Personal Finance: ಸ್ಯಾಲರಿ ಖಾತೆಗೆ ಸಂಬಳ ಬರ್ತಿದ್ದರೆ ಇದನ್ನು ಗಮನಿಸಿ

By Suvarna NewsFirst Published Nov 5, 2022, 11:31 AM IST
Highlights

ಬ್ಯಾಂಕ್ ಖಾತೆಯಲ್ಲಿ ಅನೇಕ ವಿಧಗಳಿವೆ. ಅದ್ರಲ್ಲಿ ಉಳಿತಾಯ ಖಾತೆ ಹಾಗೂ ಸಂಬಳದ ಖಾತೆ ಮುಖ್ಯವಾಗಿದೆ. ಸಂಬಳದ ಖಾತೆಗೆ ಹಣ ವರ್ಗಾವಣೆಯಾಗ್ತಿದೆ ಎಂದಾದ್ರೆ ಕೆಲ ವಿಷ್ಯಗಳನ್ನು ನಾವು ತಿಳಿದಿರಬೇಕು. ಬ್ಯಾಂಕ್ ನೀಡುವ ಸೌಲಭ್ಯ ತಿಳಿದ್ರೆ ಅದ್ರ ಲಾಭವನ್ನು ನಾವು ಪಡೆಯಬಹುದು.
 

ಸಂಬಳವನ್ನು ನಗದು ರೂಪದಲ್ಲಿ ನೀಡುವ ಹಾಗೂ ಪಡೆಯುವ ಎರಡೂ ಪದ್ಧತಿ ಈಗಿಲ್ಲ. ಇದೇನಿದ್ದರೂ ಡಿಜಿಟಲ್ ಯುಗ. ಈ ಹಿಂದೆ ಚೆಕ್ ರೂಪದಲ್ಲಿ ಕೂಡ ಸಂಬಳವನ್ನು ನೀಡಲಾಗ್ತಿತ್ತು. ಆದ್ರೀಗ ಎಲ್ಲ ಕಂಪನಿಗಳು ಸಿಬ್ಬಂದಿ ಸಂಬಳವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತವೆ. ಸಂಬಳ ಖಾತೆಯಿದ್ದರೆ ಸಿಬ್ಬಂದಿ ಕೆಲ ಲಾಭವನ್ನು ಪಡೆಯುತ್ತಾರೆ. ನಾವಿಂದು ಸ್ಯಾಲರಿ ಅಕೌಂಟ್ ಗೆ ಸಂಬಂಧಿಸಿದ ಕೆಲ ಮಹತ್ವದ ವಿಷ್ಯವನ್ನು ನಿಮಗೆ ಹೇಳ್ತೇವೆ. 

ಸ್ಯಾಲರಿ (Salary) ಅಕೌಂಟ್ (Account) ಎಂದರೇನು ?: ಸ್ಯಾಲರಿ ಅಕೌಂಟ್ ಕಂಪನಿ (Company) ಯು ತೆರೆಯುವ ಖಾತೆಯಾಗಿದೆ. ಸಿಬ್ಬಂದಿಗಾಗಿ ಕಂಪನಿ ಪರವಾಗಿ ಸ್ಯಾಲರಿ ಖಾತೆ ತೆರೆಯಲಾಗುತ್ತದೆ. ಇದರಲ್ಲಿ ನಿಮ್ಮ ಸಂಬಳವನ್ನು ಪ್ರತಿ ತಿಂಗಳು ಜಮಾ ಮಾಡಲಾಗುತ್ತದೆ. ಸಂಬಳದ ಖಾತೆಯನ್ನು ಒಂದು ರೀತಿಯ ಉಳಿತಾಯ ಖಾತೆ ಎಂದೂ ಕರೆಯಬಹುದು.ಆದರೆ ಇದು ಸಾಮಾನ್ಯ ಉಳಿತಾಯ ಖಾತೆಗಿಂತ ಸ್ವಲ್ಪ ಭಿನ್ನವಾಗಿದೆ. ನೀವು ಸ್ಯಾಲರಿ ಖಾತೆಯನ್ನು ಸಾಮಾನ್ಯ ಖಾತೆಯಾಗಿಯೂ ಬದಲಿಸಿಕೊಳ್ಳಬಹುದು.

ಸಂಬಳ ಖಾತೆಯಲ್ಲಿ ಸಿಗುತ್ತೆ ಶೂನ್ಯ ಬ್ಯಾಲೆನ್ಸ್ ಸೌಲಭ್ಯ : ಸ್ಯಾಲರಿ ಅಕೌಂಟ್ ನಲ್ಲಿ ಶೂನ್ಯ ಬ್ಯಾಲೆನ್ಸ್ ಸೌಲಭ್ಯ ಹೊಂದಿರುತ್ತೀರಿ. ಅಂದರೆ ನಿಮ್ಮ ಖಾತೆಯಲ್ಲಿ ಹಣವಿಲ್ಲವೆಂದ್ರೂ ನೀವು ಬ್ಯಾಂಕ್‌ಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಮೂರು ತಿಂಗಳವರೆಗೆ ನೀವು ಯಾವುದೇ ಬ್ಯಾಲೆನ್ಸ್ ಹೊಂದಿಲ್ಲದೆ ಹೋದ್ರೂ ನೀವು ಶುಲ್ಕ ಪಾವತಿ ಮಾಡಬೇಕಾಗಿಲ್ಲ. ಕೆಲವರು ಸಂಬಳ ಖಾತೆ ಬದಲು ತಮ್ಮ  ವೈಯಕ್ತಿಕ ಬ್ಯಾಂಕ್ ಖಾತೆಗೆ ಸಂಬಳವನ್ನು ವರ್ಗಾಯಿಸಿಕೊಳ್ತಾರೆ.  ವೈಯಕ್ತಿಕ ಬ್ಯಾಂಕ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ದಾಗ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ನೀವು ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಖಾತೆಗೆ ಸಂಬಳವನ್ನು ವರ್ಗಾಯಿಸಿಕೊಳ್ಳಬೇಡಿ.  ಕಂಪನಿ ನೀಡುವ ಸ್ಯಾಲರಿ ಅಕೌಂಟ್ ಸೌಲಭ್ಯವನ್ನು ಅಗತ್ಯವಾಗಿ ಪಡೆಯಿರಿ. 

ಈ 4 ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಸುಲಭವಾಗಿ ಸಿಗುತ್ತೆ ಪರ್ಸನಲ್ ಲೋನ್

ಎಟಿಎಂನಲ್ಲಿರುತ್ತೆ ಉಚಿತ ವಹಿವಾಟು :  ಅನೇಕ ಬ್ಯಾಂಕ್ ಗಳು ಸಂಬಳ ಖಾತೆಗೆ ಹೆಚ್ಚುವರಿ ಸೌಲಭ್ಯಗಳನ್ನು ನೀಡುತ್ತವೆ. ಅದ್ರಲ್ಲಿ ಉಚಿತ ಎಟಿಎಂ ಸೌಲಭ್ಯ ಕೂಡ ಒಂದು. ಕೆಲ ಬ್ಯಾಂಕ್ ಗಳು ಸ್ಯಾಲರಿ ಅಕೌಂಟ್ ಗೆ ಎಟಿಎಂನಲ್ಲಿ ಉಚಿತ ಮತ್ತು ಅನಿಯಮಿತ ವಹಿವಾಟುಗಳನ್ನು ನೀಡುತ್ತವೆ. ನೀವು ಸ್ಯಾಲರಿ ಅಕೌಂಟ್ ಹೊಂದಿದ್ದರೆ ನೀವು ಖಾತೆ ಹೊಂದಿರುವ ಬ್ಯಾಂಕ್, ನಿಮಗೆ ಎಟಿಎಂ ಉಚಿತ ವಹಿವಾಟು ನೀಡುತ್ತದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಈ ಬಗ್ಗೆ ನಿಮಗೆ ಮಾಹಿತಿ ಇದ್ದರೆ, ನೀವು ಹಣವನ್ನು ಉಳಿತಾಯ ಮಾಡಬಹುದು. ತಿಂಗಳಲ್ಲಿ ಎಷ್ಟು ಬಾರಿಯಾದ್ರೂ ಎಟಿಎಂ ಮೂಲಕ ವಹಿವಾಟು ಮಾಡಬಹುದು. ಇಲ್ಲವೆಂದ್ರೆ ಎಟಿಎಂ ವಹಿವಾಟನ್ನು ಸೀಮಿತಗೊಳಿಸಬೇಕಾಗುತ್ತದೆ. ಬ್ಯಾಂಕ್ ಸಂಬಳ ಖಾತೆಗೂ ಸೀಮಿತ ವಹಿವಾಟನ್ನು ಮಾಡಿದ್ದಾಗ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. 

ಸ್ಯಾಲರಿ ಅಕೌಂಟ್ ನಲ್ಲಿ ನಿಮಗೆ ಸಿಗುತ್ತೆ ಈ ಎಲ್ಲ ಸೌಲಭ್ಯ :  ಯಾವುದೇ ಬ್ಯಾಂಕಿನಲ್ಲಿ ಸ್ಯಾಲರಿ ಖಾತೆ ಹೊಂದಿದ್ದರೆ ಬ್ಯಾಂಕ್ ನಿಮಗೆ  ವೈಯಕ್ತಿಕಗೊಳಿಸಿದ ಚೆಕ್ ಪುಸ್ತಕ ನೀಡುತ್ತದೆ. ಇದ್ರಿಂದ ಅನೇಕ ಪ್ರಯೋಜನಗಳನ್ನು ನೀವು ಪಡೆಯಬಹುದು. ಹಾಗಾಗಿ ಖಾತೆ ತೆರೆದ ನಂತ್ರ ನೀವು ಚೆಕ್ ಬುಕ್ ಪಡೆಯಲು ಮರೆಯಬೇಡಿ. ಇದಲ್ಲದೆ ನೀವು ಸ್ಯಾಲರಿ ಅಕೌಂಟ್ ಹೊಂದಿದ್ದರೆ ನಿಮಗೆ ಬ್ಯಾಂಕ್  ಉಚಿತ ಇಮೇಲ್ ಸ್ಟೇಟ್ಮೆಂಟ್, ಬ್ಯಾಂಕಿಂಗ್ ಸೇವೆ, ಕ್ರೆಡಿಟ್ ಕಾರ್ಡ್ ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂಬುದು ನೆನಪಿರಲಿ.

ಇನ್ಮುಂದೆ ಬ್ಯಾಂಕ್ ಖಾತೆ ತೆರೆಯೋದು, ಸಿಮ್ ಕಾರ್ಡ್ ಪಡೆಯೋದು ಅಷ್ಟು ಸುಲಭವಲ್ಲ!

ಲಾಕರ್ ಶುಲ್ಕದ ಮೇಲೆ ಸಿಗುತ್ತೆ ರಿಯಾಯಿತಿ : ಅನೇಕ ಬ್ಯಾಂಕ್‌ಗಳು ಸಂಬಳ ಖಾತೆಗಳ ಮೇಲಿನ ಲಾಕರ್ ಶುಲ್ಕವನ್ನು ಮನ್ನಾ ಮಾಡುತ್ತವೆ. ಎಸ್‌ಬಿಐ, ಸ್ಯಾಲರಿ ಅಕೌಂಟ್ ನ ಲಾಕರ್ ಚಾರ್ಜ್‌ನಲ್ಲಿ ಶೇಕಡಾ 25 ರವರೆಗೆ ರಿಯಾಯಿತಿ ನೀಡುತ್ತದೆ. ನಿಮ್ಮ ಖಾತೆಗೆ ಸಂಬಳ ಬರುವುದು ನಿಂತಲ್ಲಿ ನಿಮ್ಮ ಸ್ಯಾಲರಿ ಖಾತೆಗೆ ಸಿಗುವ ಎಲ್ಲ ಸೌಲಭ್ಯವನ್ನು ಬ್ಯಾಂಕ್ ಹಿಂಪಡೆಯುತ್ತದೆ. 
 

click me!