ಚಿನ್ನ ಬೆಳ್ಳಿ ಬೆಲೆ ಕುಸಿತ: ಹೆಚ್ಚಾಯ್ತು ಖರೀದಿಯ ತುಡಿತ!

By Web DeskFirst Published Feb 21, 2019, 2:48 PM IST
Highlights

ಇಳಿಕೆಯತ್ತ ಮುಖ ಮಾಡಿದ ಚಿನ್ನದ ದರ| ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ| ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದ ಪರಿಣಾಮ| ಡಾಲರ್ ಮೌಲ್ಯ ಪ್ರಬಲವಾಗ್ತಿದ್ದಂತೇ ಚಿನ್ನದ ದರ ಕುಸಿತ| ನಾಣ್ಯ ತಯಾರಕರಿಂದ ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಬೆಳ್ಳಿ ಬೆಲೆಯಲ್ಲಿ ಕುಸಿತ|

ನವದೆಹಲಿ(ಫೆ.21): ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಮನಾರ್ಹ ಇಳಿಕೆ ಕಂಡಿದೆ. ಯುಎಸ್ ಫೆಡರಲ್ ರಿಸರ್ವ್ ಸಭೆ ಹಿನ್ನೆಲೆಯಲ್ಲಿ ಡಾಲರ್ ಪ್ರಬಲವಾಗಿದ್ದು ಜಾಗತಿಕ ಮಟ್ಟದಲ್ಲೂ ಹಳದಿ ಲೋಹಕ್ಕೆ ಬೇಡಿಕೆ ಕುಸಿದಿದೆ. 

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) 10 ಗ್ರಾಂ ಚಿನ್ನದ ಬೆಲೆ 106 ರೂ.ನಷ್ಟು ಕುಸಿದಿದ್ದು 33,764 ರೂ. ಗಳಾಗಿದೆ. ಅದೇ ರೀತಿ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ 1 ಕೆಜಿ ಬೆಳ್ಳಿ ಬೆಲೆ 342 ರೂ. ಕುಸಿದಿದ್ದು 40,549 ರೂ. ಗಳಾಗಿದೆ.

ಇನ್ನು ಡಾಲರ್ ಮೌಲ್ಯ ಪ್ರಬಲವಾದಂತೆ ಚಿನ್ನದ ಬೆಲೆ ಇಳಿಕೆ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು. ಅಲ್ಲದೇ ಕೈಗಾರಿಕಾ ಘಟಕಳಿಂದ ಹಾಗೂ ನಾಣ್ಯ ತಯಾರಕರಿಂದ ಬೇಡಿಕೆ ಕುಸಿದ ಕಾರಣ ಬೆಳ್ಳಿ ಬೆಲೆಯೂ ಕುಸಿತ ಕಂಡಿದೆ. 

ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ದರ:

22 ಕ್ಯಾರೆಟ್-31,550 ರೂ.(10 ಗ್ರಾಂ) 
24 ಕ್ಯಾರೆಟ್‍-33,743 ರೂ.(10 ಗ್ರಾಂ) 

22 ಕ್ಯಾರೆಟ್‍-3,155 ರೂ.(1 ಗ್ರಾಂ)
ಬೆಳ್ಳಿ ಬೆಲೆ-43,600 ರೂ.(1 ಕೆಜಿ) 

ಚಿನ್ನ ಮುಟ್ಟಂಗಿಲ್ಲ, ಬೆಳ್ಳಿ ಕೇಳಂಗಿಲ್ಲ: ಬೆಲೆ ಮಾತಾಡಂಗಿಲ್ಲ!

ಕುಸಿದಿದೆ ಚಿನ್ನದ ದರ: 10 ಗ್ರಾಂ ಚಿನ್ನಕ್ಕೆಷ್ಟು ಬೆಲೆ...!

ಆಭರಣ ಪ್ರೀಯರೇ ಕೇಳಿದಿರಾ?: ಆಕಾಶಕ್ಕೆ ನೆಗೆದ ಚಿನ್ನದ ದರ!

ಹೇ ಭಗವಂತ: ಚಿನ್ನದ ದರ ಇಳಿದು ಏರಿದ್ದು ಯಾಕೆ ಗೊತ್ತಾ?

click me!