
ಪ್ರಧಾನಿ ನರೇಂದ್ರ ಮೋದಿಯವರು ಇದಾಗಲೇ ಮಹಿಳೆಯರು, ಕೃಷಿಕರು, ಯುವಕರು ಸೇರಿದಂತೆ ಎಲ್ಲಾ ವರ್ಗಗಳನ್ನು ಗಮನದಲ್ಲಿ ಇಟ್ಟುಕೊಂಡು ಹಲವಾರು ಯೋಜನೆಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಜಾರಿಗೆ ತಂದಿದ್ದಾರೆ. ಅದರಲ್ಲಿಯೂ ಮಹಿಳೆಯರ ಪರವಾಗಿ ಕೆಲವು ಯೋಜನೆಗಳು ಬಂದಿದ್ದು, ಅವುಗಳಲ್ಲಿ ಒಂದು ಪಿಎಂ ಮಹಿಳಾ ಸಮ್ಮಾನ್ ಯೋಜನೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರ ಹೆಸರಿನಲ್ಲಿ ಖಾತೆ ತೆರೆದು ಹಣ ಇಟ್ಟರೆ, ಶೇಕಡಾ 7.5 ಬಡ್ಡಿ ಹಣ ಸಿಗುತ್ತದೆ. ಇದು ಇತರ ಯಾವುದೇ ಬ್ಯಾಂಕ್ಗಳ ಸಾಮಾನ್ಯ ಬಡ್ಡಿದರಗಳಿಗಿಂತಲು ಹೆಚ್ಚಾಗಿದೆ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿಯಲ್ಲಿ, ನೀವು 2 ಲಕ್ಷ ರೂಪಾಯಿ ಹಣ ಇಡಬೇಕಾಗುತ್ತದೆ. ಇದಕ್ಕಿಂತ ಹೆಚ್ಚು ಠೇವಣಿ ಇಡಲು ಸಾಧ್ಯವಿಲ್ಲ. ಎರಡು ವರ್ಷಗಳ ಅವಧಿಯಲ್ಲಿ ಶೇಕಡಾ 7.5ರ ಬಡ್ಡಿದರದಂತೆ ನಿಮ್ಮ ಕೈಗೆ ಒಟ್ಟು 2 ಲಕ್ಷದ 32,044 ರೂಪಾಯಿಗಳು ಸಿಗುತ್ತವೆ. ಎಂದರೆ 32 ಸಾವಿರ ರೂಪಾಯಿಗಳು ಹೆಚ್ಚುವರಿಯಾಗಿ ನಿಮಗೆ ಸಿಗಲಿದೆ. ಮಹಿಳೆಯರೇ ಖುದ್ದಾಗಿಯೂ ಈ ಅಕೌಂಟ್ ತೆರೆಯಬಹುದು ಇಲ್ಲವೇ ಕುಟುಂಬಸ್ಥರು ತಮ್ಮ ಮನೆಯ ಮಹಿಳೆಯರ ಪರಿವಾಗಿ ಅಕೌಂಟ್ ಖಾತೆ ಓಪನ್ ಮಾಡಬಹುದು.
ಪ್ರತಿ ತಿಂಗಳು 5 ಸಾವಿರ ಸೇವ್ ಮಾಡಿ- 8.50 ಲಕ್ಷ ಪಡೆದುಕೊಳ್ಳಿ: ಪೋಸ್ಟ್ ಆಫೀಸ್ ಈ ಯೋಜನೆ ನೋಡಿ...
ಅಂದಹಾಗೆ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು 2023 ರಲ್ಲಿ ಜಾರಿಗೆ ತಂದಿದೆ. ಆದರೆ ಈ ಬಗ್ಗೆ ಹಲವರಿಗೆ ಇದರ ಅರಿವು ಇಲ್ಲ. ಅಷ್ಟಕ್ಕೂ ಎರಡು ಲಕ್ಷ ರೂಪಾಯಿ ಇಡುವುದು ಹಲವರಿಗೆ ಸಾಧ್ಯವಾಗದ ಮಾತು. ಆದ್ದರಿಂದ ಈ ಯೋಜನೆಗೆ ಕನಿಷ್ಠ 1 ಸಾವಿರ ರೂಪಾಯಿ ಫಿಕ್ಸ್ ಮಾಡಲಾಗಿದೆ. ಗರಿಷ್ಠ 2 ಲಕ್ಷ ರೂಪಾಯಿಗಳನ್ನು ಠೇವಣಿ ಇಡಬಹುದು. ಈ ಯೋಜನೆಯು 2 ವರ್ಷಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಆದಾಗ್ಯೂ, ಖಾತೆ ತೆರೆದ ದಿನಾಂಕದಿಂದ ಒಂದು ವರ್ಷದ ನಂತರ ನೀವು ಅರ್ಹ ಬ್ಯಾಲೆನ್ಸ್‌ನ 40 ಪ್ರತಿಶತವನ್ನು ಹಿಂಪಡೆಯಬಹುದು. ಈ ಯೋಜನೆಯಡಿಯಲ್ಲಿ, ನೀವು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ನಿಮ್ಮ ಹೆಂಡತಿಯ ಹೆಸರಿನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಖಾತೆಯನ್ನು ತೆರೆಯಬಹುದು. ಇನ್ನೂ ಮದುವೆಯಾಗಿಲ್ಲದಿದ್ದರೆ, ನಿಮ್ಮ ತಾಯಿಯ ಹೆಸರಿನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿಯೂ ನೀವು ಹೂಡಿಕೆ ಮಾಡಬಹುದು. ಇಷ್ಟೇ ಅಲ್ಲ, ನಿಮಗೆ ಮಗಳಿದ್ದರೆ, ನೀವು ಆಕೆಯ ಹೆಸರಿನಲ್ಲಿಯೂ ಹೂಡಿಕೆ ಮಾಡಬಹುದು.
ಖಾತೆ ತೆರೆಯುವುದು ಹೇಗೆ?
ಇದಕ್ಕಾಗಿ ಮೊದಲು ನೀವು ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆಯಬೇಕು. ಅರ್ಜಿ ನಮೂನೆ, KYC ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಅಥವಾ ಪ್ಯಾನ್ ಕಾರ್ಡ್‌ನಂತಹ KYC ದಾಖಲೆಯನ್ನು ಒದಗಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಬ್ಯಾಂಕ್ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ನೀವು ಠೇವಣಿ ಮೊತ್ತ ಅಥವಾ ಚೆಕ್‌ನೊಂದಿಗೆ ಪೇ-ಇನ್-ಸ್ಲಿಪ್ ಅನ್ನು ಸಹ ಒದಗಿಸಬೇಕಾಗುತ್ತದೆ.
ಪೋಸ್ಟ್ ಆಫೀಸ್ನಲ್ಲಿ ಈ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಿ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.