Budget 2025: ಇದು ಜನರ ಜೇಬಿಗೆ ಹಣ ತುಂಬಿಸುವ ಬಜೆಟ್: ಪ್ರಧಾನಿ ಮೋದಿ

Published : Feb 02, 2025, 04:32 AM IST
Budget 2025: ಇದು ಜನರ ಜೇಬಿಗೆ ಹಣ ತುಂಬಿಸುವ ಬಜೆಟ್: ಪ್ರಧಾನಿ ಮೋದಿ

ಸಾರಾಂಶ

ಅಸಂಘಟಿತ ಕಾರ್ಮಿಕರ ಕಲ್ಯಾಣ ಕ್ರಮಗಳು ಕಾರ್ಮಿಕರ ಘನತೆಗೆ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತವೆ. ಉತ್ಪಾದನಾ ವಲಯಕ್ಕೆ ಬಜೆಟ್‌ನಲ್ಲಿ ಮಂಡಿಸಲಾದ ಕ್ರಮಗಳು ಭಾರತೀಯ ಉತ್ಪನ್ನಗಳು ಜಾಗತಿಕವಾಗಿ ಬೆಳಗಲು ಅನುವು ಮಾಡಿಕೊಡುತ್ತವೆ. ತೆರಿಗೆ ವಿನಾಯಿತಿಯು ಮಧ್ಯಮ ವರ್ಗ ಮತ್ತು ಸಂಬಳದ ಉದ್ಯೋಗಿಗಳಿಗೆ ದೊಡ್ಡ ಲಾಭವನ್ನು ನೀಡುತ್ತದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ(ಫೆ.02):  ಪ್ರಧಾನಿ ನರೇಂದ್ರ ಮೋದಿಯವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಜನರ ಕೈಗೆ ಹೆಚ್ಚು ಹಣ ನೀಡುವ ‘ಜನರ ಬಜೆಟ್’ ಎಂದು ಬಣ್ಣಿಸಿದ್ದಾರೆ.
ಇದು ಹೂಡಿಕೆಗಳನ್ನು ಹೆಚ್ಚಿಸುವ ಮತ್ತು ಬೆಳವಣಿಗೆಗೆ ಕಾರಣವಾಗುವ ಶಕ್ತಿ-ಗುಣಕವಾದ ಬಜೆಟ್ ಎಂದಿರುವ ಅವರು,''ವಿಕಸಿತ ಭಾರತ'' ಧ್ಯೇಯವನ್ನು ಮುನ್ನಡೆಸುವ ಯುವಜನರಿಗೆ ಸರ್ಕಾರ ಅನೇಕ ಕ್ಷೇತ್ರಗಳನ್ನು ತೆರೆದಿದ್ದು, ಈ ಬಜೆಟ್ ಉಳಿತಾಯ, ಹೂಡಿಕೆ, ಬಳಕೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇಂಥ ಬಜೆಟ್ ಮಂಡಿಸಿದ್ದಕ್ಕೆ ಹಣಕಾಸು ಸಚಿವರು ಮತ್ತವರ ತಂಡಕ್ಕೆ ಅಭಿನಂದನೆಗಳು ಎಂದರು.

ಬಜೆಟ್ ಸಾಮಾನ್ಯವಾಗಿ ಸರ್ಕಾರದ ಆದಾಯವನ್ನು ಹೆಚ್ಚಿಸುವತ್ತ ಗಮನಹರಿಸುತ್ತದೆ, ಆದರೆ ಸೀತಾರಾಮನ್ ಮಂಡಿಸಿದ ಬಜೆಟ್ ಜನರ ಜೇಬಿಗೆ ಹೆಚ್ಚಿನ ಹಣ ಹಾಕಲು, ಉಳಿತಾಯ ಹೆಚ್ಚಿಸಲು ಮತ್ತು ಅಭಿವೃದ್ಧಿ ಪಯಣದಲ್ಲಿ ನಾಗರಿಕರನ್ನು ಪಾಲುದಾರರನ್ನಾಗಿ ಮಾಡಲು ಪ್ರಯತ್ನಿಸುತ್ತದೆ ಎಂದು ಹೇಳಿದರು.

ಬಜೆಟ್ 2025: ಭಾರತದ ಬಾಹ್ಯಾಕಾಶ ಕನಸಿಗೆ 13,416 ಕೋಟಿ ರೂಪಾಯಿಗಳ ಉತ್ತೇಜನ

ಅಸಂಘಟಿತ ಕಾರ್ಮಿಕರ ಕಲ್ಯಾಣ ಕ್ರಮಗಳು ಕಾರ್ಮಿಕರ ಘನತೆಗೆ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತವೆ. ಉತ್ಪಾದನಾ ವಲಯಕ್ಕೆ ಬಜೆಟ್‌ನಲ್ಲಿ ಮಂಡಿಸಲಾದ ಕ್ರಮಗಳು ಭಾರತೀಯ ಉತ್ಪನ್ನಗಳು ಜಾಗತಿಕವಾಗಿ ಬೆಳಗಲು ಅನುವು ಮಾಡಿಕೊಡುತ್ತವೆ. ತೆರಿಗೆ ವಿನಾಯಿತಿಯು ಮಧ್ಯಮ ವರ್ಗ ಮತ್ತು ಸಂಬಳದ ಉದ್ಯೋಗಿಗಳಿಗೆ ದೊಡ್ಡ ಲಾಭವನ್ನು ನೀಡುತ್ತದೆ ಎಂದು ಹೇಳಿದರು.

ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಆರ್ಥಿಕತೆ ವೃದ್ಧಿಗೆ ಬಜೆಟ್‌ನ ಕ್ರಮಗಳನ್ನು ಶ್ಲಾಘಿಸಿದ ಅವರು, ಸುಧಾರಣೆಗಳ ವಿಷಯದಲ್ಲಿ ಬಜೆಟ್‌ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ಪರಮಾಣು ಶಕ್ತಿಯಲ್ಲಿ ಖಾಸಗಿ ವಲಯವನ್ನು ಉತ್ತೇಜಿಸುವ ಕ್ರಮ ಐತಿಹಾಸಿಕವಾಗಿದೆ. ಇದು ದೇಶದ ಅಭಿವೃದ್ಧಿಯಲ್ಲಿ ನಾಗರಿಕ ಪರಮಾಣು ಶಕ್ತಿಯ ದೊಡ್ಡ ಕೊಡುಗೆಯನ್ನು ಖಚಿತಪಡಿಸುತ್ತದೆ’ ಎಂದು ಪ್ರಧಾನಿ ಹೇಳಿದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ