
ಲುಧಿಯಾನ(ಸೆ.6): ಲಾಟರಿ ಕೊಳ್ಳಲು ಹಣವಿಲ್ಲದೇ ಪರದಾಡುತ್ತಿದ್ದ ವ್ಯಕ್ತಿಯೋರ್ವ, ಕಡೆಗೆ 200 ರೂ. ಸಾಲ ಮಾಡಿ ಲಾಟರಿ ಕೊಂಡ. ಅವನ ಅದೃಷ್ಟ ಎಂತಾದ್ದು ನೋಡಿ, ಆತನ ಲಾಟರಿ ನಂಬರ್ ಗೆದ್ದ ನಂಬರ್‌ಗೆ ಮ್ಯಾಚ್ ಆಗಿ ಆತ ಇದೀಗ ಬರೋಬ್ಬರಿ 1.2 ಕೋಟಿ ರೂ.ಗಳ ಒಡೆಯ.
ಹೌದು, ಪಂಜಾಬ್ ಸರ್ಕಾರದ ಪಂಜಾಬ್ ಸ್ಟೇಟ್ ಲಾಟರಿಯನ್ನು ೨೦೦ ರೂ. ಸಾಲ ಮಾಡಿ ಕೊಂಡಿದ್ದ ಮನೋಜ್ ಕುಮಾರ್ ಎಂಬ ವ್ಯಕ್ತಿಗೆ ಬಂಪರ್ ಬಹುಮಾನ ಲಭಿಸಿದ್ದು, ಮನೋಜ್ ಕುಮಾರ್ ಬರೋಬ್ಬರಿ 1.2 ಕೋಟಿ ರೂ. ಗೆದ್ದಿದ್ದಾನೆ. ಸಾಮಾನ್ಯ ಕಾರ್ಮಿಕನಾಗಿರುವ ಮನೋಜ್ ಕುಮಾರ್, ಲಾಟರಿ ಕೊಳ್ಳಲು ದುಡ್ಡಿಲ್ಲದೇ ಸ್ನೇಹಿತನ ಬಳಿ 200 ರೂ. ಸಾಲ ಮಾಡಿ ಲಾಟರಿ ಪಡೆದಿದ್ದ.
ಸದ್ಯ ಮನೋಜ್ ಕುಮಾರ್‌ಗೆ 1.2 ಕೋಟಿ ರೂ ಲಾಟರಿ ಬಹುಮಾನ ಲಭಿಸಿದ್ದು, ಆದಷ್ಟು ಶೀಘ್ರವಾಗಿ ಈ ಹಣವನ್ನು ಮನೋಜ್ ಕುಮಾರ್‌ಗೆ ನೀಡುವುದಾಗಿ ಪಂಜಾಬ್ ಸ್ಟೇಟ್ ಲಾಟರಿ ನಿರ್ದೇಶಕ ಟಿಪಿಎಸ್ ಫೂಲ್ಕಾ ಸ್ಪಷ್ಟಪಡಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.