Vegetable Price Decrease; ಆಷಾಡ ಹಿನ್ನೆಲೆ ತರಕಾರಿ ಬೆಲೆ ಕೊಂಚ ಇಳಿಕೆ

Published : Jul 18, 2022, 11:30 AM IST
Vegetable Price Decrease; ಆಷಾಡ ಹಿನ್ನೆಲೆ ತರಕಾರಿ ಬೆಲೆ ಕೊಂಚ ಇಳಿಕೆ

ಸಾರಾಂಶ

ಆಷಾಡ ಹಿನ್ನೆಲೆ ತರಕಾರಿ ಬೆಲೆ ಕೊಂಚ ಇಳಿಕೆ. ನಗರಕ್ಕೆ ತರಕಾರಿ, ಹಣ್ಣು ಪೂರೈಕೆ ಹೆಚ್ಚಳ. ಗ್ರಾಹಕರಿಗೆ ಕೊಂಚ ನೆಮ್ಮದಿ. ರೈತರಿಗೆ ಬೇಸರ. 

ಬೆಂಗಳೂರು (ಜು.18): ಅಷಾಡ ಮಾಸದ ಕಾರಣಕ್ಕೆ ಮದುವೆ ಸೇರಿದಂತೆ ಶುಭ ಸಮಾರಂಭಗಳು ಕಡಿಮೆಯಾದ ಕಾರಣ ತರಕಾರಿ ಬೆಲೆಯಲ್ಲಿ ತುಸು ಇಳಿಕೆ ಕಂಡಿದ್ದು, ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ. ರೈತರಿಗೆ ಉತ್ಪಾದನಾ ಬೆಲೆಯು ಸಿಗದಂತಾಗಿದೆ. ಬೀನ್ಸ್‌, ಟೊಮೆಟೋ, ಕ್ಯಾರೆಟ್‌ ಮತ್ತು ಹಸಿ ಮೆಣಸಿನಕಾಯಿಯ ಬೆಲೆ ಗಗನಕ್ಕೇರಿದ್ದವು. ಜತೆಗೆ, ನಮ್ಮ ರಾಜ್ಯದಲ್ಲಿನ ತರಕಾರಿಗಳ ಕೊರತೆ ನೀಗಿಸಲು ಮಹಾರಾಷ್ಟ್ರದ ನಾಸಿಕ್‌ನಿಂದ ಟೊಮೆಟೋ ತರಿಸಿಕೊಳ್ಳಲಾಗಿತ್ತು. ಆದರೆ, ಇದೀಗ ಯಾವುದೇ ಶುಭ ಸಮಾರಂಭಗಳು ನಡೆಯದ ಪರಿಣಾಮ ಬೆಲೆ ಕುಸಿದಿದೆ ಎಂದು ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರಕ್ಕೆ ಹಣ್ಣು ತರಕಾರಿ ಪೂರೈಕೆ ಮಾಡುತ್ತಿರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಉತ್ತಮ ಫಸಲು ಬಂದಿದೆ. ಪರಿಣಾಮ ಮಾರುಕಟ್ಟೆಗೆ ಬರುವ ತರಕಾರಿಗಳ ಪ್ರಮಾಣ ಹೆಚ್ಚಾಗಿದ್ದು, ಬೇಡಿಕೆ ಕುಸಿದಿದೆ ಎಂದು ಬೆಂಗಳೂರು ಹಣ್ಣು-ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗೋಪಿ ಮಾಹಿತಿ ನೀಡಿದ್ದಾರೆ.

ಶೇ.40ರವರೆಗೂ ಇಳಿಕೆ: ಕಳೆದ ತಿಂಗಳಲ್ಲಿ ಪ್ರತಿ ಕೇಜಿ ಬೀನ್ಸ್‌ಗೆ .150-180 ರವರೆಗೂ ಇತ್ತು. ಟೊಮೆಟೋ ದರ .70-80 ತಲುಪಿತ್ತು. ಆದರೆ ಇದೀಗ ಕ್ರಮವಾಗಿ .80 ಹಾಗೂ .10ಕ್ಕೆ ಇಳಿದೆ. ಇದಲ್ಲದೆ .40 ತಲುಪಿದ್ದ ಮೂಲಂಗಿ ಕೂಡ .20ಕ್ಕೆ ಇಳಿದಿದೆ. ಕೆ.ಜಿ. ಸಬ್ಬಸಿಗೆ ಸೊಪ್ಪು, ಮೆಂತ್ಯ ಸೊಪ್ಪುಗಳು .40 ದಾಟಿದ್ದವು. ಆದರೆ ಇದೀಗ ಕ್ರಮವಾಗಿ .10ರಿಂದ .15ಕ್ಕೆ ಲಭ್ಯವಾಗುತ್ತಿದೆ. ಕೊತ್ತಂಬರಿ ಸೊಪ್ಪಿನ ದರ ಕೂಡ .60 ಗಳಿತ್ತು. ಇದೀಗ ಅದರ ಬೆಲೆ .30ಕ್ಕೆ ಇಳಿಕೆಯಾಗಿದೆ.

ಹೂವಿನ ಬೆಲೆಯಲ್ಲಿ ಕುಸಿತ: ಹಬ್ಬಗಳು, ವಿವಾಹ ಕಾರ್ಯಕ್ರಮಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿ ಕೆ.ಜಿ. ಗುಲಾಬಿ ಹೂವಿಗೆ .250 ಇತ್ತು. ಇದೀಗ ಸಗಟು ವ್ಯಾಪಾರದಲ್ಲಿ .120 ರವರೆಗೆ ಮಾರಾಟವಾಗುತ್ತಿದೆ. ಚಿಲ್ಲರೆ ವ್ಯಾಪಾರದಲ್ಲಿ .150ರವರೆಗೂ ಮಾರಾಟವಾಗುತ್ತಿದೆ. ಇದು ಹೂವಿಗೆ ಬಳಕೆ ಮಾಡುತ್ತಿರುವ ಔಷಧಗಳು, ಕೂಲಿ ಕಾರ್ಮಿಕರಿಗೆ ನೀಡುವುದಕ್ಕೂ ಸರಿ ಹೊಂದುತ್ತಿಲ್ಲ ಎಂದು ಚಿಕ್ಕಬಳ್ಳಾಪುರದ ಹೂವಿನ ಬೆಳಗಾರ ವೆಂಕಟೇಶ್‌ ಎಂಬುವರು ವಿವರಿಸಿದರು.

ಪ್ರಮುಖ ತರಕಾರಿಗಳ ಮಾರುಕಟ್ಟೆ ಬೆಲೆ (ಪ್ರತಿ ಕೇಜಿಗೆ)

ಬೀನ್ಸ್‌ .57

ಬೀಟ್‌ರೂಟ್‌ .50

ಕ್ಯಾಪ್ಸಿಕಾಂ .35

ಎಲೆಕೋಸು .23(ಪ್ರತಿ ಗಡ್ಡೆಗೆ)

ಹೂಕೋಸು .24(ಪ್ರತಿ ಹೂವಿಗೆ)

ಕ್ಯಾರೆಟ್‌ .52

ನುಗ್ಗೆಕಾಯಿ .50

ಬದನೆಕಾಯಿ .20

ಹಸಿ ಮೆಣಸಿನ ಕಾಯಿ .34

ಈರುಳ್ಳಿ .33

ಆಲೂಗಡ್ಡೆ .30

ಟೊಮೆಟೋ .12

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!