ಹೆದ್ರಬ್ಯಾಡ್ರಿ ನಾ ಇದ್ದೇನೆ: ಎಲ್ಲರ 'ಆ' ಆತಂಕಕ್ಕೆ ಜೇಟ್ಲಿ 'ಈ' ಉತ್ತರ!

By Web DeskFirst Published 6, Sep 2018, 11:28 AM IST
Highlights

ಭಾರತದ ಅರ್ಥವ್ಯವಸ್ಥೆ ಗಟ್ಟಿಯಾಗಿದೆ ಎಂದ ವಿತ್ತ ಸಚಿವ! ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಿನ್ನೆಲೆ! ಆತಂಕ ಪಡುವ ಅಗತ್ಯವಿಲ್ಲ ಎಂದ ಅರುಣ್ ಜೇಟ್ಲಿ! ರೂಪಾಯಿ ಅಪಮೌಲ್ಯಕ್ಕೆ ದೇಶೀಯ ಕಾರಣಗಳಿಲ್ಲ

 

ನವದೆಹಲಿ(ಸೆ.6): ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಹೌದಾದರೂ, ಈ ಬಗ್ಗೆ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 

ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಏರುಪೇರು, ವ್ಯಾಣಿಜ್ಯ ಯುದ್ಧದ ಉದ್ವಿಗ್ನತೆ ಮತ್ತು ಅಮೆರಿಕದೆಡೆಗೆ ಹಣದ ಹೊರಹರಿವುಗಳೇ ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣ ಎಂದು ಜೇಟ್ಲಿ ಅಭಿಪ್ರಾಯಟಪ್ಟಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ದೇಶೀಯ ಆರ್ಥಿಕ ಪರಿಸ್ಥಿತಿ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ, ಈ ಅಪಮೌಲ್ಯಕ್ಕೆ ಯಾವುದೇ ದೇಶೀಯ ಕಾರಣಗಳಿಲ್ಲ ಎಂದು ಹೇಳಿದರು. 

ಅಮೆರಿಕ ಡಾಲರ್ ಹೊರತು ವಿಶ್ವದ ಯಾವುದೇ ಪ್ರಮುಖ ಕರೆನ್ಸಿ ಪೌಂಡ್, ಯೂರೋ ಮತ್ತು ಯೆನ್ ವಿರುದ್ಧ ಭಾರತೀಯ ರೂಪಾಯಿ ಮೌಲ್ಯ ಕುಸಿದಿಲ್ಲ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

 

Last Updated 9, Sep 2018, 10:03 PM IST