ಹಬ್ಬಗಳ ಋತು ಶುರು..! ಅಡುಗೆ ಎಣ್ಣೆ ಬೆಲೆಯಲ್ಲಿ 30 ರೂಪಾಯಿ ಇಳಿಕೆ ಮಾಡಿದ ಅದಾನಿ ವಿಲ್ಮರ್‌!

By Santosh Naik  |  First Published Jul 18, 2022, 5:25 PM IST

"ಜಾಗತಿಕ ಬೆಲೆ ಕಡಿತ ಮತ್ತು ಕಡಿಮೆಯಾದ ಖಾದ್ಯ ತೈಲ ಬೆಲೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಸರ್ಕಾರದ ಪ್ರಯತ್ನದ ಮುಂದುವರಿಕೆಯಾಗಿ, ಅದಾನಿ ವಿಲ್ಮಾರ್ ಕಂಪನಿಯು ಅಡುಗೆ ಎಣ್ಣೆಗೆ ಕಳೆದ ತಿಂಗಳಿದ್ದ ಬೆಲೆಯಲ್ಲಿ ಮತ್ತಷ್ಟು ಕಡಿಮೆ ಮಾಡಿದೆ' ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.


ನವದೆಹಲಿ (ಜುಲೈ 18): ಹಣದುಬ್ಬರದಿಂದ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಕೊಂಚ ನೆಮ್ಮದಿ ಸಿಗುವಂಥ ಸುದ್ದಿ ಇದು. ದೇಶದಲ್ಲಿ ಹಬ್ಬಗಳ ಋತು ಆರಂಭವಾಗಲಿರುವ ಬೆನ್ನಲ್ಲಿಯೇ ಆಹಾರ ಉತ್ಪನ್ನ ತಯಾರಕ ಅದಾನಿ ವಿಲ್ಮರ್ ಖಾದ್ಯ ತೈಲದ ಬೆಲೆಯಲ್ಲಿ ಲೀಟರ್‌ಗೆ 30 ರೂಪಾಯಿ ಕಡಿತವನ್ನು ಘೋಷಿಸಿದೆ. ಅದಾನಿ ವಿಲ್ಮರ್ ತನ್ನ ಆಹಾರ ಉತ್ಪನ್ನಗಳನ್ನು ಫಾರ್ಚೂನ್ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತದ ನಡುವೆ, ದೇಶೀಯ ಮಾರುಕಟ್ಟೆಯಲ್ಲಿ ಕಡಿತವನ್ನು ಘೋಷಿಸಲಾಗಿದೆ. ಕೆಲ ದಿನಗಳ ಹಿಂದೆ ತೈಲ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸರ್ಕಾರ ಸಭೆ ನಡೆಸಿ ಚಿಲ್ಲರೆ ಬೆಲೆ ಇಳಿಕೆ ಕುರಿತು ಚರ್ಚೆ ನಡೆಸಿತ್ತು. ಇದಾದ ಬಳಿಕ ಅದಾನಿ ವಿಲ್ಮರ್ ಬೆಲೆ ಇಳಿಕೆ ಮಾಡಿ ಪ್ರಕಟಣೆ ನೀಡಿದೆ. ಅದಾನಿ ವಿಲ್ಮರ್ ಸೋಯಾಬೀನ್ ಎಣ್ಣೆಯ ಬೆಲೆಯಲ್ಲಿ ಹೆಚ್ಚಿನ ಕಡಿತ ಮಾಡಿದ್ದಾರೆ. ಹೊಸ ಬೆಲೆಯೊಂದಿಗೆ ಉತ್ಪನ್ನಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಖಾದ್ಯ ತೈಲದ ಬೆಲೆಗಳ ಬಗ್ಗೆ ಚರ್ಚಿಸಲು ಆಹಾರ ಸಚಿವಾಲಯವು ಜುಲೈ 6 ರಂದು ಸಭೆಯನ್ನು ಕರೆದಿತ್ತು. ಜಾಗತಿಕ ಬೆಲೆ ಇಳಿಕೆಗೆ ಅನುಗುಣವಾಗಿ ಬೆಲೆ ಕಡಿತಗೊಳಿಸುವಂತೆ ತೈಲ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿತ್ತು. ತೈಲ ಬೆಲೆ ಕುಸಿತದ ಲಾಭ ಗ್ರಾಹಕರಿಗೂ ಸಿಗಬೇಕು ಎಂಬುದು ಸರ್ಕಾರದ ಆಶಯವಾಗಿತ್ತು.

ಸೋಯಾಬೀನ್ ಎಣ್ಣೆ ಬೆಲೆ 30 ರೂಪಾಯಿ ಇಳಿಕೆ: ಜಾಗತಿಕ ಬೆಲೆಗಳ ಕುಸಿತವನ್ನು ಗಮನದಲ್ಲಿಟ್ಟುಕೊಂಡು, ಕಡಿಮೆ ದರದಲ್ಲಿ ಗ್ರಾಹಕರಿಗೆ ಖಾದ್ಯ ತೈಲವನ್ನು ತಲುಪಿಸುವ ಸಲುವಾಗಿ ಕಂಪನಿಯು ಈ ಕಡಿತವನ್ನು ಮಾಡಿದೆ ಎಂದು ಅದಾನಿ ವಿಲ್ಮರ್ (Adani Wilmar) ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ತಿಂಗಳು ಕೂಡ ಕಂಪನಿಯು ಖಾದ್ಯ ತೈಲದ ಬೆಲೆಯನ್ನು ಕಡಿಮೆ ಮಾಡಿತ್ತು. ಈ ಕಡಿತದ ನಂತರ, ಫಾರ್ಚೂನ್ ಸೋಯಾಬೀನ್ ಎಣ್ಣೆಯ (soybean oil) ಬೆಲೆಯನ್ನು ಲೀಟರ್‌ಗೆ 195 ರೂ.ನಿಂದ 165 ರೂ.ಗೆ ಇಳಿಸಲಾಗಿದೆ.

ಇದನ್ನೂ ಓದಿ: Edible Oil Price:ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ಇಳಿಕೆ; ಲೀಟರ್ ಗೆ 10ರೂ. ತಗ್ಗಿಸಿದ ಅದಾನಿ ವಿಲ್ಮರ್

Tap to resize

Latest Videos

ಸಾಸಿವೆ ಎಣ್ಣೆ ಕೂಡ ಅಗ್ಗ: ಸೂರ್ಯಕಾಂತಿ ಎಣ್ಣೆ (Sunflower oil) ಬೆಲೆಯನ್ನು ಲೀಟರ್‌ಗೆ 210 ರೂ.ನಿಂದ 199 ರೂ.ಗೆ ಇಳಿಸಲಾಗಿದೆ. ಸಾಸಿವೆ ಎಣ್ಣೆ(mustard oil) ದರವೂ ಕಡಿಮೆಯಾಗಿದೆ. ಸಾಸಿವೆ ಎಣ್ಣೆಯ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಲೀಟರ್‌ಗೆ 195 ರೂ.ನಿಂದ 190 ರೂ.ಗೆ ಇಳಿಕೆಯಾಗಿದೆ. ಫಾರ್ಚೂನ್ ರೈಸ್ ಬ್ರಾನ್ ಆಯಿಲ್ (Fortune Rice Bran Oil ) ಬೆಲೆ ಲೀಟರ್‌ಗೆ 225 ರೂ.ನಿಂದ 210 ರೂ.ಗೆ ಇಳಿಕೆಯಾಗಿದೆ. ಅದೇ ಸಮಯದಲ್ಲಿ ಕಡಲೆ ಎಣ್ಣೆಯ (groundnut oil ) ಎಂಆರ್‌ಪಿ ಲೀಟರ್‌ಗೆ 220 ರೂ.ನಿಂದ 210 ರೂ.ಗೆ ಇಳಿಕೆಯಾಗಿದೆ. 

ಇದನ್ನೂ ಓದಿ: Edible Oil: ಖಾದ್ಯ ತೈಲ ಕಂಪನಿಗಳಿಂದ ಶೇ.10-15ರಷ್ಟು ಬೆಲೆ ಕಡಿತ!

ಹಬ್ಬ ಹರಿದಿನಗಳಲ್ಲಿ ಬೇಡಿಕೆ ಹೆಚ್ಚಲಿದೆ: ಜಾಗತಿಕ ಬೆಲೆಗಳ ಕುಸಿತದ ಲಾಭವನ್ನು ನಾವು ನಮ್ಮ ಗ್ರಾಹಕರಿಗೆ ವರ್ಗಾಯಿಸಿದ್ದೇವೆ ಎಂದು ಅದಾನಿ ವಿಲ್ಮಾರ್ ಎಂಡಿ ಮತ್ತು ಸಿಇಒ ಅಂಗ್ಶು ಮಲಿಕ್ ಹೇಳಿದ್ದಾರೆ. ಹೊಸ ಬೆಲೆಗಳೊಂದಿಗೆ ಉತ್ಪನ್ನಗಳು ಶೀಘ್ರದಲ್ಲೇ ಮಾರುಕಟ್ಟೆಯನ್ನು ತಲುಪುತ್ತವೆ. ನಮ್ಮ ಉತ್ಪನ್ನಗಳು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಕ್ರಮವು ಮುಂಬರುವ ಹಬ್ಬದ ಋತುವಿನಲ್ಲಿ ತೈಲದ ಬೇಡಿಕೆಯನ್ನು ಹೆಚ್ಚಿಸುತ್ತದೆ. ಜಾಗತಿಕ ಬೆಲೆಯಲ್ಲಿನ ತೀವ್ರ ಕುಸಿತದ ದೃಷ್ಟಿಯಿಂದ ತೈಲ ಬೆಲೆಗಳು ತೀವ್ರವಾಗಿ ಇಳಿದಿವೆ ಎಂದು ಕಂಪನಿ ಹೇಳಿದೆ. ಅದಾನಿ ವಿಲ್ಮಾರ್ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ FMCG ಕಂಪನಿಗಳಲ್ಲಿ ಒಂದಾಗಿದೆ. ಖಾದ್ಯ ತೈಲದ ಹೊರತಾಗಿ, ಕಂಪನಿಯು ಅಕ್ಕಿ, ಹಿಟ್ಟು, ಸಕ್ಕರೆ, ಬೇಳೆ ಹಿಟ್ಟು, ರೆಡಿ-ಟು-ಕುಕ್ ಖಿಚಡಿ ಸೇರಿದಂತೆ ಹಲವು ಉತ್ಪನ್ನಗಳನ್ನು ಸಹ ತಯಾರಿಸುತ್ತದೆ.

click me!