Unique Business Idea : ಈ ದಿನಗಳಲ್ಲಿ ಪ್ರೈವೇಟ್ ಜಾಬ್‌ನಲ್ಲಿ ತುಂಬಾ ಪೈಪೋಟಿ ಇದೆ. ಎಲ್ಲೋ ಕೆಲಸದ ಒತ್ತಡ ಜಾಸ್ತಿ, ಎಲ್ಲೋ ರಜೆ ಸಿಗುತ್ತಿಲ್ಲ ಅಥವಾ ಕಡಿಮೆ ಸಂಬಳ. ಹೀಗಿರುವಾಗ ಬಿಸಿನೆಸ್ ಮಾಡುವ ಐಡಿಯಾ ತಲೆಗೆ ಬರುತ್ತದೆ. ಆದರೆ ಬಜೆಟ್ ಕಡಿಮೆ ಇರುವುದರಿಂದ ಮನಸ್ಸಿಗೆ ನೋವು ಮಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ. ಆದರೆ, ಇನ್ಮುಂದೆ ಹಾಗೆ ಮಾಡುವ ಅಗತ್ಯವಿಲ್ಲ. ಏಕೆಂದರೆ ಇಂದು ನಾವು ನಿಮಗೆ ಕೇವಲ 15,000 ರೂಪಾಯಿಯಲ್ಲಿ ಪ್ರಾರಂಭಿಸಬಹುದಾದ ಒಂದು ವಿಶಿಷ್ಟ ಬಿಸಿನೆಸ್ ಬಗ್ಗೆ ಹೇಳಲಿದ್ದೇವೆ. ಅದುವೇ ಅಗರಬತ್ತಿ ಬಿಸಿನೆಸ್ (Agarbatti Business). ಇದನ್ನು ನೀವು ಮನೆಯಲ್ಲಿಯೇ ಸಣ್ಣ ಅಥವಾ ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಬಹುದು.
ಅಗರಬತ್ತಿ ಬಿಸಿನೆಸ್ ಶುರು ಮಾಡಲು ಎಷ್ಟು ಖರ್ಚಾಗುತ್ತದೆ?
ಅಗರಬತ್ತಿ ಬಿಸಿನೆಸ್ ಅನ್ನು ಕಡಿಮೆ ಹಣದಲ್ಲಿಯೇ ಪ್ರಾರಂಭಿಸಬಹುದು. ಇದಕ್ಕೆ ಸರಾಸರಿ 15,000 ದಿಂದ 20,000 ರೂಪಾಯಿ ಖರ್ಚಾಗುತ್ತದೆ. ಆದರೆ, ದೊಡ್ಡ ಮಟ್ಟದಲ್ಲಿ ಈ ಬಿಸಿನೆಸ್‌ಗೆ 5 ರಿಂದ 6 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ಉದ್ಯೋಗಿ ಮರಣಾನಂತರ ಪತ್ನಿಗೆ 10 ವರ್ಷ ಸಂಬಳ ಕೊಡೋ, ಮಗುವಿಗೆ ತಿಂಗಳಿಗೆ 86500 ರೂ ಕೊಡೋ ಕಂಪೆನಿ ಇದು
ಬಿಸಿನೆಸ್‌ಗೆ ಸರ್ಕಾರ ಸಹಾಯ ಮಾಡುತ್ತದೆಯೇ?
ನಿಮ್ಮ ಬಳಿ ಬಜೆಟ್ ಇಲ್ಲದಿದ್ದರೆ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ (PMMY) ಲೋನ್‌ಗೆ ಅಪ್ಲೈ ಮಾಡಬಹುದು. ಬಿಸಿನೆಸ್ ಮಾಡಲು ಸರ್ಕಾರ ನಿಮಗೆ ಸಹಾಯ ಮಾಡುತ್ತದೆ. ನೀವು ಬೇರೆ ಬೇರೆ ಸುವಾಸನೆಯ ಅಗರಬತ್ತಿಗಳನ್ನು ತಯಾರಿಸಬಹುದು.
ಅಗರಬತ್ತಿ ತಯಾರಿಸಲು ಮೆಷಿನ್ ಬೇಕಾಗುತ್ತದೆಯೇ?
ಅಗರಬತ್ತಿ ತಯಾರಿಸುವ ಬಿಸಿನೆಸ್ ಅನ್ನು ಮೆಷಿನ್ ಇಲ್ಲದೆ ಕೂಡ ಪ್ರಾರಂಭಿಸಬಹುದು. ಆದರೆ ಇದನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದರೆ ಮೆಷಿನ್ ಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಎರಡು ರೀತಿಯ ಮೆಷಿನ್‌ಗಳು ಲಭ್ಯವಿದೆ. ಇದಕ್ಕಾಗಿ ಅಗರಬತ್ತಿ ಡ್ರೈಯರ್ ಮೆಷಿನ್, ಅಗರಬತ್ತಿ ಪೌಡರ್ ಮಿಕ್ಸರ್ ಮೆಷಿನ್ ಮತ್ತು ಅಗರಬತ್ತಿ ಪ್ಯಾಕಿಂಗ್ ಮೆಷಿನ್‌ಗಳು ಬರುತ್ತವೆ. ಈ ಮೆಷಿನ್‌ಗಳಿಂದ ನಿಮ್ಮ ಕೆಲಸ ಸುಲಭವಾಗುತ್ತದೆ ಮತ್ತು ಉತ್ಪಾದನೆಯೂ ಹೆಚ್ಚಾಗುತ್ತದೆ.
ಅಗರಬತ್ತಿ ಬಿಸಿನೆಸ್‌ಗೆ ಏನೇನು ಬೇಕು:
ಸಣ್ಣ ಮಟ್ಟದ ಬಿಸಿನೆಸ್‌ಗೆ ಕನಿಷ್ಠ 1000 ಚದರ ಅಡಿ ಜಾಗ
ಕಾರ್ಬನ್ ಡಸ್ಟ್, ಶ್ರೀಗಂಧದ ಪುಡಿ
ಬಿಳಿ ಚಿಪ್ಸ್ ಪುಡಿ, ಜಿಗಾಟ್ ಪುಡಿ
ಬಿದಿರಿನ ಕಡ್ಡಿ, ಡಿಇಪಿ
ಪರ್ಫ್ಯೂಮ್ ರಾಪಿಂಗ್ ಪೇಪರ್, ಪೇಪರ್ ಬಾಕ್ಸ್
ಒಂದು ಎಪಿಸೋಡ್‌ಗೆ 8 ಲಕ್ಷ, 50 ಕೋಟಿ ರೂ. ಮನೆ! ಅಂಬಾನಿ, ಅದಾನಿಗೇ ಟಫ್ ಕಾಂಪಿಟೇಟರ್ ಈಕೆ!
ಅಗರಬತ್ತಿ ಬಿಸಿನೆಸ್‌ಗೆ ಲೈಸೆನ್ಸ್ ಬೇಕೇ?
ಅಗರಬತ್ತಿ ಬಿಸಿನೆಸ್ ಶುರು ಮಾಡಲು ನೀವು ಲೋಕಲ್ ಇಂಡಸ್ಟ್ರಿ ಸೆಂಟರ್‌ನಿಂದ ಅನುಮತಿ ಪಡೆಯಬೇಕು. ನೀವು ಬಯಸಿದರೆ ನಿಮ್ಮ ಕಂಪನಿಯನ್ನು ರಚಿಸಿ ರಿಜಿಸ್ಟ್ರೇಷನ್ ಕೂಡ ಮಾಡಿಸಬಹುದು. ಇದರಿಂದ ನಿಮಗೆ ಕೆಲಸ ಮಾಡಲು ಸುಲಭವಾಗುತ್ತದೆ ಮತ್ತು ಯಾವುದೇ ರೀತಿಯ ಕಾನೂನು ಸಮಸ್ಯೆಗಳು ಬರುವುದಿಲ್ಲ.
ಹೆಚ್ಚಿನ ಲಾಭಕ್ಕಾಗಿ ಯಾವ ವಿಷಯಗಳ ಮೇಲೆ ಗಮನ ಕೊಡಬೇಕು
ಆಕರ್ಷಕ ಪ್ಯಾಕೇಜಿಂಗ್
ಆಕರ್ಷಕ ಡಿಸೈನ್
ಮಾರುಕಟ್ಟೆಗಿಂತ ವಿಭಿನ್ನ ಪ್ರಾಡಕ್ಟ್ಸ್
ಅಗರಬತ್ತಿ ಬಿಸಿನೆಸ್‌ನಿಂದ ಎಷ್ಟು ಲಾಭ ಸಿಗುತ್ತದೆ?
ಅಗರಬತ್ತಿ ಬಿಸಿನೆಸ್ ಅನ್ನು ಸರಿಯಾಗಿ ಮಾಡಿದರೆ ಸಾಕಷ್ಟು ಲಾಭ ಗಳಿಸಬಹುದು. ನೀವು ಎಷ್ಟು ಹೆಚ್ಚು ಅಗರಬತ್ತಿಗಳನ್ನು ತಯಾರಿಸುತ್ತೀರೋ, ಅಷ್ಟು ಹೆಚ್ಚು ಲಾಭವಾಗುತ್ತದೆ. ಕೆಲವೊಮ್ಮೆ ಸರಿಯಾದ ಮಾರ್ಕೆಟಿಂಗ್ ಸ್ಟ್ರಾಟಜಿ ಮತ್ತು ಹೆಚ್ಚು ಪ್ರಾಡಕ್ಟ್ಸ್ ಮಾರಾಟ ಮಾಡಿದರೆ ಸಣ್ಣ ಮಟ್ಟದ ಬಿಸಿನೆಸ್‌ನಿಂದಲೂ ಲಕ್ಷಾಂತರ ಆದಾಯ ಗಳಿಸಬಹುದು.