ಪಬ್ನಲ್ಲಿ ಕೆಲಸದ ಅವಕಾಶ; ಮಾಲೀಕನ ಷರತ್ತು ಏನು ಗೊತ್ತಾ?

By Suvarna NewsFirst Published Feb 12, 2024, 6:07 PM IST
Highlights

ಒಂದಲ್ಲ ಒಂದು ಉದ್ಯೋಗ ಸಿಕ್ಕಿದ್ರೆ ಸಾಕು ಎನ್ನುವವರಿಗೆ ಇಲ್ಲೊಂದು ಅವಕಾಶವಿದೆ. ಪಬ್ ನಲ್ಲಿ ನಾನಾ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕ ಮಾಡುವ ಉದ್ಯೋಗಿ ಕೆಲ ಷರತ್ತು ಪಾಲಿಸಬೇಕು. 
 

ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗುವುದು ಕಷ್ಷ. ಸಿಕ್ಕ ಉದ್ಯೋಗ ಕೂಡ ವರ್ಷಗಟ್ಟಲೆ ಗಟ್ಟಿಯಾಗಿರೋದು ಅನುಮಾನ. ಅನೇಕ ಕಂಪನಿಗಳು ಒಂದಲ್ಲ ಒಂದು ಕಾರಣ ಹೇಳಿ ಉದ್ಯೋಗಿಗಳನ್ನು ತೆಗೆಯುತ್ತಿರುವ ಕಾಲ ಇದು. ಹಾಗಂತ ಭಾರತದಂತಹದ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗ್ತಿಲ್ಲ ಎನ್ನುವುದು ಸುಳ್ಳು. ಅನೇಕ ಕಡೆ ಉದ್ಯೋಗಕ್ಕೆ ಅವಕಾಶವಿದೆ. ಆದ್ರೆ ವಿದ್ಯೆಗಿಂತ ಕಡಿಮೆ ಸಂಬಳ ಬರುವ ಕೆಲಸ ಅಥವಾ ಇದು ನಮಗೆ ಹೊಂದಿಕೆ ಆಗಲ್ಲ ಎನ್ನುವ ಕಾರಣಕ್ಕೆ ಜನರು ಕೆಲಸಕ್ಕೆ ಅರ್ಜಿ ಸಲ್ಲಿಸೋದಿಲ್ಲ. ಇನ್ನು ಕೆಲವರು ಯಾವುದೇ ಕೆಲಸವಾದ್ರೂ ಸರಿ ಎಂದು ಅರ್ಜಿ ಸಲ್ಲಿಸಿ, ಉದ್ಯೋಗ ಗಿಟ್ಟಿಸಿಕೊಂಡಿರುತ್ತಾರೆ. ಆದ್ರೆ ಅರ್ಜಿಯಲ್ಲಿ ಕೆಲಸದ ಬಗ್ಗೆ ಆಗ್ಲಿ, ಬಾಸ್ ಬಗ್ಗೆಯಾಗ್ಲಿ ಯಾವುದೇ ಮಾಹಿತಿ ಇರೋದಿಲ್ಲ. ಜೀವನ ನಿರ್ವಹಣೆಗೆ ಇಷ್ಟು ಸಾಕು ಎಂದು ಕೆಲಸಕ್ಕೆ ಸೇರಿದವರು, ವಾಸ್ತವ ಅರಿತು ದಂಗಾಗಿರುತ್ತಾರೆ. ಅರ್ಜಿಯಲ್ಲಿರುವ ಕೆಲಸ ಒಂದಾದ್ರೆ ನೇಮಕವಾದ್ಮೇಲೆ ಮಾಡಬೇಕಾದ ಕೆಲಸ ಒಂದಾಗಿರುತ್ತದೆ. ಇಲ್ಲವೆ ಮುಂಗೋಪಿ ಅಥವಾ ಕೈ ಬಿಚ್ಚದ ಬಾಸ್ ಜೊತೆ ವರ್ಷಗಟ್ಟಲೆ ದುಡಿದ್ರೂ ಬೈಗುಳ ಸಿಗುತ್ತೆ ವಿನಃ ಸಂಬಳ ಹೆಚ್ಚಾಗೋದಿಲ್ಲ ಎನ್ನುವ ಪರಿಸ್ಥಿತಿ ಇರುತ್ತದೆ. ಆದ್ರೆ ಎಲ್ಲರೂ ಹಾಗಿರಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನ ಪೋಸ್ಟ್ ವೈರಲ್ ಆಗಿದೆ. ಆತ ಕೆಲಸಕ್ಕೆ ಉದ್ಯೋಗಿಗಳನ್ನು ಆಹ್ವಾನಿಸಿರುವ ರೀತಿ ಭಿನ್ನವಾಗಿದೆ.

ಆತ ಕ್ಯಾಲಿಫೋರ್ನಿಯಾ (California)ದ ಸ್ಟಾಕ್‌ಟನ್ ನಿವಾಸಿ. ಆತನ ಹೆಸರು ಕ್ರೇಗ್ ಹಾರ್ಕರ್ (Craig Harker). 2020 ರಲ್ಲಿ ತನ್ನ ಬಾರ್ ದಿ ಜಾರ್ಜ್ ಪಬ್‌ ಶುರು ಮಾಡಲು ಮುಂದಾಗಿದ್ದ. ಅದಕ್ಕೆ ಕೆಲ ಉದ್ಯೋಗಿ (Employee)ಗಳ ನೇಮಕಕ್ಕೆ ನಿರ್ಧರಿಸಿದ್ದ. ಆದ್ರೆ ಕೊರೊನಾ, ಲಾಕ್ ಡೌನ್ ನಿಂದಾಗಿ ಆತನ ಕಾರ್ಯ ಪೂರ್ಣಗೊಂಡಿರಲಿಲ್ಲ. ಕೊರೊನಾ, ಲಾಕ್ ಡೌನ್ ಎಲ್ಲ ಮುಗಿದು ಮೇಲೆ ಮತ್ತೆ ಪಬ್ ಶುರು ಮಾಡುವ ಆಲೋಚನೆ ಮಾಡಿದ್ದಾನೆ. ಇದಕ್ಕೆ ಉದ್ಯೋಗಿಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ್ದಾನೆ. 

Latest Videos

ಮಗುವಿಗೆ ಜನ್ಮ ನೀಡಿದ್ರೆ 62 ಲಕ್ಷ ರೂಪಾಯಿ; ಏನಿದು ಆಫರ್?

ಕ್ರೇಗ್ ಹಾರ್ಕರ್, ಬಾರ್ ಸಿಬ್ಬಂದಿ, ಬಾಣಸಿಗ, ಪಾತ್ರೆ ತೊಳೆಯುವವರು ಮತ್ತು ಅಪ್ರೆಂಟಿಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾನೆ. ಉದ್ಯೋಗಿಗಳ ನೇಮಕಕ್ಕೂ ಮುನ್ನವೇ ಕೆಲವೊಂದು ಷರತ್ತನ್ನು ಈತ ಹಾಕಿದ್ದಾನೆ. ಈ ಮೂಲಕ ಸಾಮಾಜಿಕ ಜಾಲತಾಣ ಬಳಕೆದಾರರ ಮುಂದೆ ಪ್ರಾಮಾಣಿಕ ಎನ್ನಿಸಿಕೊಂಡಿದ್ದಾನೆ.

ಅಪ್ಪನ 2ನೇ ಮದ್ವೆ ನಂತರ ದುಬೈನಲ್ಲಿ ಓರಿ ಜೊತೆ ಪಾರ್ಟಿ ಮಾಡಿದ ಅಮ್ಮ ಮಗ

ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕ್ರೇಗ್ ಹಾರ್ಕರ್, ತನಗೆ ತಾನೇ ಬೈದುಕೊಂಡಿದ್ದಾನೆ. ತನ್ನನ್ನು ಕೆಟ್ಟವನಂತೆ ಬಿಂಬಿಸಿಕೊಂಡಿದ್ದಾನೆ. ನೀವು ಒಬ್ಬ ಮೂರ್ಖ ವ್ಯಕ್ತಿಗಾಗಿ ಕೆಲಸ ಮಾಡಲಿದ್ದೀರಿ. ಈಗಿನ ದಿನಗಳಲ್ಲು ಮೂರ್ಖರಲ್ಲದವರು ಯಾರಿದ್ದಾರೆ ಎಂದು ಪ್ರಶ್ನೆ ಮಾಡಿದೆ ಕ್ರೇಗ್ ಹಾರ್ಕರ್,  ನನ್ನ ಜೊತೆ ಕೆಲಸ ಮಾಡುವವರು ಸಂತೋಷವಾಗಿರುತ್ತಾರೆಂದು ಬರೆದಿದ್ದಾರೆ. ಟೀಂನಲ್ಲಿ ಯಾರೂ ಉದ್ಯೋಗಿಗಳಿರೋದಿಲ್ಲ. ಎಲ್ಲರೂ ಕುಟುಂಬದವರಂತೆ ಇರುತ್ತಾರೆ ಎಂದ ಕ್ರೇಗ್ ಹಾರ್ಕರ್, ನೀವು ಯಾವುದೇ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆದ್ರೆ ಕೆಲಸಕ್ಕೆ ಅರ್ಜಿ ಸಲ್ಲಿಸುವ ಜನರು ಸ್ವಚ್ಛ, ಸ್ಮಾರ್ಟ್ ಮತ್ತು ಪ್ರಜೆಂಟೇಬಲ್ ಆಗಿರಬೇಕು ಎಂದು ಬರೆದಿದ್ದಾರೆ.

ಇಷ್ಟೇ ಅಲ್ಲ, ನೀವು ಸಂದರ್ಶನಕ್ಕೆ ಬರುವವರಾಗಿದ್ದರೆ ನಿಮ್ಮ ಸ್ವಚ್ಛ ಬಟ್ಟೆ ಬಗ್ಗೆ ಗಮನ ಹರಿಸಿ. ಸಾಮಾಜಿಕವಾಗಿ ಎಲ್ಲರ ಜೊತೆ ಬೆರೆಯುವುದು ಕೂಡ ಮುಖ್ಯವಾಗುತ್ತದೆ. ಈ ಎಲ್ಲದರ ಬಗ್ಗೆ ತರಬೇತಿ ನೀಡಲು ನನಗೆ ಸಮಯವಿಲ್ಲ ಎಂದೂ ಕ್ರೇಗ್ ಹಾರ್ಕರ್ ಹೇಳಿದ್ದಾರೆ.

ಕ್ರೇಗ್ ಹಾರ್ಕರ್ ಪೋಸ್ಟ್ ನೋಡಿ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಅನೇಕರು ಸುಳ್ಳು ಹೇಳಿ ಕೆಲಸಕ್ಕೆ ತೆಗೆದುಕೊಳ್ತಾರೆ. ಆದ್ರೆ ಇವರು ಅತ್ಯಂತ ಪ್ರಾಮಾಣಿಕರಾಗಿದ್ದಾರೆಂದು ನೆಟ್ಟಿಗರು ಹೇಳಿದ್ದಾರೆ. 

click me!