ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ರಿಕರಿಂಗ್ ಡೆಫಾಸಿಟ್ ಅಥವಾ ಆರ್ ಡಿ ಸಾಕಷ್ಟು ಜನಪ್ರಿಯತೆ ಗಳಿಸಿದೆ.ಆರ್ ಡಿ ಖಾತೆ 5 ವರ್ಷಗಳ ಅವಧಿಯದ್ದಾಗಿದ್ದು, ಮತ್ತೆ ಐದು ವರ್ಷ ವಿಸ್ತರಿಸುವ ಅವಕಾಶ ಕೂಡ ಇದೆ.ಹಾಗಾದ್ರೆ ಆರ್ ಡಿ ಖಾತೆಯಲ್ಲಿ ತಿಂಗಳಿಗೆ 1,000ರೂ.,5,000ರೂ. ಹಾಗೂ 10,000 ರೂ. ಹೂಡಿಕೆ ಮಾಡಿದ್ರೆ ಎಷ್ಟು ರಿಟರ್ನ್ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ.
Business Desk:ಒಂದಿಷ್ಟು ಉಳಿತಾಯ ಮಾಡಬೇಕು ಎಂಬ ಯೋಚನೆ ತಲೆಯಲ್ಲಿ ಬಂದ ತಕ್ಷಣ ನಾವು ಮೊದಲು ನೋಡುವುದು ಸುರಕ್ಷತೆಯನ್ನು. ನಮ್ಮ ಹಣ ಎಲ್ಲಿ ಸುರಕ್ಷಿತವಾಗಿರುತ್ತದೋ ಅಲ್ಲಿ ಹೂಡಿಕೆ ಮಾಡಲು ಬಯಸುತ್ತೇವೆ. ಇದೇ ಕಾರಣಕ್ಕೆ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಇಂದಿಗೂ ಹೂಡಿಕೆದಾರರ ಮೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ರಿಕರಿಂಗ್ ಡೆಫಾಸಿಟ್ (ಆರ್ ಡಿ) ಸಾಕಷ್ಟು ಜನಪ್ರಿಯತೆ ಗಳಿಸಿದೆ. ಅಂಚೆ ಕಚೇರಿ ಆರ್ ಡಿ ಯೋಜನೆ ಖಾತೆ ತೆರೆದ ದಿನಾಂಕದಿಂದ 5 ವರ್ಷಗಳ ಅವಧಿಯಲ್ಲಿ ಮೆಚ್ಯೂರ್ ಆಗುತ್ತದೆ. ಹಾಗೆಯೇ ಸಂಬಂಧಪಟ್ಟ ಅಂಚೆ ಕಚೇರಿಗೆ ಅರ್ಜಿ ಸಲ್ಲಿಕೆ ಮಾಡುವ ಮೂಲಕ ಈ ಖಾತೆಯನ್ನು ಮತ್ತೆ 5 ವರ್ಷಗಳ ಅವಧಿಗೆ ವಿಸ್ತರಿಸಬಹುದು. ಪ್ರಸ್ತುತ ಅಂಚೆ ಕಚೇರಿ ಆರ್ ಡಿ ಖಾತೆಗೆ ಶೇ.6.2 ಬಡ್ಡಿ ನೀಡಲಾಗುತ್ತಿದೆ (2023ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ). ಈ ಯೋಜನೆಯಲ್ಲಿ ತಿಂಗಳಿಗೆ ಕನಿಷ್ಠ ಹೂಡಿಕೆ 100ರೂ. ಇನ್ನು ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಹಾಗಾದ್ರೆ ಆರ್ ಡಿ ಖಾತೆಯಲ್ಲಿ 1,000ರೂ., 5,000ರೂ. ಹಾಗೂ 10,000 ರೂ. ಹೂಡಿಕೆ ಮಾಡಿದ್ರೆ ಎಷ್ಟು ರಿಟರ್ನ್ ಸಿಗುತ್ತದೆ? ಇಲ್ಲಿದೆ ಮಾಹಿತಿ.
ತಿಂಗಳಿಗೆ 5000ರೂ. ಹೂಡಿಕೆ ಮಾಡಿದ್ರೆ ಎಷ್ಟು ಸಿಗುತ್ತೆ?
ಅಂಚೆ ಕಚೇರಿ ಆರ್ ಡಿ ಖಾತೆಯಲ್ಲಿ ತಿಂಗಳಿಗೆ 5,000ರೂ.ಗಳನ್ನು ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ 3.52 ಲಕ್ಷ ರೂ. ಸಂಗ್ರಹವಾಗುತ್ತದೆ. ಈ ಖಾತೆಯನ್ನು ಮತ್ತೆ ಐದು ವರ್ಷಗಳ ಅವಧಿಗೆ ವಿಸ್ತರಿಸಿದರೆ 10 ವರ್ಷಗಳಲ್ಲಿ ಒಟ್ಟು 8.32 ಲಕ್ಷ ರೂ. ಸಂಗ್ರಹವಾಗುತ್ತದೆ.
ತೆರಿಗೆದಾರರೇ ಗಮನಿಸಿ; ಟಿಡಿಎಸ್, ಜಿಎಸ್ ಟಿಆರ್ -4, ಫಾರ್ಮ್ 15G/H ಸಲ್ಲಿಕೆಗೆ ಇಂದು ಅಂತಿಮ ಗಡುವು!
ತಿಂಗಳಿಗೆ 1,000ರೂ. ಹೂಡಿಕೆ ಮಾಡಿದ್ರೆ ಎಷ್ಟು ಸಿಗುತ್ತೆ?
ಅಂಚೆ ಕಚೇರಿ ಆರ್ ಡಿ ಯೋಜನೆಯಲ್ಲಿ ತಿಂಗಳಿಗೆ 1000ರೂ. ಅನ್ನು ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಿದ್ರೆ 70,431ರೂ. ಸಂಗ್ರಹವಾಗುತ್ತದೆ. ಈ ಖಾತೆಯನ್ನು ಮತ್ತೆ ಐದು ವರ್ಷಗಳ ಅವಧಿಗೆ ವಿಸ್ತರಿಸಿದ್ರೆ ಅಂದ್ರೆ 10 ವರ್ಷಗಳಲ್ಲಿ 1.66ಲಕ್ಷ ರೂ. ಸಂಗ್ರಹವಾಗುತ್ತದೆ.
ತಿಂಗಳಿಗೆ 10,000ರೂ. ಹೂಡಿಕೆ ಮಾಡಿದ್ರೆ
ಅಂಚೆ ಕಚೇರಿ ಆರ್ ಡಿ ಯೋಜನೆಯಲ್ಲಿ ತಿಂಗಳಿಗೆ 10,000ರೂ. ಹೂಡಿಕೆ ಮಾಡಿದ್ರೆ ಐದು ವರ್ಷಗಳ ಅವಧಿಗೆ 7.04ಲಕ್ಷ ರೂ. ಸಂಗ್ರಹವಾಗುತ್ತದೆ. ಈ ಖಾತೆಯನ್ನು ಮತ್ತೆ ಐದು ವರ್ಷಗಳ ಅವಧಿಗೆ ವಿಸ್ತರಿಸಿದರೆ 10 ವರ್ಷಗಳಲ್ಲಿ 16.6 ಲಕ್ಷ ರೂ. ಸಂಗ್ರಹವಾಗುತ್ತದೆ.
ಯಾರು ಅಂಚೆ ಕಚೇರಿ ಆರ್ ಡಿ ಖಾತೆ ತೆರೆಯಬಹುದು?
ಯಾವುದೇ ವಯಸ್ಕರು ಒಂದು ಅಥವಾ ಜಂಟಿ ಅಂಚೆ ಕಚೇರಿ ಆರ್ ಡಿ ಖಾತೆ ತೆರೆಯಬಹುದು. 10 ವರ್ಷ ಮೇಲ್ಪಟ್ಟ ಅಪ್ರಾಪ್ತರ ಹೆಸರಿನಲ್ಲಿ ಕೂಡ ಈ ಖಾತೆ ತೆರೆಯಬಹುದು.
EPF calculation:25 ಸಾವಿರ ಮೂಲವೇತನ ಹೊಂದಿರುವ ಉದ್ಯೋಗಿಗೆ ನಿವೃತ್ತಿ ವೇಳೆ ಎಷ್ಟು ಇಪಿಎಫ್ ಸಿಗುತ್ತೆ?
ತಿಂಗಳ ಕಂತು ಮಿಸ್ ಆದ್ರೆ?
ಅಂಚೆ ಕಚೇರಿಯಲ್ಲಿ ಆರ್ ಡಿ ಖಾತೆ ತೆರೆದ ಮೇಲೆ ನೀವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಹೂಡಿಕೆ ಮಾಡಬೇಕು. ಒಂದು ವೇಳೆ ನೀವು ಒಂದು ತಿಂಗಳ ಪಾವತಿಯನ್ನು ಮಿಸ್ ಮಾಡಿದ್ರೆ ಆಗ ಪ್ರತಿ ತಿಂಗಳು ಶೇ.1ರಷ್ಟು ಹೆಚ್ಚುವರಿ ಮೊತ್ತವನ್ನು ದಂಡವಾಗಿ ಪಾವತಿಸಬೇಕು. ಒಂದು ವೇಳೆ ನೀವು ನಿರಂತರ 4 ತಿಂಗಳ ಪಾವತಿ ಕಂತುಗಳನ್ನು ಮಿಸ್ ಮಾಡಿದ್ರೆ ನಿಮ್ಮ ಆರ್ ಡಿ ಖಾತೆ ಮುಚ್ಚಲ್ಪಡುತ್ತದೆ. ಇಲ್ಲೂ ಕೂಡ ಖಾತೆಯನ್ನು ಮತ್ತೆ ಕ್ರಿಯಾಶೀಲಗೊಳಿಸಲು 2 ತಿಂಗಳ ಕಾಲಾವಕಾಶವಿರುತ್ತದೆ. ಆದ್ರೆ ಈ ಸಮಯಾವಕಾಶದಲ್ಲೂ ಸುಮ್ಮನಿದ್ರೆ ಆರ್ ಡಿ ಖಾತೆ ಕಾಯಂ ಆಗಿ ಮುಚ್ಚಲ್ಪಡುತ್ತದೆ. ಈ ಯೋಜನೆಯ ಇನ್ನೊಂದು ವಿಶೇಷ ಏನಂದ್ರೆ ಖಾತೆ ತೆರೆದ ಒಂದು ವರ್ಷದ ಬಳಿಕ ಅದರಲ್ಲಿರೋ ಒಟ್ಟು ಹಣದ ಶೇ.50ರಷ್ಟನ್ನು ವಿತ್ ಡ್ರಾ ಮಾಡಲು ಖಾತೆದಾರನಿಗೆ ಅವಕಾಶ ನೀಡಲಾಗಿದೆ.