
ಮುಂಬೈ(ಸೆ.5): ವ್ಯಾಪಾರ ಅಂದ್ಮೇಲೆ ಒಂದು ಮಾತು ಹೋಗುತ್ತೆ, ಒಂದು ಮಾತು ಬರುತ್ತೆ. ಅದರಲ್ಲೂ ಒಂದೇ ಬಗೆಯ ವ್ಯವಹಾರದಲ್ಲಿ ತೊಡಗಿಕೊಂಡಿರುವ ಎರಡು ಕಂಪೊನಿಗಳು ಪರಸ್ಪರರ ಕಾಲೆಳೆಯುವುದು, ಪರಸ್ಪರ ನಡುವೆ ಜಿದ್ದಾಜಿದ್ದಿ ಇವೆಲ್ಲಾ ತೀರ ಸಾಮಾನ್ಯ. ಅದರಂತೆ ಭಾರತದ ಟೆಲಿಕಾಂ ದಿಗ್ಗಜ ಸಂಸ್ಥೆಗಳಾದ, ಇತ್ತಿಚಿಗೆ ವಿಲೀನಗೊಂಡ ಐಇಡಿಯಾ-ವೋಡಫೋನ್ ಮತ್ತಯ ಜಿಯೋ ಪರಸ್ಪರ ನಾಜೂಕಾಗಿ ಕಾಲೆಳೆದುಕೊಂಡಿವೆ.
ವೊಡಾಪೋನ್ ಮತ್ತು ಐಡಿಯಾ ಎರಡೂ ವಿಲೀನವಾಗಿರುವುದು ನಮಗೆಲ್ಲಾ ತಿಳಿದ ವಿಚಾರ. ಈ ಕುರಿತು ವೋಡಾಫೊನ್ ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ಬರೆದುಕೊಂಡಿತ್ತು. ಎರಡೂ ಬೃಹತ್ ಕಂಪೆನಿಗಳು ಒಂದಾಗಿರುವ ಸೂಚನೆಯಾಗಿ ವೊಡಾಪೋನ್ ಹಾಗೂ ಐಡಿಯಾ ಹೆಸರು ಜೊತೆಗಿರುವ ವೆಬ್ಸೈಟ್ ವಿಳಾಸವನ್ನು ಟ್ವೀಟ್ ಮಾಡಿತ್ತು.
ಈ ಟ್ವೀಟ್ಗೆ ತನ್ನದೇ ಆದ ರೀತಿಯಲ್ಲಿ ರೀ-ಟ್ವೀಟ್ ಮಾಡಿ ಛೇಡಿಸಿರುವ ಜಿಯೋ, 2016ರಿಂದ ಜನರನ್ನು ಒಗ್ಗೂಡಿಸಿಉತ್ತಿರುವ ಜಿಯೋ, ವೊಡಾಫೋನ್, ಐಡಿಯಾವನ್ನು ಕೂಡ ಪ್ರೀತಿಸುತ್ತದೆ ಎಂದು ಹೇಳಿದೆ. ಜಿಯೋದ ಮಾತಿನ ಹಿಂದೆ ವ್ಯಂಗ್ಯೋಕ್ತಿಯೂ ಇದೆ ಎಂಬುದು ಐಡಿಯಾ-ವೋಡಫೋನ್ ಗೆ ತಿಳಿದ ವಿಚಾರವೇನಲ್ಲ.
ಅಂದಹಾಗೆ, ಮಾರುಕಟ್ಟೆಯಲ್ಲಿ ಫಿನಿಕ್ಸ್ನಂತೆ ನುಗ್ಗಿ, ಭಾರಿ ಸಂಚಲನ ಉಂಟುಮಾಡಿದ್ದ ಜಿಯೋವನ್ನು ಹೇಗಾದರೂ ಬಗ್ಗುಬಡಿಯಬೇಕೆಂಬ ಉದ್ದೇಶದಿಂದಲೇ, ಈ ಎರಡೂ ಕಂಪನಿಗಳು ಒಂದಾಗಲು ಒಪ್ಪಂದ ಮಾಡಿಕೊಂಡಿದ್ದು ಗುಟ್ಟಿನ ವಿಷೆಯವೇನಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.