ಒಂಟಿತನಕ್ಕೆ ಅಪ್ಪುಗೆಯ ಚಿಕಿತ್ಸೆ; 1 ಗಂಟೆ ತಬ್ಬಿಕೊಂಡ್ರೆ ಸಿಗುತ್ತೆ 7500 ರೂಪಾಯಿ

By Mahmad Rafik  |  First Published Nov 11, 2024, 12:00 PM IST

ಒಂಟಿತನದಿಂದ ಬಳಲುತ್ತಿರುವವರಿಗೆ ಅಪ್ಪುಗೆಯ ಮೂಲಕ ಸಾಂತ್ವನ ನೀಡುವ ವಿಶಿಷ್ಟ ಉದ್ಯೋಗವನ್ನು ಅನಿಕೋ ರೋಸ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಸೇವೆಗಾಗಿ ಗಂಟೆಗೆ ₹7500 ರೂಪಾಯಿಗಳನ್ನು ಪಡೆಯುತ್ತಾರೆ.


ಲಂಡನ್: 50 ವರ್ಷಗಳ ಹಿಂದೆ ಹೋದ್ರೆ ಕೆಲಸ ಅಂದ್ರೆ ಕೆಲವೊಂದಕ್ಕೆ ಮಾತ್ರ ಸೀಮಿತವಾಗಿತ್ತು. ಇಂದು ಹೊಸ ಹೊಸ ಉದ್ಯೋಗಗಳು ಹುಟ್ಟಿಕೊಂಡಿದ್ದು, ವಿಚಿತ್ರ ಅನ್ನಿಸಿದರೂ ಇಂತಹ ಉದ್ಯೋಗ ಮಾಡಿ ಅನೇಕರು ಸಾವಿರಾರು ರೂಪಾಯಿ ಹಣ ಸಂಪಾದಿಸುತ್ತಿದ್ದಾರೆ. ಹೊಸ ಪೀಳಿಗೆಯ ಸಮುದಾಯ ಕೆಲಸದಲ್ಲಿಯಲ್ಲಿಯೂ ವಿಭಿನ್ನತೆ ಹುಡುಕುತ್ತಾರೆ. ಹಳೆಯ ಕೆಲಸಗಳನ್ನು ಬಿಟ್ಟು ಹೊಸ ಮಾರ್ಗಗಳನ್ನು ಆರಿಸಿಕೊಂಡು ತಮ್ಮ ಕನಸುಗಳ ಪ್ರಕಾರ ಬದುಕುತ್ತಿರುತ್ತಾರೆ. ಸಮಾಜದ ಅಗತ್ಯಗಳನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ಸಾವಿರಾರು ರೂಪಾಯಿ ಹಣವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ನಿವಾಸಿ 42 ವರ್ಷದ ಅನಿಕೊ ರೋಸ್ ಕೂಡ ಇದೇ ರೀತಿಯ ಹೊಸ ಕೆಲಸ ಆರಂಭಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. 

ನೀವು ಜೀವನದಲ್ಲಿ ಒಂಟಿತನ ಅನುಭವಿಸುತ್ತಿದ್ದರೆ ನಿಮ್ಮ ಸಹಾಯಕ್ಕೆ ಅನಿಕೋ ರೋಸ್ ಬರುತ್ತಾರೆ. ಒಂಟಿತನವನ್ನು ದೂರ ಮಾಡುವುದು ಅನಿಕೊ ರೋಸ್ ಆಯ್ಕೆ ಮಾಡಿಕೊಂಡ ಉದ್ಯೋಗ. ಈ ಕೆಲಸದಿಂದ ಅನಿಕೋ ರೋಸ್ ಗಂಟೆಗೆ 7 ಸಾವಿರ ರೂಪಾಯಿವರೆಗೂ ಸಂಪಾದಿಸುತ್ತಾರೆ. 

Latest Videos

undefined

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಯಾರ ಬಳಿಯಲ್ಲಿಯೂ ಸಮಯ ಇಲ್ಲ. ಊಟವೂ ಸೇರಿದಂತೆ ಎಲ್ಲಾ ಕೆಲಸಗಳನ್ನು ಗಡಿಬಿಡಿಯಲ್ಲಿ ಮಾಡಿಕೊಳ್ಳುತ್ತಾರೆ. ಕಚೇರಿಗೆ ಹೋಗುವಾಗಲೂ, ಅಲ್ಲಿಂದ ಬರುವಾಗಲೂ ಅವಸರ ಇರುತ್ತದೆ. ಇಂತಹ ಸಮಯದಲ್ಲಿ ಜನರು ಒಂಟಿತನ ಅನುಭವಿಸುತ್ತಾರೆ. ನಮ್ಮ ಮಾತುಗಳನ್ನು ಕೇಳಲು ಯಾರೂ ಇಲ್ಲ ಎಂಬ ನೋವಿನಿಂದ ಮಾನಸಿಕ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹೆಚ್ಚಾಗಿ ಹಿರಿಯ ನಾಗರೀಕರಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಒಂಟಿತನಕ್ಕೆ ಅನಿಕೋ ರೋಸ್ ಚಿಕಿತ್ಸೆ ನೀಡುತ್ತಾರೆ. 

ಒಂಟಿತನದಿಂದ ಬಳಲುತ್ತಿರೋ ಜನರಿಗೆ ಒಂದು ಅಪ್ಪುಗೆಯ ಅವಶ್ಯಕತೆ ಇರುತ್ತದೆ. ಇಂತಹ ವಿಶೇಷವಾದ ಅಪ್ಪುಗೆಯನ್ನು ಅನಿಕೋ ರೋಸ್ ನೀಡುತ್ತಾರೆ. ಪ್ರತಿದಿನ ಅಂತಹ ವರ್ಗದ ಜನರನ್ನು ಭೇಟಿಯಾಗಿ ಅವರ ಸಂತೋಷ ಮತ್ತು ದುಃಖದ ಕ್ಷಣಗಳನ್ನು ಆಲಿಸುತ್ತಾರೆ. ಪ್ರತಿಯೊಂದು ಸಂದರ್ಭದಲ್ಲಿಯೂ ಭಾವನಾತ್ಮಕವಾಗಿ ಸ್ಪಂದಿಸುವ ಗುಣವನ್ನು ಕರಗತ ಮಾಡಿಕೊಂಡಿರುವ ಅನಿಕೋ ರೋಸ್ ಒಂಟಿತನ ದೂರ ಮಾಡಲು ಪ್ರಯತ್ನಿಸುತ್ತಾರೆ. ಈ ಕೆಲಸಕ್ಕಾಗಿ ಪ್ರತಿ ಗಂಟೆಗೆ 7,500 ರೂಪಾಯಿ ವಿಧಿಸುತ್ತಾರೆ.

ಇದನ್ನೂ ಓದಿ: 1 ಲಕ್ಷ ಹೂಡಿಕೆ ಆಯ್ತು 3 ಕೋಟಿ ರೂಪಾಯಿ; ಷೇರುದಾರರಿಗೆ 28300% ಲಾಭ ಕೊಟ್ಟ ಕಂಪನಿ

ಅನಿಕೋ ರೋಸ್ ಮಾತ್ರ ಈ ಕೆಲಸ ಮಾಡಲ್ಲ. ನಗರ ಪ್ರದೇಶಗಳಲ್ಲಿ ಹಲವರು 'ಹಗ್ಗರ್'ಗಳಾಗಿ ಕೆಲಸ ಮಾಡಿ ಹಣ ಸಂಪಾದಿಸುತ್ತಾರೆ. ವರದಿಗಳ ಪ್ರಕಾರ, ವಿದೇಶಗಳಲ್ಲಿ ಹಗ್ಗರ್ ಗಳ ಬೇಡಿಕೆ ಹೆಚ್ಚಾಗಿದೆ. ಒತ್ತಡ ಮತ್ತು ಒಂಟಿತನದಿಂದ ಹೋರಾಡುವ ಜನರಿಗೆ ಅಪ್ಪುಗೆಯು ತುಂಬಾ ಸಾಂತ್ವನ ನೀಡುತ್ತದೆ. ಕಳೆದ ಮೂರು ವರ್ಷಗಳಿಂದ ಅನಿಕೋ ರೋಸ್ ಈ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸಾಮಾಜಿಕ ಜಾಲತಾಣ ಅಥವಾ ವೆಬ್‌ಸೈಟ್ ಮೂಲಕ ಅನಿಕೋ ರೋಸ್ ಅವರನ್ನು ಬುಕ್ ಮಾಡಿಕೊಳ್ಳಬಹುದು. ಗಂಟೆಗೆ 70 ಪೌಂಡ್ ವಿಧಿಸುವ ಅನಿಕೋ ರೋಸ್,  20 ರಿಂದ 65 ವರ್ಷ ವಯಸ್ಸಿನ ಗ್ರಾಹಕರನ್ನು ಹೊಂದಿದ್ದಾರೆ. 

ಇದನ್ನೂ ಓದಿ: ಕೇವಲ ಒಂದು ಟೆಕ್ನಿಕ್‌ ಬಳಸಿ ಷೇರು ಮಾರುಕಟ್ಟೆಯಿಂದ 2 ಕೋಟಿ ಗಳಿಸಿದ ಹಳ್ಳಿ ಹುಡುಗಿ

click me!