ಖಾಸಗಿ ಪೆಟ್ರೋಲ್‌ ಬಂಕ್‌ಗಳಿಗೆ ಕುತ್ತು, ಈ ರೀತಿ ಆದರೆ ಉದ್ಯಮ ನಡೆಸಲಾಗದು!

Published : May 24, 2022, 09:44 AM ISTUpdated : May 24, 2022, 10:08 AM IST
ಖಾಸಗಿ ಪೆಟ್ರೋಲ್‌ ಬಂಕ್‌ಗಳಿಗೆ ಕುತ್ತು, ಈ ರೀತಿ ಆದರೆ ಉದ್ಯಮ ನಡೆಸಲಾಗದು!

ಸಾರಾಂಶ

* ಲೀಟರ್‌ ಪೆಟ್ರೋಲ್‌ಗೆ 13, ಡೀಸೆಲ್‌ಗೆ 24 ರು. ಭಾರಿ ನಷ್ಟ * ಖಾಸಗಿ ಪೆಟ್ರೋಲ್‌ ಬಂಕ್‌ಗಳಿಗೆ ಕುತ್ತು * ಈ ರೀತಿ ಆದರೆ ಉದ್ಯಮ ನಡೆಸಲಾಗದು: ಕೇಂದ್ರಕ್ಕೆ ಅಳಲು

ನವದೆಹಲಿ(ಮೇ.24): ದೇಶದ ಪೆಟ್ರೋಲಿಯಂ ಕ್ಷೇತ್ರದಲ್ಲಿ ಛಾಪು ಮೂಡಿಸುವ ನಿರೀಕ್ಷೆಯೊಂದಿಗೆ ಭರ್ಜರಿ ಪ್ರವೇಶ ಪಡೆದಿದ್ದ ಖಾಸಗಿ ತೈಲ ಕಂಪನಿಗಳಿಗೆ ಈಗ ಭರಪೂರ ನಷ್ಟವಾಗುತ್ತಿದೆ. ಇದೀ ರೀತಿಯಾದರೆ ಉದ್ಯಮ ನಡೆಸುವುದೇ ಕಷ್ಟಎಂದು ಕೇಂದ್ರ ಸರ್ಕಾರದ ಮುಂದೆ ಅಳಲು ತೋಡಿಕೊಂಡಿವೆ. ಮೇ 16ಕ್ಕೆ ಅನುಗುಣವಾಗಿ ಲೀಟರ್‌ ಪೆಟ್ರೋಲ್‌ ಮಾರಾಟದಿಂದ 13.08 ರು. ಹಾಗೂ ಲೀಟರ್‌ ಡೀಸೆಲ್‌ನಿಂದ 24.09 ರು. ನಷ್ಟವಾಗುತ್ತಿದೆ ಎಂದು ತಿಳಿಸಿವೆ.

ಈ ಸಂಬಂಧ ರಿಲಯನ್ಸ್‌ ಹಾಗೂ ಬಿಪಿ ಕಂಪನಿಗಳ ಜಂಟಿ ಒಕ್ಕೂಟವಾಗಿರುವ ಆರ್‌ಬಿಎಂಎಲ್‌, ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆದು ಗಮನ ಸೆಳೆದಿದೆ. ಪ್ರತಿ ತಿಂಗಳು ತನಗೆ 700 ಕೋಟಿ ರು. ನಷ್ಟವಾಗುತ್ತಿದ್ದು, ನಷ್ಟತಗ್ಗಿಸಲು ಚಿಲ್ಲರೆ ವಹಿವಾಟನ್ನೇ ತಗ್ಗಿಸಲಾಗಿದೆ ಎಂದು ಕಂಪನಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ರಷ್ಯಾದ ರೋಸ್‌ನೆಫ್‌್ಟಬೆಂಬಲಿತ ನಯಾರಾ ಎನರ್ಜಿ ಸಂಸ್ಥೆ ನಷ್ಟಕಡಿಮೆ ಮಾಡಿಕೊಳ್ಳಲು ನಯಾರಾ ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಲೀಟರ್‌ಗೆ 3 ರು. ಹೆಚ್ಚಳ ಮಾಡಿದೆ.

‘ದೇಶದ ಪೆಟ್ರೋಲಿಯಂ ಕ್ಷೇತ್ರದಲ್ಲಿ ಸರ್ಕಾರಿ ಕಂಪನಿಗಳು ಶೇ.90ರಷ್ಟುಪಾಲು ಹೊಂದಿದ್ದು, ಬೆಲೆ ಏರಿಕೆ ವಿಚಾರದಲ್ಲಿ ಅವರದ್ದೇ ಆಟ ಎನ್ನುವಂತಾಗಿದೆ. ಚುನಾವಣೆಗಳು ಬಂದಾಗ ಬೆಲೆ ಏರಿಕೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳುತ್ತವೆ. ಇದರಿಂದ ತಮಗೆ ನಷ್ಟವಾಗುತ್ತಿದೆ’ ಎಂಬುದು ಕಂಪನಿಗಳ ಅಳಲು.

ಮುಂಬರುವ ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಇಂಧನ ಬೆಲೆ ಇಳಿಕೆ

 

ಮುಂಬರುವ ದಿನಗಳಲ್ಲಿ ಬರಲಿರುವ ಐದು ರಾಜ್ಯದ ಚುನಾವಣೆಯ ಹಿನ್ನೆಲೆಯಲ್ಲಿ ಈ ನಾಟಕ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ಮಹಾನ್‌ ಕಲಾಕಾರ. ತನ್ನ ಧರ್ಮಪತ್ನಿ ಯಶೋದಾ ಬೆನ್‌ಗೆ ರಕ್ಷಣೆ ನೀಡಲು ವಿಫಲವಾಗಿದ್ದಾರೆ. ಮೊದಲು ಪ್ರಧಾನಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿದರು.

100 ದಿನ ಅಧಿಕಾರ ನೀಡಿದರೆ ಭೂಲೋಕದಲ್ಲಿ ಸ್ವರ್ಗ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಬೆಲೆ ನಿಯಂತ್ರಣ ಮಾಡುವುದಾಗಿ ಹೇಳಿದ್ದರು. ಆದರೆ, ಇಂದು ಯಾವುದೂ ನಮ್ಮ ನಿಯಂತ್ರಣದಲ್ಲಿಲ್ಲದಂತೆ ಏರಿಕೆಯಾಗಿವೆ. ದಿನಸಿ ಬೆಲೆಗಳು ಜನ ಸಾಮಾನ್ಯರಿಗೆ ಗಗನಕುಸುಮವಾಗುತ್ತಿದೆ. ಆದರೆ ಮಹಾನ್‌ ಕಲಾಕಾರ, ಇದ್ದಕ್ಕಿದ್ದಂತೆ ಪೆಟ್ರೋಲ್‌, ಡೀಸೆಲ್‌ ಹಾಗೂ ಸಿಲಿಂಡರ್‌ ದರ ಇಳಿಕೆ ಮಾಡಿದ್ದೇವೆ ಎಂದು ದೊಡ್ಡ ಪೋಸ್‌ ನೀಡಿದ್ದಾರೆ. ಆದರೆ, ವಾಸ್ತವವೇ ಬೇರೆ ಇದೆ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬದ್ಧತೆ ಇದ್ದರೆ ಬೆಲೆ ಏರಿಕೆ ತಡೆಯಬೇಕು. ಜನ ಸಾಮಾನ್ಯರು, ರೈತರ ಬಗ್ಗೆ ಕಾಳಜಿ ಇದ್ದರೆ ದರ ನಿಯಂತ್ರಣ ಮಾಡಬೇಕು. ತೆರಿಗೆ ಸಂಗ್ರಹ ಶೇ. 300ರಷ್ಟುಅಧಿಕವಾಗಿದೆ. ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಇದ್ದ ಸುಂಕ ಮಾತ್ರ ವಿಧಿಸಿ ಆ ಮೂಲಕ ಬದ್ಧತೆ ತೋರಬೇಕು. ಇದನ್ನು ಅನುಸರಿಸಿದರೆ ಪೆಟ್ರೋಲ್‌, ಡೀಸೆಲ್‌ ಬೆಲೆ ಲೀಟರ್‌ಗೆ ಸರಿ ಸುಮಾರು .50 ಆಸುಪಾಸು ಬರಲಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ತಡೆಯಬಹುದಾಗಿದೆ ಎಂದರು.

ಗಣಿಗಾರಿಕೆ ಬಗ್ಗೆ 16 ನವೆಂಬರ್‌ 2008ರಂದು ಸತ್ಯಶೋಧನಾ ಸಮಿತಿ ಅಧ್ಯಕ್ಷನಾಗಿ ನೀಡಿದ ವರದಿ 2011ರಲ್ಲಿ ಲೋಕಾಯುಕ್ತರ ವರದಿಯಲ್ಲಿ ಪ್ರಕಟವಾಗಿತ್ತು. ಆದ್ದರಿಂದ ಅದಿರನ್ನು ಇಲ್ಲಿಯೇ ಸಂಸ್ಕರಿಸಿ ಉದ್ಯೋಗ, ಕೈಗಾರಿಕಾ ಅಭಿವೃದ್ಧಿ ಹಾಗೂ ಸಂಪನ್ಮೂಲಗಳ ಬಳಕೆ ಮಾಡಬೇಕು. ಇಂತಹ ಬದ್ಧತೆ ಕೇಂದ್ರ, ರಾಜ್ಯ ಸರ್ಕಾರಗಳು ಪ್ರದರ್ಶಿಸಬೇಕು ಎಂದರು.

ಗೋಷ್ಠಿಯಲ್ಲಿ ಪಕ್ಷದ ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಮುಖಂಡರಾದ ಕುರಿ ಶಿವಮೂರ್ತಿ, ರಾಜಶೇಖರ ಹಿಟ್ನಾಳ್‌, ವಿನಾಯಕ ಶೆಟ್ಟರ್‌, ರಾಘವೇಂದ್ರ, ನಾಗಮಣಿ ಗುರುಸಿದ್ದನಗೌಡ ಮತ್ತಿತರರಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ