Government Bank Stake Sale: 5 ಸರ್ಕಾರಿ ಬ್ಯಾಂಕ್‌ಗಳ 20% ವರೆಗಿನ ಪಾಲು ಮಾರಲು ಮುಂದಾದ ಮೋದಿ ಸರ್ಕಾರ

Published : Jun 18, 2025, 08:35 AM ISTUpdated : Jun 18, 2025, 10:49 AM IST
Narendra Modi

ಸಾರಾಂಶ

ಐದು ಸರ್ಕಾರಿ ಬ್ಯಾಂಕ್‌ಗಳಲ್ಲಿ ತನ್ನ ಪಾಲನ್ನು ಮಾರಾಟ ಮಾಡಲು ಮೋದಿ ಸರ್ಕಾರ ಮುಂದಾಗಿದೆ. ಈ ಕ್ರಮದಿಂದ ಬ್ಯಾಂಕ್‌ಗಳು ಖಾಸಗೀಕರಣಗೊಳ್ಳುತ್ತವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. 

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿನ (PSU bank stake sale) ತನ್ನ ಪಾಲನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ವೇಗ ನೀಡಿದೆ. ಈ ಪ್ರಕ್ರಿಯೆಯ ಮಾಹಿತಿ ನೀಡುತ್ತಿದ್ದಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಷೇರು ಬೆಲೆಯಲ್ಲಿ ಏರಿಕೆಯಾಗಿದೆ. ಜೂನ್ 17ರಂದು ಕೆಲವು ಬ್ಯಾಂಕ್‌ಗಳು ಷೇರು ಬೆಲೆಯಲ್ಲಿ ಶೇ.4ರಷ್ಟು ಏರಿಕೆಯಾಗಿದೆ. ಭಾರತ ಸರ್ಕಾರ ಒಟ್ಟು 5 ಸರ್ಕಾರಿ ಬ್ಯಾಂಕ್‌ಗಳಲ್ಲಿನ ತನ್ನ ಶೇ.20ರಷ್ಟು ಪಾಲನ್ನು ಮಾರಾಟ ಮಾಡಲು ನಿರ್ಧರಿಸಿದೆ. ಆ ಐದು ಸಾರ್ವಜನಿಕ ಬ್ಯಾಂಕ್‌ಗಳು ಯಾವವು ಎಂದು ನೋಡೋಣ ಬನ್ನಿ.

ಸರ್ಕಾರ ತನ್ನ ಪಾಲನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಂತೆ ಈ ಬ್ಯಾಂಕ್‌ಗಳು ಖಾಸಗೀಕರಣಕ್ಕೆ ಒಳಪಡುತ್ತವೆಯೇ ಎಂಬ ಪ್ರಶ್ನೆ ಮೂಡಿದೆ. ಜೂನ್ 17ರಂದು ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್, ಯುಕೋ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಂತಹ ಇತರ ಸರ್ಕಾರಿ ಬ್ಯಾಂಕುಗಳ ಷೇರುಗಳು ಏರಿಕೆ ಕಂಡು ಬಂದಿದೆ. ಕೇವಲ ಶೇ.20ರಷ್ಟು ಭಾಗ ಮಾತ್ರ ಮಾರಾಟವಾಗುತ್ತಿರೋದರಿಂದ ಈ ಬ್ಯಾಂಕ್‌ಗಳು ಖಾಸಗಿಯಾಗಲ್ಲ.

ಖಾಸಗಿ ಯಾಕೆ ಆಗಲ್ಲ?

ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಆದ್ದರಿಂದ ಸರ್ಕಾರವು 20% ಪಾಲನ್ನು ಮಾರಾಟ ಮಾಡಿದರೂ, ಬಹುಪಾಲು ಷೇರುದಾರರು ಇನ್ನೂ ಭಾರತ ಸರ್ಕಾರವಾಗಿರುತ್ತಾರೆ. ಸರ್ಕಾರವು ಷೇರು ಮಾರುಕಟ್ಟೆಯ ನಿಯಮಗಳ ಅಡಿಯಲ್ಲಿ ಕೇವಲ ಕೆಲ ಪಾಲನ್ನು ಮಾತ್ರ ಮೋದಿ ಸರ್ಕಾರ ಮಾರಾಟ ಮಾಡಲಿದೆ. ಹಾಗಾಗಿ ಖಾಸಗಿಯಾಗುವ ಆತಂಕವಿರಲ್ಲ.

ಯಾವಾಗ ಮಾರಾಟ?

ವರದಿಗಳ ಪ್ರಕಾರ, ಮುಂದಿನ 6 ತಿಂಗಳಲ್ಲಿ ಕ್ವಾಲಿಫೈಡ್ ಇನ್ಸ್ಟಿಟ್ಯೂಷನ್ ಪ್ಲೇಸ್‌ಮೆಂಟ್ ಮತ್ತು ಆಫರ್ ಫಾರ್ ಸೇಲ್ (Qualified Institutional Placement and Offer for Sale) ಮೂಲಕ 5 ಪಿಎಸ್‌ಯು ಬ್ಯಾಂಕುಗಳಲ್ಲಿ 20% ವರೆಗಿನ ಪಾಲು ಮಾರಾಟ (Government disinvestment) ಮಾಡಲು ಸರ್ಕಾರ ತೀರ್ಮಾನಿಸಿದೆ. ಆಗಸ್ಟ್ 2026ರ ವೇಳೆಗೆ ಸೆಬಿಯ ((SEBI- Securities and Exchange Board of India) ಕನಿಷ್ಠ ಸಾರ್ವಜನಿಕ ಷೇರುದಾರರ ಮಾನದಂಡ ಶೇ.25ರಷ್ಟು ಪೂರೈಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಪ್ರಕ್ರಿಯೆ ಸುಲಭಗೊಳಿಸನ್ನು ಬ್ಯುಸಿನೆಸ್‌ ಬ್ಯಾಂಕರ್‌ಗಳ ನೇಮಕಾತಿ ಅಂತಿಮ ಹಂತದಲ್ಲಿದೆ.

ಬ್ಯಾಂಕ್‌ಗಳಲ್ಲಿ ಸರ್ಕಾರದ ಪಾಲು ಎಷ್ಟು?

ಕೆಲವು ವರದಿಗಳ ಪ್ರಕಾರ ಕೆಳಗಿನ ನಾಲ್ಕು ಬ್ಯಾಂಕ್‌ಗಳಲ್ಲಿ ಪಾಲನ್ನು ಮಾರಾಟ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಸೆಬಿಯ ನಿಯಮಗಳ ಪ್ರಕಾರ, ಶೇ.25ರಷ್ಟು ಪಾಲನ್ನು ಕಡಿಮೆ ಮಾಡೋದು ಕಡ್ಡಾಯವಾಗಿದೆ. ಭಾರತ ಸರ್ಕಾರದ ಈ ಕ್ರಮ ಬ್ಯಾಂಕ್‌ಗಳ ದ್ರವ್ಯತೆ ಮತ್ತು ಮಾರುಕಟ್ಟೆಯಲ್ಲಿ ಸಕಾರಾತ್ಮಕತೆ ಹೆಚ್ಚಿಸಲು ಪೂರಕವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಶೇ.93

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌: ಶೇ,96.5

ಯುಕೋ ಬ್ಯಾಂಕ್‌: ಶೇ.95.4

ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್: ಶೇ. 98.3

ಷೇರುಗಳ ಬೆಲೆಯಲ್ಲಿ ಗಣನೀಯ ಏರಿಕೆ

ಭಾರತ ಸರ್ಕಾರ ತನ್ನ ಪಾಲನ್ನು ಮಾರಾಟ ಮಾಡುವ ಪ್ರಕ್ರಿಯೆ ವೇಗ ಹೆಚ್ಚಿಸಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಕೆಲವು ಬ್ಯಾಂಕ್‌ಗಳು ಷೇರು ಮಾರುಕಟ್ಟೆಯಲ್ಲಿ ಲಾಭದೊಂದಿಗೆ ವಹಿವಾಟು ನಡೆಸಿವೆ. ಬ್ಯಾಂಕ್ ಆಫ್ ಮಹಾರಾಷ್ಟ್ರ, ಯುಕೋ ಬ್ಯಾಂಕ್‌, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ