೊಂದು ನನ್ನ ಹೆಂಡತಿಗಾಗಿ. ನನ್ನ ಹೆಂಡತಿಯ ಟಿಕೆಟ್‌ಗೆ 1,000 ರೂ. ಬಹುಮಾನ ಬಂದಿದೆ. ಗೆದ್ದಿದೆ, ಮತ್ತು ನನ್ನ ಟಿಕೆಟ್‌ಗೆ 11 ಕೋಟಿ ರೂ. ಬಂದಿದೆ. ನಾನು ಈ ಹಣವನ್ನು ನನ್ನ ಮಕ್ಕಳ ಶಿಕ್ಷಣ ಮತ್ತು ಮನೆ ಕಟ್ಟಲು ಬಳಸುತ್ತೇನೆ ಎಂದು ಅವರು ಹೇಳಿದ್ದಾರೆ.

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?