
ಪುಣೆ(ಆ.14): ಪುಣೆಯ ಕಾಸ್ಮಾಸ್ ಬ್ಯಾಂಕ್‌ನ ಹಲವು ಬ್ರಾಂಚ್‌ಗಳಿಗೆ ಸೈಬರ್ ಕಳ್ಳನೋರ್ವ ಕನ್ನ ಹಾಕಿದ್ದು, ಈ ಹಣವನ್ನು ಹಾಂಕ್‌ಕಾಂಗ್ ಮತ್ತು ಭಾರತದ ಕೆಲ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾನೆ.
ಕಳೆದ ಆಗಸ್ಟ್ 11ರಂದು ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ ಬರೋಬ್ಬರಿ 78 ಕೋಟಿ ರೂ. ದೋಚಲಾಗಿದೆ. ಇನ್ನು ಆಗಸ್ಟ್ 13ರಂದು ಮತ್ತೊಮ್ಮೆ ಹ್ಯಾಕ್ ಮಾಡಿ 14 ಕೋಟಿ ರೂ. ದೋಚಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಚತುಶ್ರಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಸ್ಮಾಸ್ ಸಹಕಾರಿ ಬ್ಯಾಂಕ್ ಭಾರತದ ಹಳೆಯ ನಗರ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿದೆ. ಪುಣೆ ಮೂಲದ ಈ ಬ್ಯಾಂಕ್ 2006ರ ಜನವರಿ 18ರಂದು ಶತಮಾನೋತ್ಸವವನ್ನು ಆಚರಿಸಿಕೊಂಡಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.