
ನವದೆಹಲಿ(ಫೆ.21): ನಿನ್ನೆಯಷ್ಟೇ ಪಾಕಿಸ್ತಾನದ ವಿರುದ್ಧ ಬ್ಯುಸಿನೆಸ್ ಬಾಂಬ್ ಪ್ರಯೋಗಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಆ ದೇಶದ ವಿರುದ್ಧ ವಾಟರ್ ಬಾಂಬ್ ಪ್ರಯೋಗಿಸಿದ್ದಾರೆ.
ಏನಿದು ವಾಟರ್ ಬಾಂಬ್ ಅಂತೀರಾ?. ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದನವನ್ನು ಮರುಪರಿಶೀಲಿಸಲು ಭಾರತ ಮುಂದಾಗಿದೆ.
"
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸದಿದ್ದರೆ 1960ರ ಭಾರತ-ಪಾಕಿಸ್ತಾನ ನಡುವಿನ ಸಿಂಧೂ ನದಿ ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೃಷಿಗಾಗಿ ಸಿಂಧೂ ನದಿ ನೀರು ನೆಚ್ಚಿಕೊಂಡಿರುವ ಪಾಕ್‌ಗೆ ಈ ಮೂಲಕ ಭಾರತ ಗಂಭಿರ ಎಚ್ಚರಿಕೆ ನೀಡಿದ್ದು, ನೀರು ಸಿಗದಿದ್ದರೆ ಕೃಷಿ ಕ್ಷೇತ್ರ ಕಂಗಾಲಾಗಿ ಕೃಷಿ ನಂಬಿಕೊಂಡವರು ಉದ್ಯೋಗವಿಲ್ಲದೇ ಪರದಾಡಬೇಕಾಗುತ್ತದೆ. ಅಲ್ಲದೇ ಅತ್ಯಂತ ಫಲವತ್ತಾದ ಈ ಪ್ರದೇಶದಲ್ಲಿ ಸಿಂಧೂ ನದಿ ನೀರನ್ನೇ ನೆಚ್ಚಿಕೊಂಡು ಕೈಗಾರಿಕೆಗಳು ನಿರ್ಮಿತವಾಗಿವೆ.
ಒಂದು ವೇಳೆ ಭಾರತದಿಂದ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಕುರಿತು ಮರುಪರಿಶೀಲನೆ ನಡೆದರೆ ಪಾಕಿಸ್ತಾನದ ಆರ್ಥಿಕತೆಗೆ ಭಾರೀ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿದೆ.
ಪಾಕ್ ಮೇಲೆ ಬಿತ್ತು ಬಾಂಬ್: ಮೋದಿ ಹೊಡೆತಕ್ಕೆ ಇಮ್ರಾನ್ ಲಬೋ ಲಬೋ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.