ಇಂದು ಪ್ರಧಾನಿಯಿಂದ ತೆರಿಗೆ ಸುಧಾರಣೆ ಪ್ರಕಟ| ಪ್ರಾಮಾಣಿಕ ತೆರಿಗೆದಾರರಿಗೆ ಗೌರವಿಸಲು ಸ್ಕೀಂ, ಸಂಭಾವ್ಯ ಕ್ರಮಗಳು| ಕಾರ್ಪೋರೆಟ್ ತೆರಿಗೆ 30%ರಿಂದ 22%ಕ್ಕಿಳಿಕೆ| ತೆರಿಗೆ ದರಗಳ ಕಡಿತ, ನೇರ ತೆರಿಗೆ ಕಾನೂನು ಸರಳ
ನವದೆಹಲಿ(ಆ.13): ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸಲು ಹಾಗೂ ನೇರ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟುತೆರಿಗೆದಾರಸ್ನೇಹಿ ಆಗಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ನೂತನ ತೆರಿಗೆ ಸುಧಾರಣಾ ಕ್ರಮಗಳನ್ನು ಪ್ರಕಟಿಸಲಿದ್ದಾರೆ.
2020-21ರ ಬಜೆಟ್‌ನಲ್ಲಿ ತೆರಿಗೆದಾರರ ಚಾರ್ಟರ್ ಜಾರಿಗೊಳಿಸುವುದಾಗಿ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಅದರ ಭಾಗವಾಗಿ ಆದಾಯ ತೆರಿಗೆ ಇಲಾಖೆಯಿಂದ ತೆರಿಗೆದಾರರಿಗೆ ನಿರ್ದಿಷ್ಟಕಾಲಮಿತಿಯೊಳಗೆ ಕಡ್ಡಾಯವಾಗಿ ಸೇವೆಗಳು ಸಿಗುವಂತೆ ಮಾಡುವ ‘ಪಾರದರ್ಶಕ ತೆರಿಗೆ: ಪ್ರಾಮಾಣಿಕರಿಗೆ ಗೌರವ’ ಎಂಬ ತತ್ವದಡಿ ಹೊಸ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆಯಿದೆ.
undefined
ಕೊರೋನಾ ಹೊಡೆತ; ಬಾಷ್ ಆದಾಯ ಶೇ.64ರಷ್ಟು ಕುಸಿತ!
ತೆರಿಗೆ ಪಾವತಿಯನ್ನು ಸರಳಗೊಳಿಸುವುದು, ಮರುಪಾವತಿಯನ್ನು ವೇಗಗೊಳಿಸುವುದು, ಪ್ರಾಮಾಣಿಕ ತೆರಿಗೆದಾರರಿಗೆ ಪ್ರೋತ್ಸಾಹ ನೀಡುವುದು ಮುಂತಾದ ನೀತಿಗಳು ಹೊಸ ಸುಧಾರಣೆಯಲ್ಲಿರಲಿವೆ ಎಂದು ಮೂಲಗಳು ಹೇಳಿವೆ.
ಈ ಕುರಿತು ವಿತ್ತ ಸಚಿವಾಲಯ ಬುಧವಾರ ಹೇಳಿಕೆ ಬಿಡುಗಡೆ ಮಾಡಿದ್ದು, ನೇರ ತೆರಿಗೆ ವ್ಯವಸ್ಥೆಯಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ಸಾಕಷ್ಟುಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಕಳೆದ ವರ್ಷ ಕಾರ್ಪೊರೇಟ್ ತೆರಿಗೆ ಶೇ.30ರಿಂದ ಶೇ.22ಕ್ಕೆ ಇಳಿಸಲಾಗಿದೆ.
ನಿಗದಿಗಿಂತ ದೂರದಲ್ಲಿ ಇಳಿದಿದ್ದೇ ಅಪಘಾತಕ್ಕೆ ಕಾರಣ?
ಹೊಸ ಉತ್ಪಾದನಾ ಘಟಕಗಳಿಗೆ ತೆರಿಗೆ ದರ ಶೇ.15ಕ್ಕೆ ಇಳಿಕೆ, ಲಾಭಾಂಶ ಹಂಚಿಕೆ ತೆರಿಗೆ ರದ್ದು, ಆದಾಯ ತೆರಿಗೆ ಇಲಾಖೆ ದಕ್ಷವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದೂ ಸೇರಿದಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದೆ. ಅದರ ಮುಂದುವರಿದ ಭಾಗವಾಗಿ ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸಲು ಇನ್ನಷ್ಟುಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದೆ.