ಉದ್ಯೋಗಿಗಳಿಗೆ ಸಂಬಳ ಕಡಿತ ಮಾಡೋದು, ವಜಾ ಮಾಡೋ ಕಂಪೆನಿಗಳ ಸಂಖ್ಯೆ ಜಾಸ್ತಿ ಆಗುತ್ತಿರುವ ಟೈಮ್‌ನಲ್ಲಿ ಉದ್ಯೋಗಿಯ ಮರಣಾನಂತರ ಪತ್ನಿಗೆ ಹತ್ತು ವರ್ಷಗಳ ಕಾಲ ಸಂಬಳ ಕೊಡುವ ಏಕೈಕ ಕಂಪೆನಿ ಇದು!
ಇತ್ತೀಚೆಗೆ ಕಂಪೆನಿಗಳಲ್ಲಿ ಉದ್ಯೋಗಿಗಳಿಗೆ ಕೊಡುವ ಒತ್ತಡದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿವೆ. ಕೆಲಸದ ಒತ್ತಡ ಜಾಸ್ತಿ ಆಗಿ ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿಗಳ ಬಗ್ಗೆ ಕೂಡ ಸಾಕಷ್ಟು ವರದಿಗಳಾಗಿವೆ. ಇನ್ನೂ ಕೆಲವೊಮ್ಮೆ ಉದ್ಯೋಗಿ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಕೂಡ ಕಡಿಮೆ ಸಂಬಳ ಕೊಡಲಾಗುತ್ತದೆ, ಪ್ರಮೋಶನ್ ಕೊಡಲಾಗೋದಿಲ್ಲ. ಉದ್ಯೋಗಿ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಕೂಡ ಒಮ್ಮೊಮ್ಮೆ ತಮ್ಮ ಸ್ವಯಂ ಅಹಂಕಾರಕ್ಕೆ ಉದ್ಯೋಗಿಗಳನ್ನು ಏಕಾಏಕಿ ಕಿತ್ತು ಹಾಕಲಾಗುವುದು. ಇಂಥ ಉದಾಹರಣೆಗಳೇ ಹೆಚ್ಚು ಸಿಗುತ್ತಿರುವಾಗ ಇಲ್ಲೊಂದು ಕಂಪೆನಿಯು, ಉದ್ಯೋಗಿ ಮರಣದ ಬಳಿಕವೂ ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ಭದ್ರತೆ ನೀಡುವುದು.
ಉನ್ನತ ಸೌಲಭ್ಯ ನೀಡುವ ಕಂಪೆನಿಗಳು!
ಒಂದೊಂದು ಕಂಪೆನಿಗಳು ಒಂದೊಂದು ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಎಷ್ಟೋ ಕಂಪೆನಿಗಳು ಉದ್ಯೋಗಿಗಳಿಗೆ ಒಳ್ಳೆಯ ಸೌಲಭ್ಯಗಳನ್ನು ನೀಡುತ್ತವೆ. ಸರ್ಕಾರಿ ಉದ್ಯೋಗವಾದರೆ ಉದ್ಯೋಗಿಗಳಿಗೆ ನಿವೃತ್ತಿ ನಂತರವೂ ಹಣ ಸಿಗುತ್ತದೆ, ಕುಟುಂಬಕ್ಕೂ ಕೆಲವೊಮ್ಮೆ ಸಹಾಯ ಆಗುವ ಸೌಲಭ್ಯಗಳು ಇರುತ್ತವೆ. ಇನ್ನೂ ಕೆಲ ಕಂಪೆನಿಗಳಲ್ಲಿ ಅಧಿಕಾರಿಗಳು ತಮ್ಮ ಉದ್ಯೋಗಿಗಳನ್ನು ಹೀನಾಯವಾಗಿ ನಡೆಸಿಕೊಳ್ಳೋದುಂಟು.
ಸ್ವಿಗ್ಗಿ, ಜೊಮೆಟೋ ಮಾದರಿಯಲ್ಲಿ ಜಲಮಂಡಳಿ ಆ್ಯಪ್ ಮೂಲಕ ಕಾವೇರಿ ನೀರಿನ ಟ್ಯಾಂಕರ್ ಬುಕಿಂಗ್ ಮಾಡಿ!
ಪಿಐಪಿ ಹೆಸರಿನಲ್ಲಿ ಮೋಸ!
ಇತ್ತೀಚೆಗೆ ಪಿಐಪಿ ಎಂಬ ಹೆಸರಿನಡಿಯಲ್ಲಿ ತಮಗೆ ಇಷ್ಟವಾಗದ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡೋದುಂಟು. ಚೆನ್ನಾಗಿ ಕೆಲಸ ಮಾಡುವ ಉದ್ಯೋಗಿಯ ಬಿಹೇವಿಯರ್ ಬಗ್ಗೆ ಕಂಪೆನಿಯ ಅಧಿಕಾರಿಯು ಇಲ್ಲಸಲ್ಲದ ಆರೋಪ ಮಾಡಿ, ಕೆಲಸದಿಂದ ತೆಗೆದು ಹಾಕಲಾಗೋದಿಲ್ಲ. ಅಧಿಕಾರಿಗಳಿಗೆ ಆ ಉದ್ಯೋಗಿ ಕೋರ್ಟ್ ಮೆಟ್ಟಿಲೇರಬಹುದು ಎಂಬ ಭಯ ಇರುತ್ತದೆ. Performance Improvement Plan ಅಡಿಯಲ್ಲಿ ಉದ್ಯೋಗಿಗೆ ನೀವು ಚೆನ್ನಾಗಿ ಕೆಲಸ ಮಾಡಿಲ್ಲ, ಒಂದು ತಿಂಗಳು ಸಮಯ ಕೊಡ್ತೀನಿ, ಸುಧಾರಿಸಿಕೊಳ್ಳಿ ಎಂದು ಹೇಳಿ ಸಾಧಿಸಲು ಸಾಧ್ಯವಾಗದ ಟಾರ್ಗೆಟ್ ಕೊಡಲಾಗುತ್ತದೆ. ಹೀಗಾಗಿ ಆ ಉದ್ಯೋಗಿಗೆ ಟಾರ್ಗೆಟ್ ಸಾಧಿಸಲು ಆಗೋದಿಲ್ಲ. ಆಗ ಅವರನ್ನು ಕೆಲಸದಿಂದ ಹೊರಗಡೆ ಕಳಿಸಲಾಗುವುದು. ಇಂಥ ಮನಸ್ಥಿತಿಗಳಿಂದ ಎಷ್ಟೋ ಪ್ರತಿಭೆಗಳು ಅವಕಾಶ ವಂಚಿತರಾಗಿರೋ ಉದಾಹರಣೆಗಳು ತುಂಬ ಇವೆ.
ಫೋನ್ ಪೇನಲ್ಲಿ ಬಂದ ಹಣ ಯಾರದು?; ಅಧಿಕಾರಿಗಳ ಮೈಚಳಿ ಬಿಡಿಸಿದ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ!
ಪತ್ನಿಗೆ ಹತ್ತು ವರ್ಷಗಳ ಕಾಲ ಸಂಬಳ ಸಿಗತ್ತೆ!
ಇಷ್ಟೆಲ್ಲ ಆಗುಹೋಗುಗಳ ಮಧ್ಯೆ ಗೂಗಲ್ ಕಂಪೆನಿ ತಮ್ಮ ಉದ್ಯೋಗಿಗಳ ಕುಟುಂಬಕ್ಕೂ ಕೂಡ ನೆರವಾಗುತ್ತಿದೆ. ಉದ್ಯೋಗಿ ನಿಧನದ ಬಳಿಕವೂ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಗೂಗಲ್ ಉದ್ಯೋಗಿ ತೀರಿಕೊಂಡರೆ, ತುಂಬ ವರ್ಷಗಳ ಕಾಲ ಕುಟುಂಬಕ್ಕೆ ಆರ್ಥಿಕವಾಗಿ ಭದ್ರತೆ ಸಿಗುವುದು. ಪತ್ನಿ ಅಥವಾ ಸಂಗಾತಿಗೆ ಉದ್ಯೋಗಿಯ 50% ಸಂಬಳವನ್ನು ಹತ್ತು ವರ್ಷಗಳ ಕಾಲ, ಪ್ರತಿ ತಿಂಗಳು ಸಂಬಳ ನೀಡಲಾಗುವುದಂತೆ. ಇದರಿಂದ ಆರ್ಥಿಕ ಸ್ಥಿತಿಗತಿ ಚೆನ್ನಾಗಿರುವುದು.
ಅಮೆಜಾನ್ ಗಿಫ್ಟ್ ವೋಚರ್‌ಗೆ ಆಸೆ ಪಟ್ಟು 51 ಲಕ್ಷ ರೂ. ಕಳೆದುಕೊಂಡ ಮಹಿಳೆ! ಅಷ್ಟಕ್ಕೂ ಆಗಿದ್ದೇನು?
ಮಗು 19 ವರ್ಷ ಆಗೋವರೆಗೂ ಹಣ ಕೊಡ್ತಾರೆ!
ಅಷ್ಟೇ ಅಲ್ಲದೆ ಉದ್ಯೋಗಿಯ ಷೇರುಗಳಿಗೂ ಪ್ರವೇಶವನ್ನು ಪಡೆಯುತ್ತಾರೆ, ಇದರಿಂದ ಕೂಡ ಹಣ ಪಡೆಯಬಹುದು. ಇನ್ನು ಉದ್ಯೋಗಿಯ ಮಗುಗೆ ಹತ್ತೊಂಭತ್ತು ವರ್ಷ ಆಗುವವರೆಗೂ ಅಥವಾ ಶಿಕ್ಷಣ ಮುಗಿಯವವರೆಗೂ ತಿಂಗಳಿಗೆ 86,247 ರೂಪಾಯಿ ಪಡೆಯುತ್ತಾರೆ. ಜೊತೆಗೆ ಶಿಕ್ಷಣದ ವೆಚ್ಚವನ್ನು ಕೂಡ ಪಡೆಯುತ್ತಾರೆ.
ಫ್ರೀ ಹೇರ್‌ಕಟ್, ಆಹಾರ, ಆನ್‌ಲೈನ್ ಡಾಕ್ಟರ್, ಕ್ಯಾಬ್, ಜಿಮ್‌ಗೆ ಕೂಡ ಹಣ, ಇಂಟರ್‌ನೆಟ್ ಸೌಲಭ್ಯ, ವರ್ಕ್ ಫ್ರಂ ಹೋಮ್ ( ಕೆಲವರಿಗೆ ಮಾತ್ರ ) ಮುಂತಾದ ಸೌಲಭ್ಯಗಳು ಸಿಗುತ್ತವೆ. ಇನ್ನು ಆಫೀಸ್‌ನಲ್ಲಿ ಕೆಲಸ ಮಾಡುವವರಿಗೆ ಬೆಳಗ್ಗೆ ಮಧ್ಯಾಹ್ನ, ರಾತ್ರಿ ಎಂದು ಸಮಯಕ್ಕೆ ತಕ್ಕಂತೆ ತಿಂಡಿ, ಊಟ, ಟೀ, ಕಾಫಿ, ಜ್ಯೂಸ್ ಎಂದು ಸಮೃದ್ಧ ಆಹಾರ ನೀಡಲಾಗುವುದಂತೆ. ಮರಣಾನಂತರ ಕೂಡ ಉದ್ಯೋಗಿಗಳ ಕುಟುಂಬಕ್ಕೆ ಸಾಕಷ್ಟು ಸೌಲಭ್ಯಗಳನ್ನು ಕೊಡೋದು ಮಾತ್ರ ತುಂಬ ವಿಶೇಷವೂ ಹೌದು, ಉಪಕಾರಿಯೂ ಹೌದು.
ಗೂಗಲ್ ಕಂಪೆನಿ ಸ್ಥಾಪನೆ ಆಗಿದ್ದು ಯಾವಾಗ?
ಜಗತ್ತಿನಲ್ಲಿ ಅತಿ ಪವರ್‌ಫುಲ್ ಕಂಪೆನಿಗಳಲ್ಲಿ ಗೂಗಲ್ ಕೂಡ ಒಂದಾಗಿದೆ. ಅಮೆರಿಕನ್ ಮಲ್ಟಿನ್ಯಾಶನಲ್ ಕಾರ್ಪೋರೇಶನ್, ಟೆಕ್ನೋಲಜಿ ಕಂಪೆನಿಯು ಮುಖ್ಯವಾಗಿ ಆನ್‌ಲೈನ್ ಜಾಹೀರಾತು, ಸರ್ಚ್ ಇಂಜಿನ್ ಟೆಕ್ನೋಲಜಿ, ಕ್ಲೌಡ್ ಕಂಪ್ಯೂಟಿಂಗ್, ಕಂಪ್ಯೂಟರ್ ಸಾಫ್ಟ್‌ವೇರ್, ಈ ಕಾಮರ್ಸ್, ಆರ್ಟಿಫಿಶಿಯಲ್ ಇಂಟೆಲಿಜಿನ್ಸ್ ಮುಂತಾದ ವಿಷಯಗಳ ಬಗ್ಗೆ ಕೆಲಸ ಮಾಡುವುದು. ಸಾಕಷ್ಟು ಬ್ರ್ಯಾಂಡ್‌ಗಳ ಜೊತೆ ಈ ಕಂಪೆನಿ ಸಹಭಾಗಿತ್ವ ಹೊಂದಿದೆ. 2015ರಿಂದ ಭಾರತೀಯ ಸುಂದರ್ ಪಿಚೈ ಅವರು ಈ ಕಂಪೆನಿಯ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಗೂಗಲ್ ಸಿಇಒ ಮಾತನಾಡಿಲ್ಲ. ಫೋರ್ಬ್ಸ್ ಮ್ಯಾಗ್‌ಜೀನ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.