
ಇತ್ತೀಜಿನ ದಿನಗಳಲ್ಲಿ ಜನರು ಬ್ಯಾಂಕ್ ಮುಖ ನೋಡೋದೇ ಅಪರೂಪವಾಗಿದೆ. ಡಿಜಿಟಲ್ ಇಂಡಿಯಾ ನಮ್ಮ ಜೀವನ ಶೈಲಿಯನ್ನೇ ಬದಲಿಸಿದೆ. ಬ್ಯಾಂಕ್ ನಲ್ಲಿ ಸರತಿ ಸಾಲಿನಲ್ಲಿ ನಿಂತು, ಫಾರ್ಮ್ ತುಂಬಿ, ಬ್ಯಾಂಕ್ ಖಾತೆ ತೆರೆಯುವ ಅನಿವಾರ್ಯತೆ ಈಗಿಲ್ಲ. ಮನೆಯಲ್ಲೇ ಕುಳಿತು ಆರಾಮವಾಗಿ ನಾವು ಬ್ಯಾಂಕ್ ಖಾತೆ ತೆರೆಯಬಹುದು. ಹಣ ವರ್ಗಾವಣೆ, ಹಣ ಠೇವಣಿ ಸೇರಿದಂತೆ ಎಲ್ಲ ಕೆಲಸವನ್ನು ನಾವು ಆನ್ಲೈನ್ ನಲ್ಲಿ ಮಾಡಬಹುದು. ಆನ್ಲೈನ್ ನಲ್ಲಿ ಖಾತೆ ತೆರೆಯುತ್ತೇವೆ ಎಂದಾಗ ನಾವು ಅದಕ್ಕೆ ಸಂಬಂಧಿಸಿದ ವಿಷ್ಯಗಳನ್ನು ತಿಳಿದುಕೊಳ್ಳಬೇಕು. ಅನೇಕರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ತೆರೆದಿರುತ್ತಾರೆ. ಆದ್ರೆ ಬ್ಯಾಂಕ್ ಗಳ ನಿಯಮವೇನು ಎಂಬುದು ತಿಳಿದಿರೋದಿಲ್ಲ. ಹಾಗಾಗಿ ಮುಂದೆ ತೊಂದರೆ ಅನುಭವಿಸುತ್ತಾರೆ. ಮತ್ತೆ ಕೆಲವರು ಒಂದು ಖಾತೆ ಇರಲಿ ಅಂತಾ ಬ್ಯಾಂಕ್ ಖಾತೆ ತೆರೆಯುತ್ತಾರೆ. ಆದ್ರೆ ಅದ್ರಲ್ಲಿ ಯಾವುದೇ ವ್ಯವಹಾರ ನಡೆಸೋದಿಲ್ಲ. ಬ್ಯಾಂಕ್ ಖಾತೆ ಕೂಡ ಕೆಲ ನಿಗದಿತ ಸಮಯದ ನಂತ್ರ ನಿಷ್ಕ್ರಿಯವಾಗುತ್ತದೆ. ನಾವಿಂದು ಬ್ಯಾಂಕ್ ಖಾತೆ ಹೇಗೆ ನಿಷ್ಕ್ರಿಯವಾಗುತ್ತೆ, ಅದನ್ನು ಹೇಗೆ ಸಂಭಾಳಿಸಬೇಕು ಎಂಬುದನ್ನು ಹೇಳ್ತೇವೆ.
ಬ್ಯಾಂಕ್ (Bank) ಖಾತೆ ನಿಷ್ಕ್ರಿಯ (Inactive) ಗೊಳ್ಳೋದು ಅಂದ್ರೇನು ? : ಅನೇಕ ಬಾರಿ ಜನರು ಬ್ಯಾಂಕ್ ಖಾತೆಯನ್ನು ತೆರೆದ ನಂತರ ಯಾವುದೇ ರೀತಿಯ ವ್ಯವಹಾರವನ್ನು ಮಾಡುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ನೀವು ಬ್ಯಾಂಕ್ ಖಾತೆ ಹೊಂದಿದ್ದು, ಎರಡು ವರ್ಷದವರೆಗೆ ಆ ಖಾತೆಗೆ ಯಾವುದೇ ಹಣ ಹಾಕಿಲ್ಲವೆಂದ್ರೆ ಅಥವಾ ಆ ಖಾತೆಯಿಂದ ಯಾವುದೇ ಹಣ ವಿತ್ ಡ್ರಾ ಮಾಡಿಲ್ಲವೆಂದ್ರೆ ನಿಮ್ಮ ಖಾತೆ ನಿಷ್ಕ್ರಿಯಗೊಳ್ಳುತ್ತದೆ.
ಎಷ್ಟು ವರ್ಷ ಖಾತೆ ನಿಷ್ಕ್ರಿಯಗೊಳ್ಳುತ್ತೆ ? : ನೀವು ಎರಡು ವರ್ಷದವರೆಗೆ ಖಾತೆಯನ್ನು ಟಚ್ ಮಾಡಿಲ್ಲವೆಂದ್ರೆ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಒಮ್ಮೆ ನಿಷ್ಕ್ರಿಯಗೊಂಡ ಖಾತೆಯನ್ನು 10 ವರ್ಷಗಳವರೆಗೆ ಸಕ್ರಿಯಗೊಳಿಸಲು ಸಾಧ್ಯವಿಲ್ಲ. ನಿಮ್ಮ ಖಾತೆಯಲ್ಲಿ ಹಣ (Money) ವಿದ್ದರೆ ಅದನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ಖಾತೆ ನಿಷ್ಕ್ರಿಯವಾಗ್ತಿದ್ದಂತೆ ನಿಮ್ಮ ಖಾತೆಯಲ್ಲಿರುವ ಹಣ ಹಾಗೂ ಬಡ್ಡಿ ಹಣಗಳು ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಹೋಗುತ್ತದೆ. ಹಾಗಾಗಿ ಅದ್ರಲ್ಲಿರುವ ಹಣವನ್ನು ನೀವು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ನೀವು ನಿಷ್ಕ್ರಿಯ ಖಾತೆಯಲ್ಲಿ ಯಾವುದೇ ರೀತಿಯ ವಹಿವಾಟನ್ನು ಮಾಡಲು ಸಾಧ್ಯವಾಗುವುದಿಲ್ಲ.
ಈ 4 ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಸುಲಭವಾಗಿ ಸಿಗುತ್ತೆ ಪರ್ಸನಲ್ ಲೋನ್
ಖಾತೆ (Account) ನಿಷ್ಕ್ರಿಯಗೊಳ್ಳಬಾರದು ಅಂದ್ರೆ ಹೀಗೆ ಮಾಡಿ: ನಿಮ್ಮ ಖಾತೆ ನಿಷ್ಕ್ರಿಯಗೊಳ್ಳಬಾರದು ಅಂದ್ರೆ ನೀವು ಆಗಾಗ ನಿಮ್ಮ ಖಾತೆಯಲ್ಲಿ ಹಣ ಠೇವಣಿ ಮಾಡಿ. ಇಲ್ಲವೆ ಹಣ ವಿತ್ ಡ್ರಾ ಮಾಡಿ. ಒಟ್ಟಿನಲ್ಲಿ ಖಾತೆಯ ಮೂಲಕ ವಹಿವಾಟು ನಡೆಸುತ್ತಿರಬೇಕು. ಆಗ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ. ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವ ಅನೇಕ ಜನರಿದ್ದಾರೆ. ಎರಡೂ ಖಾತೆಗಳನ್ನು ನಿರ್ವಹಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹಾಗಂತ ಆ ಖಾತೆಯನ್ನು ಹಾಗೆ ಬಿಡುವುದು ಸೂಕ್ತವಲ್ಲ. ಕಾಲ ಕಾಲಕ್ಕೆ ಖಾತೆಯನ್ನು ಬಳಸುತ್ತಿರುವುದು ಮುಖ್ಯವಾಗುತ್ತದೆ.
60 ವಯಸ್ಸಿಗೆ ಗೃಹೋದ್ಯಮದಲ್ಲಿ ಯಶಸ್ಸು ಕಂಡ ನಾಗಮಣಿ
ಉಳಿತಾಯ ಖಾತೆ ಮುಚ್ಚುವುದಾದ್ರೆ ಇದು ನೆನಪಿರಲಿ : ಒಂದು ವೇಳೆ ನಿಮ್ಮ ಖಾತೆಯನ್ನು ನೀವು ಮುಚ್ಚುವ ನಿರ್ಧಾರಕ್ಕೆ ಬಂದಿದ್ದೀರಿ ಎಂದಾದ್ರೆ ನೀವು ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೊದಲು ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಪರಿಶೀಲಿಸಿ. ಖಾತೆ ನೆಗೆಟಿವ್ ನಲ್ಲಿದ್ದರೆ ನೀವು ಖಾತೆ ಮುಚ್ಚಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಇದಕ್ಕೆ ಶುಲ್ಕ ವಿಧಿಸುತ್ತದೆ. ಆ ಶುಲ್ಕವನ್ನು ಪಾವತಿಸಿದ ನಂತ್ರವೇ ನೀವು ಖಾತೆ ಮುಚ್ಚಬೇಕು. ನಿಮ್ಮ ಖಾತೆಯಲ್ಲಿ ಹಣವಿದ್ದರೆ ಅದನ್ನು ಡ್ರಾ ಮಾಡಿದ ನಂತ್ರ ಖಾತೆ ಮುಚ್ಚಲು ಮುಂದಾಗಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.