ಅತ್ಯಂತ ಕಡಿಮೆ ಬೆಲೆಗೆ ಮದ್ಯ ಸಿಗೋ ಈ ರಾಜ್ಯ ಜನರ ಅಚ್ಚುಮೆಚ್ಚು!

By Suvarna News  |  First Published Sep 26, 2023, 3:05 PM IST

ಮದ್ಯಪ್ರಿಯರು ಯಾವಾಗ ಕುಡಿಯೋ ಅವಕಾಶ ಸಿಗುತ್ತೆ ಅಂತಾ ಹುಡುಕ್ತಿರ್ತಾರೆ. ಪುಕ್ಕಟ್ಟೆ ಪಾರ್ಟಿ ಸಿಕ್ಕಿದ್ರೆ ಬಿಡೋ ಛಾನ್ಸೆ ಇಲ್ಲ. ಹಾಗೆ ಅಗ್ಗದ ಬೆಲೆಗೆ ಮದ್ಯ ಸಿಗ್ತಿದ್ರೆ ಕ್ಯೂ ನಿಲ್ತಾದೆ. ಇದೇ ಕಾರಣಕ್ಕೆ ಈ ರಾಜ್ಯಕ್ಕೆ ಹೋಗೋ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಅದ್ಯಾವ ರಾಜ್ಯ ಗೊತ್ತಾ?   
 


ಪ್ರವಾಸಿಗರ ಸ್ವರ್ಗ ಅಂದ್ರೆ ಗೋವಾ. ಇಲ್ಲಿನ ಸುಂದರ ಪರಿಸರ, ಬೀಚ್ ಗಳು ಪ್ರವಾಸಿಗರನ್ನು ಸದಾ ಸೆಳೆಯುತ್ತವೆ. ಒಂದು ಬಾರಿ ಗೋವಾಕ್ಕೆ ಹೋಗಿ ಬಂದವರು ಮತ್ತೆ ಮತ್ತೆ ಅಲ್ಲಿಗೆ ಹೋಗ ಬಯಸ್ತಾರೆ. ಗೋವಾ ಬರೀ ಬೀಚ್, ನೈಟ್ ಪಾರ್ಟಿಗಳಿಗೆ ಮಾತ್ರ ಪ್ರಸಿದ್ಧಿಯಾಗಿಲ್ಲ, ಇಲ್ಲಿನ ಮದ್ಯ ಕೂಡ ಪ್ರವಾಸಿಗರನ್ನು ಸೆಳೆಯುತ್ತದೆ. ಗೋವಾ (Goa) ದಲ್ಲಿ ಮೆಡಿಕಲ್ ಶಾಪ್, ದಿನಸಿ ಅಂಗಡಿಗಳು ನಿಮಗೆ ಕಡಿಮೆ ಕಾಣಸಿಗಬಹುದು ಆದ್ರೆ ಮದ್ಯ (Alcohol) ದಂಗಡಿಗಳು ಮಾತ್ರ ಮಾರು ಮಾರಿಗಿದೆ. ಇಲ್ಲಿ ಬಂದು ಗಂಟಲು ಕಟ್ಟುವಷ್ಟು ಆಲ್ಕೋಹಾಲ್ ಸೇವನೆ ಮಾಡುವ ಜನರು ತಮ್ಮ ಬ್ಯಾಗ್ ನಲ್ಲಿ ಒಂದಿಷ್ಟು ಬಾಟಲಿ ತುಂಬಿಕೊಂಡು ಹೋಗ್ತಾರೆ. ಹಾಗಂತ ಅವರಿಷ್ಟದಂತೆ ಬಾಟಲಿ ಖರೀದಿ ಮಾಡಿ ಬೇರೆ ರಾಜ್ಯ (State) ಕ್ಕೆ ಸಾಗಿಸುವಂತಿಲ್ಲ. ಇದಕ್ಕೆ ಆಯಾ ರಾಜ್ಯಗಳು ಕಟ್ಟುನಿಟ್ಟಿನ ಕಾನೂನು ರೂಪಿಸಿವೆ. 

ಮದ್ಯದ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.  ದೇಶದಲ್ಲಿ ಅತಿ ಅಗ್ಗದ ಬೆಲೆಗೆ ಮದ್ಯ ಸಿಗುವ ರಾಜ್ಯ ಗೋವಾ. ಗೋವಾದಲ್ಲಿ ತೆರಿಗೆ ದರಗಳು ದೇಶದಲ್ಲೇ ಅತ್ಯಂತ ಕಡಿಮೆಯಾಗಿದೆ. ಅದೇ ನಮ್ಮ ಕರ್ನಾಟಕದಲ್ಲಿ ಮದ್ಯದ ಮೇಲಿನ ತೆರಿಗೆ ದರ ಅತ್ಯಂತ ಹೆಚ್ಚಿದೆ.  ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಮತ್ತು ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ನಡೆಸಿದ ವಿಶ್ಲೇಷಣೆಯ ಪ್ರಕಾರ, ವಿಸ್ಕಿ, ರಮ್, ವೋಡ್ಕಾ ಮತ್ತು ಜಿನ್ ಮದ್ಯದ ಬಾಟಲಿಯ ಬೆಲೆ ಗೋವಾದಲ್ಲಿ  ಅಗ್ಗದ ಬೆಲೆಗೆ ಸಿಗುತ್ತದೆ.  ಗೋವಾದಲ್ಲಿ ನೂರು ರೂಪಾಯಿಗೆ ಸಿಗುವ ಬಾಟಲಿ ಕರ್ನಾಟಕದಲ್ಲಿ 500 ಆಗಿರಬಹುದು. 

Tap to resize

Latest Videos

ಗೋವಾದಲ್ಲಿ ಮದ್ಯದ ಬೆಲೆ ಕಡಿಮೆಯಾಗಲು ಹಲವಾರು ಕಾರಣಗಳಿವೆ. ಅವುಗಳ ವಿವರ : 

ಕಡಿಮೆ ಅಬಕಾರಿ ಸುಂಕ : ಸರ್ಕಾರಗಳಿಗೆ ಆದಾಯದ ಮೂಲಗಳಲ್ಲಿ ಅಬಕಾರಿ ಇಲಾಖೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪ್ರತಿ ಸರ್ಕಾರದ ಖಜಾನೆ ತುಂಬುವ ಇಲಾಖೆ ಇದಾಗಿದೆ. ಸರಕಾರಗಳು ಕೂಡ ಇದರ ಸಂಪೂರ್ಣ ಲಾಭ ಪಡೆಯಲು ಯಾವ ಅವಕಾಶವನ್ನೂ ಬಿಡುವುದಿಲ್ಲ. ಗೋವಾದಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವು ಇತರ ರಾಜ್ಯಗಳಿಗಿಂತ ಕಡಿಮೆಯಾಗಿದೆ. ಉದಾಹರಣೆಗೆ ಗೋವಾದಲ್ಲಿ 750 ಮಿಲಿ ವಿಸ್ಕಿಯ ಬಾಟಲಿಯ ಬೆಲೆ 1,500 ರೂಪಾಯಿ. ಕರ್ನಾಟಕದಲ್ಲಿ ಅದೇ ಬಾಟಲಿಯ ಬೆಲೆ 3,000 ರೂಪಾಯಿ.

ಅಲ್ಪ ಆದಾಯದಲ್ಲೇ ದುಡ್ಡಿನ ಉಳಿತಾಯ ಹೇಗೆ? ಮೂರು ಟಿಪ್ಸ್​ ಕೊಟ್ಟ ನಟಿ ಅದಿತಿ ಪ್ರಭುದೇವ

ಪ್ರವಾಸೋದ್ಯಮ : ಗೋವಾ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಗೋವಾಕ್ಕೆ ಪ್ರತಿ ದಿನ ಲಕ್ಷಾಂತರ ಮಂದಿ ಬರ್ತಾರೆ. ಗೋವಾದಲ್ಲಿ ಮದ್ಯದ ಬೆಲೆ ಕಡಿಮೆ ಇದೆ ಹಾಗೂ ಎಲ್ಲೆಂದ್ರಲ್ಲಿ ಆರಾಮವಾಗಿ ಮದ್ಯ ಸೇವನೆ ಮಾಡ್ಬಹುದು ಎನ್ನುವ ಕಾರಣಕ್ಕೇ ದೇಶದ ಮೂಲೆ ಮೂಲೆಯಿಂದಲ್ಲದೆ ವಿದೇಶದಿಂದಲೂ ಪ್ರವಾಸಿಗರು ಇಲ್ಲಿಗೆ ಬರ್ತಾರೆ. ಪ್ರವಾಸಿಗರನ್ನು ಆಕರ್ಷಿಸಲು  ರಾಜ್ಯ ಸರ್ಕಾರವು ಮದ್ಯದ ಬೆಲೆಯನ್ನು ಕಡಿಮೆ ಮಾಡುತ್ತದೆ.

ಆರ್ಥಿಕ ಸ್ಥಿತಿ : ಇತರ ರಾಜ್ಯಗಳಿಗೆ ಹೋಲಿಸಿದರೆ ಗೋವಾ ಆರ್ಥಿಕತೆಯಲ್ಲಿ ಹಿಂದುಳಿದಿದೆ. ಗೋವಾ ಇತರ ರಾಜ್ಯಗಳಿಗಿಂತ ಕಡಿಮೆ ಅಭಿವೃದ್ಧಿ ಹೊಂದಿದೆ. ಕಡಿಮೆ ಆದಾಯದ ಜನರಿಗೆ ಅಗ್ಗದ ಮದ್ಯ ಒದಗಿಸುವುದು ಇದ್ರ ಒಂದು ಕಾರಣವಾಗಿದೆ.

Chanakya Niti: ನೀವು ಬಡವರಾಗಿದ್ದರೆ ಅದಕ್ಕೆ ನಿಮ್ಮ ಈ ಅಭ್ಯಾಸಗಳೇ ಕಾರಣ..

ಗೋವಾದಲ್ಲಿ ಮದ್ಯದ ಬೆಲೆ ಎಷ್ಟು ಗೊತ್ತಾ? :  750 ಮಿಲಿ ವಿಸ್ಕಿ ಬಾಟಲಿ ಬೆಲೆ 1,500 ರೂಪಾಯಿಗೆ ಮಾರಾಟ ಆಗ್ತಿದೆ. ಅದೇ 750 ಎಂಎಲ್ ವೈನ್ ಬಾಟಲಿ ಬೆಲೆ 1,000 ರೂಪಾಯಿ. 750 ಎಂಎಲ್ ಬಿಯರ್ ಬಾಟಲಿ 500 ರೂಪಾಯಿಗೆ ನಿಮಗೆ ಸಿಗುತ್ತದೆ. ಈ ರಾಜ್ಯದಲ್ಲೂ ಕಡಿಮೆ ಬೆಲೆಗೆ ಸಿಗುತ್ತದೆ ಮದ್ಯ : ಗೋವಾ ನಂತರ ಪಾಂಡಿಚೇರಿಯಲ್ಲಿ ಅಗ್ಗದ ಮದ್ಯ ದೊರೆಯುತ್ತದೆ. ದಮನ್ ಮತ್ತು ದಿಯು, ಪಂಜಾಬ್, ಹರಿಯಾಣ, ದೆಹಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 

click me!