ಇಂದು ರತನ್ ಟಾಟಾ ಜನ್ಮದಿನ; ಅವರ ಬಳಿಯಿರುವ 5 ದುಬಾರಿ ವಸ್ತುಗಳು ಯಾವುವು ಗೊತ್ತಾ?

Published : Dec 28, 2022, 02:33 PM IST
ಇಂದು ರತನ್ ಟಾಟಾ ಜನ್ಮದಿನ; ಅವರ ಬಳಿಯಿರುವ 5 ದುಬಾರಿ ವಸ್ತುಗಳು ಯಾವುವು ಗೊತ್ತಾ?

ಸಾರಾಂಶ

ಡಿಸೆಂಬರ್ 28 ರತನ್ ಟಾಟಾ ಅವರ ಜನ್ಮದಿನ. 85ನೇ ವಸಂತಕ್ಕೆ ಕಾಲಿಟ್ಟಿರುವ ರತನ್ ಟಾಟಾ ಅವರ ಬಳಿಯಿರುವ ದುಬಾರಿ ವಸ್ತುಗಳು ಯಾವುವು? ಇಲ್ಲಿದೆ ಮಾಹಿತಿ.   

ನವದೆಹಲಿ (ಡಿ.28):  ಇಂದು ಭಾರತದ ಉದ್ಯಮ ಜಗತ್ತಿನ ದಿಗ್ಗಜ ರತನ್ ಟಾಟಾ ಅವರ  ಜನ್ಮದಿನ. ಡಿ.28ಕ್ಕೆ ಅವರಿಗೆ 85 ವರ್ಷ ತುಂಬಿದೆ. ರತನ್ ಟಾಟಾ, ಈ ಹೆಸರು ಕೇಳಿದ ತಕ್ಷಣ ಭಾರತೀಯರ ಮನಸ್ಸಿನಲ್ಲಿ ಗೌರವ, ಹೆಮ್ಮೆ ಎರಡೂ ಮೂಡುತ್ತದೆ. ಟಾಟಾ ಸಂಸ್ಥೆಯ ಮುಖ್ಯಸ್ಥರಿಗೆ ಅವರು ಭಾರತದ ಉದ್ಯಮ ಜಗತ್ತನ್ನಷ್ಟೇ ವಿಸ್ತರಿಸಿಲ್ಲ. ಬದಲಿಗೆ ಸಂಕಷ್ಟದ ಸಮಯದಲ್ಲಿ ದೇಶದ ಜನರಿಗೆ ಅನೇಕ ವಿಧದಲ್ಲಿ ನೆರವಾಗಿದ್ದಾರೆ. ಸಹೃದಯ ಹಾಗೂ ಮಾನವೀಯತೆಯ ಮೂಲಕ ಕೋಟ್ಯಂತರ ಭಾರತೀಯರ ಮನಗೆದ್ದಿದ್ದಾರೆ. ಈ ಇಳಿವಯಸ್ಸಿನಲ್ಲೂ ಅವರ ಉತ್ಸಾಹ, ದೂರದೃಷ್ಟಿ ಎಲ್ಲರಿಗೂ ಮಾದರಿ. ಶ್ರೀಮಂತ ಉದ್ಯಮಿಯಾದರೂ ಸಾಮಾನ್ಯರಂತೆ ನಡೆದುಕೊಳ್ಳುವ ಅವರ ಗುಣ ಸಾಕಷ್ಟು ಜನಮೆಚ್ಚುಗೆ ಗಳಿಸಿದೆ ಕೂಡ. ಇನ್ನು ಅವರ ಮಾತುಗಳು ಕೂಡ ಸ್ಫೂರ್ತಿದಾಯಕ. ಇತ್ತೀಚೆಗೆ ಅವರ ಜೀವನವನ್ನು ತೆರೆಯ ಮೇಲೆ ತರುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ವರದಿಯಾಗಿತ್ತು.  ರತನ್ ಟಾಟಾ ಅವರ ಬಯೋಪಿಕ್ ಗೆ  ಖ್ಯಾತ ನಿರ್ದೇಶಕಿ ಸುಧಾ ಕೊಂಗಾರ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ರತನ್ ಟಾಟಾ ಅವರ 85ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಬಳಿಯಿರುವ ಅತ್ಯಂತ ದುಬಾರಿ ಬೆಲೆಯ 5 ವಸ್ತುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

1.ಫೆರಾರಿ ಕ್ಯಾಲಿಫೋರ್ನಿಯಾ
ರತನ್ ಟಾಟಾ ಅವರಿಗೆ ತಮ್ಮ ಬಳಿಯಿರುವ ಕೆಂಪು ಬಣ್ಣದ ಫೆರಾರಿ ಕಾರು ಅಂದ್ರೆ ಪಂಚಪ್ರಾಣ ಎಂಬ ವಿಷಯ ಗುಟ್ಟಾಗಿ ಉಳಿದಿಲ್ಲ. 4.3 ಲೀಟರ್  V8 ಎಂಜಿನ್ ಸಾಮರ್ಥ್ಯದ ಎರಡು ಬಾಗಿಲುಗಳನ್ನು ಹೊಂದಿರುವ 2+2 ಹಾರ್ಡ್ ಟಾಪ್ ಹೊಂದಿರುವ ಫೆರಾರಿ ಕ್ಯಾಲಿಫೋರ್ನಿಯಾ ದುಬಾರಿ ಕಾರುಗಳಲ್ಲಿ ಒಂದಾಗಿದೆ. ರತನ್ ಟಾಟಾ ಆಗಾಗ ತಮ್ಮ ಫೆರಾರಿಯಲ್ಲಿ ಸುತ್ತಾಟ ನಡೆಸುತ್ತಿರುತ್ತಾರೆ.

ಗೃಹಿಣಿಯರೇ, ಹೊಸ ವರ್ಷಕ್ಕೆ ಈ 6 ಟಿಪ್ಸ್ ಅನುಸರಿಸಿ, ಹಣ ಉಳಿಸಿ

2.ಡೆಸಾಲ್ಟ್ ಫಾಲ್ಕನ್ ಪ್ರೈವೇಟ್ ಜೆಟ್
ರತನ್ ಟಾಟಾ ಅವರ ಬಳಿ ಡೆಸಾಲ್ಟ್ ಫಾಲ್ಕನ್  2000 ಜೆಟ್ ಇದೆ. ಆದರೆ, ಇತರ ಶ್ರೀಮಂತ ವ್ಯಕ್ತಿಗಳಂತೆ ಇವರು ಬಳಿ ಪ್ರೈವೇಟ್ ಜೆಟ್ ಮಾತ್ರ ಹೊಂದಿಲ್ಲ, ಬದಲಿಗೆ ಅದನ್ನು ಸ್ವಂತ ಚಲಾಯಿಸುವ ಅರ್ಹತೆಯನ್ನು ಕೂಡ ಪಡೆದಿದ್ದಾರೆ. ಹೌದು, ರತನ್ ಟಾಟಾ ಅವರು ಪೈಲಟ್ ತರಬೇತಿ ಕೂಡ ಹೊಂದಿದ್ದಾರೆ. ರತನ್ ಟಾಟಾ ಅವರ ಜೆಟ್ ಅನ್ನು ಅತ್ಯುನ್ನತ ಕೌಶಲ್ಯ ಹೊಂದಿರುವ ಫ್ರೆಂಚ್ ತಜ್ಞರು ಸಿದ್ಧಪಡಿಸಿದ್ದಾರೆ. 

3.ಸಮುದ್ರ ತೀರದ ಮುಂಬೈ ಬಂಗಲೆ
ರತನ್ ಟಾಟಾ ಅವರ ಕೊಲಬ ರೆಸಿಡೆನ್ಸಿ ಕಲಾತ್ಮಕತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಬಂಗಲೆಯನ್ನು ಅರಬ್ಬಿ ಸಮುದ್ರ ಕಾಣಿಸುವಂತೆ ನಿರ್ಮಿಸಲಾಗಿದೆ. ಹೀಗಾಗಿ ಈ ಮನೆಯಿಂದ ಸಮುದ್ರದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಏಳು ಅಂತಸ್ತಿನ ಈ ಮನೆಯ ವಿಸ್ತೀರ್ಣ 15,000 ಚದರ ಅಡಿ. ಇನ್ನು ಈ ಮನೆಯ ಕೊನೆಯ ಮಹಡಿಯಲ್ಲಿ ದೊಡ್ಡ ವಾಟರ್ ಫೂಲ್ ಇದೆ. ಇನ್ನೊಂದು ಸ್ವಿಮ್ಮಿಂಗ್ ಫೂಲ್, ಸನ್ ಡೆಕ್, ಮೂವೀ ರೂಮ್ ಹಾಗೂ 10 ವಾಹನಗಳ ಪಾರ್ಕಿಂಗ್ ಪ್ರದೇಶ ಈ ಮನೆಯ ವಿಶೇಷತೆಗಳು. ಇದು ಮುಂಬೈನ ದುಬಾರಿ ಬಂಗಲೆಗಳಲ್ಲಿ ಒಂದು.

ಭಾರತದ ಪ್ರಮುಖ 7 ಮೆಟ್ರೋ ಸಿಟಿಗಳಲ್ಲಿ ದಾಖಲೆಯ 3.64 ಲಕ್ಷ ಮನೆ ಮಾರಾಟ, ಬೆಂಗಳೂರಿನಲ್ಲಿ ಎಷ್ಟು?

4.ಮಸೆರಾಟಿ ಕ್ವಾಟ್ರೋಪೋರ್ಟೆ
ಇದು ಇಟಲಿ ಮೂಲದ ಜನಪ್ರಿಯ ಐಷಾರಾಮಿ ಕಾರು. ರತನ್ ಟಾಟಾ ಅವರ ಸಂಗ್ರಹದಲ್ಲಿ ಈ ದುಬಾರಿ ಕಾರು ಕೂಡ ಇದೆ. ಮಸೆರಾಟಿಯ ಕ್ವಾಟ್ರೋಪೋರ್ಟೆ( Maserati Quattroporte) ಸ್ಪೋರ್ಟಿ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಮತ್ತು ಹೆಚ್ಚಿನ ಪರ್ಫಾಮೆನ್ಸ್ ಹೊಂದಿದೆ. ಇದು ಟ್ವಿನ್ ಟರ್ಬೋ ವಿ6 ಪೆಟ್ರೋಲ್ ಇಂಜಿನ್ ಹೊಂದಿದೆ. ಇದರ ಟಾಪ್ ಸ್ಪೀಡ್ 270 kph.

5.ಲ್ಯಾಂಡ್ ರೋವರ್ ಫ್ರೀಲ್ಯಾಂಡರ್
ಟಾಟಾ ಸಂಸ್ಥೆ ಲ್ಯಾಂಡ್ ರೋವರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮುನ್ನವೇ ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ (Land Rover Freelander) ಕಾರು ರತನ್ ಟಾಟಾ ಅವರ ಬಳಿಯಿತ್ತು. ಫ್ರೀಲ್ಯಾಂಡರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರೆಂಜ್ ಲೈನ್ ಮೆಟ್ರೋ ಬರುವ ಮುನ್ನವೇ ಯಶವಂತಪುರದಲ್ಲಿ 840 ಕೋಟಿ ಭರ್ಜರಿ ಹೂಡಿಕೆ ಮಾಡಿದ ಫೋರ್ಟಿಸ್ ಹೆಲ್ತ್‌ಕೇರ್!
ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!