ಅಂಚೆ ಕಚೇರಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ಬ್ಯಾಂಕ್ ಎಫ್ ಡಿಗಿಂತ ಅಧಿಕ ಬಡ್ಡಿ!

By Suvarna News  |  First Published Dec 28, 2022, 4:41 PM IST

ಉತ್ತಮ ಬಡ್ಡಿ ನೀಡುವ ಜೊತೆಗೆ ತೆರಿಗೆ ಉಳಿತಾಯದ ಪ್ರಯೋಜನ ನೀಡುವ ಅನೇಕ ಯೋಜನೆಗಳು ಅಂಚೆ ಕಚೇರಿಯಲ್ಲಿವೆ. ಅವುಗಳಲ್ಲಿ ಟೈಮ್ ಡೆಫಾಸಿಟ್ ಕೂಡ ಒಂದು. ಹಾಗಾದ್ರೆ ಟೈಮ್ ಡೆಫಾಸಿಟ್ ಖಾತೆ ತೆರೆಯೋದು ಹೇಗೆ? ಬಡ್ಡಿ ಎಷ್ಟಿದೆ? 


Business Desk: ಅಂಚೆ ಕಚೇರಿಯಲ್ಲಿ ಹೂಡಿಕೆ ಅಥವಾ ಉಳಿತಾಯಕ್ಕೆ ಅನೇಕ ಯೋಜನೆಗಳು ಲಭ್ಯವಿವೆ. ಆಯಾ ವಯೋಮಾನ, ಆದಾಯದ ಆಧಾರದಲ್ಲಿ ಉಳಿತಾಯ ಮಾಡಲು ಅನುಕೂಲವಾಗುವಂತಹ ಯೋಜನೆಗಳಿವೆ. ಅಂಚೆ ಕಚೇರಿಯಲ್ಲಿ ಸ್ಥಿರ ಠೇವಣಿ ಅಥವಾ ಎಫ್ ಡಿ ಖಾತೆ ತೆರೆಯಲು ಕೂಡ ಅವಕಾಶವಿದೆ. ಇನ್ನು ಎಫ್ ಡಿಯಲ್ಲಿ ಕೂಡ ವಿಧಗಳಿದ್ದು, ಟೈಮ್ ಡೆಫಾಸಿಟ್ ಯೋಜನೆ ಮುಖ್ಯವಾದದ್ದು. ಇದು ಹೂಡಿಕೆದಾರರಿಗೆ ನಿರ್ದಿಷ್ಟ ಅವಧಿ ತನಕ ಹಣವನ್ನು ಹೂಡಿಕೆ ಮಾಡಲು ಅವಕಾಶ ಕಲ್ಪಿಸುತ್ತದೆ. ಇದು ಸುರಕ್ಷಿತ ಹಾಗೂ ಸುಭದ್ರವಾದ ಹೂಡಿಕೆ ಯೋಜನೆಯಾಗಿದ್ದು, ಉಳಿತಾಯ ಖಾತೆಗೆ ಹೋಲಿಸಿದ್ರೆ ಅಧಿಕ ಬಡ್ಡಿದರವನ್ನು ನೀಡುತ್ತದೆ. ಅಂಚೆ ಕಚೇರಿ ಅವಧಿ ಠೇವಣಿ ಕನಿಷ್ಠ ಒಂದು ವರ್ಷ ಹಾಗೂ ಗರಿಷ್ಠ ಐದು ವರ್ಷಗಳ   ಅವಧಿಗೆ ಲಭ್ಯವಿದೆ. ಈ ಖಾತೆಯಲ್ಲಿ ಹೂಡಿಕೆಯನ್ನು 200ರೂ.ನಿಂದ ಪ್ರಾರಂಭಿಸಬಹುದಾಗಿದ್ದು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಈ ಯೋಜನೆ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಈ ಯೋಜನೆ ಮೇಲಿನ ಬಡ್ಡಿದರ ಸಾಮಾನ್ಯವಾಗಿ ಬ್ಯಾಂಕ್ ಎಫ್ ಡಿಗಿಂತ ಹೆಚ್ಚಿರುತ್ತದೆ.

ಅವಧಿ ಠೇವಣಿ ತೆರೆಯೋದು ಹೇಗೆ?
ಹೂಡಿಕೆದಾರರು ಅಂಚೆ ಕಚೇರಿ ಅವಧಿ ಠೇವಣಿ (Time Deposit) ಖಾತೆಯನ್ನು ಯಾವುದೇ ಅಂಚೆ ಕಚೇರಿಯಲ್ಲಿ (Post office) ತೆರೆಯಬಹುದು. ಭಾರತೀಯ ಅಂಚೆ ಇಲಾಖೆಯ ಆನ್ ಲೈನ್ ಪೋರ್ಟಲ್ ಮೂಲಕ ಕೂಡ ತೆರೆಯಲು ಅವಕಾಶವಿದೆ. ಈ ಖಾತೆಯನ್ನು ವೈಯಕ್ತಿಕ ಅಥವಾ ಜಂಟಿಯಾಗಿ ತೆರೆಯಬಹುದು. ನಾಮನಿರ್ದೇಶನದ (Nomination) ಸೌಲಭ್ಯ ಕೂಡ ಇದೆ. 

Tap to resize

Latest Videos

ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಹೊಸ ವರ್ಷದಲ್ಲಿ ಬಿಡುಗಡೆ?

ಬಡ್ಡಿದರ
ಇನ್ನು ಹೂಡಿಕೆದಾರರು ತಮ್ಮ ಹೂಡಿಕೆಯ ಮೇಲೆ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ಮೆಚ್ಯುರಿಟಿ ಸಮಯದಲ್ಲಿ ಬಡ್ಡಿ (Interest) ಹಣವನ್ನು ಪಡೆಯಬಹುದಾಗಿದೆ. ಅಂಚೆ ಇಲಾಖೆ ಟೈಮ್ ಡೆಫಾಸಿಟ್ ಪ್ರಸ್ತುತ ಸರಾಸರಿ ಶೇ.5.5ರಿಂದ ಶೇ.6.7 ಬಡ್ಡಿದರ ಹೊಂದಿದೆ. ಇದು ಬ್ಯಾಂಕ್ ಎಫ್ ಡಿ  (FD) ಬಡ್ಡಿದರಕ್ಕಿಂತ ಹೆಚ್ಚಿದೆ. ಬ್ಯಾಂಕ್ ಗಳ ಎಫ್ ಡಿ ಬಡ್ಡಿದರ ಸರಾಸರಿ ಶೇ.5.5ರಿಂದ ಶೇ.6ರ ತನಕ ಇದೆ. ಇನ್ನು ಈ ಯೋಜನೆಯಲ್ಲಿ ಬ್ಯಾಂಕ್ ಗಳ ಎಫ್ ಡಿಗಳಂತೆ ಹಿರಿಯ ನಾಗರಿಕರಿಗೆ (Senior Citizen) ಹೆಚ್ಚಿನ ಬಡ್ಡಿ ಇರುವುದಿಲ್ಲ. 

ಸುರಕ್ಷಿತ ಹಾಗೂ ಸುಭದ್ರ
ಅಂಚೆ ಕಚೇರಿ ಟೈಮ್ ಡೆಫಾಸಿಟ್ ಯೋಜನೆಗೆ ಕೇಂದ್ರ ಸರ್ಕಾರದ ಬೆಂಬಲವಿರುವ ಕಾರಣ ಇದರಲ್ಲಿ ಹೂಡಿಕೆ (Invest) ಮಾಡಿದ ಹಣ ಸುರಕ್ಷಿತವಾಗಿರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣದ ಮೇಲಿನ ಬಡ್ಡಿಗೆ ನಿರ್ದಿಷ್ಟ ಮಿತಿ ತನಕ ಯಾವುದೇ ತೆರಿಗೆ (Tax) ಇರೋದಿಲ್ಲ. 

ಖಾತೆ ತೆರೆಯೋದು ಸುಲಭ
ಇನ್ನು ಅಂಚೆ ಕಚೇರಿ ಟೈಮ್ ಡೆಫಾಸಿಟ್ ಖಾತೆ ತೆರೆಯುವ ಪ್ರಕ್ರಿಯೆ ಕೂಡ ತುಂಬಾ ಸರಳವಾಗಿದೆ. ಹೂಡಿಕೆದಾರರು ಯಾವುದೇ ಅಂಚೆ ಕಚೇರಿಗೆ ಭೇಟಿ ನೀಡಿ ಖಾತೆ ತೆರೆಯಬಹುದು ಅಥವಾ ಮನೆಯಲ್ಲೇ ಕುಳಿತು ಆನ್ ಲೈನ್ ಪೋರ್ಟಲ್ ಮೂಲಕ ಕೂಡ ಖಾತೆ ತೆರೆಯಲು ಅವಕಾಶವಿದೆ. ಈ ಯೋಜನೆ ಬ್ಯಾಂಕ್ ಖಾತೆ ಹೊಂದಿರದವರಿಗೆ ಹೆಚ್ಚು ಉಪಯುಕ್ತವಾಗಿದೆ. ಅಂಥವರು ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಟೈಮ್ ಡೆಫಾಸಿಟ್ ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಸಿನವರು ಕೂಡ ಈ ಖಾತೆ ತೆರೆಯಬಹುದು. 

ಒಬ್ಬ ವ್ಯಕ್ತಿ ಎರಡು ಪಿಪಿಎಫ್ ಖಾತೆ ಹೊಂದಬಹುದಾ? ನಿಯಮ ಏನ್ ಹೇಳುತ್ತೆ?

ತೆರಿಗೆ ವಿನಾಯ್ತಿ
5 ವರ್ಷಗಳ ಅವಧಿಯ ಟೈಮ್ ಡೆಫಾಸಿಟ್ ಖಾತೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಮಾತ್ರ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯ್ತಿ ಇದೆ. 1.5ಲಕ್ಷ ರೂ. ತನಕ ತೆರಿಗೆ ಪ್ರಯೋಜನ ಪಡೆಯಬಹುದು.
 

click me!