2047ರ ವೇಳೆಗೆ Indian Economy 30 ಟ್ರಿಲಿಯನ್ ಡಾಲರ್‌ ಮೌಲ್ಯ ಆಗಲಿದೆ: Piyush Goyal ವಿಶ್ವಾಸ

By BK Ashwin  |  First Published Oct 17, 2022, 12:05 PM IST

2047 ರ ವೇಳೆಗೆ ಭಾರತದ ಆರ್ಥಿಕತೆಯ ಮೌಲ್ಯ 30 ಟ್ರಿಲಿಯನ್‌ ಅಮೆರಿಕ ಡಾಲರ್‌ಗಿಂತ ಹೆಚ್ಚಿನದ್ದಾಗಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌ ಹೇಳಿದ್ದಾರೆ. 


ರೂಪಾಯಿ (Rupee) ಮೌಲ್ಯದ ಬಗ್ಗೆ ಅಮೆರಿಕದಲ್ಲಿ (United States of America) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿಕೆ ನೀಡಿದ್ದಕ್ಕೆ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ, ಡಾಲರ್ (Dollar) ಬಲವಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಈಗ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌ (Piyush Goyal) ಅವರು 2047 ರ ವೇಳೆಗೆ ಭಾರತದ ಆರ್ಥಿಕತೆಯ ಮೌಲ್ಯ 30 ಟ್ರಿಲಿಯನ್‌ ಅಮೆರಿಕ ಡಾಲರ್‌ಗಿಂತ ಹೆಚ್ಚಿನದ್ದಾಗಲಿದೆ ಎಂದು ಶನಿವಾರ ಹೇಳಿದ್ದಾರೆ. ಭಾರತೀಯ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್‌ ಮೌಲ್ಯವನ್ನಾಗಿ ಮಾಡುವ ಕೇಂದ್ರ ಸರ್ಕಾರದ ಈ ಹಿಂದಿನ ಭರವಸೆಯ ವಿರುದ್ಧ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ವಾಗ್ದಾಳಿ ಮುಂದುವರೆಸಿದ ನಡುವೆಯೇ, ಪಿಯೂಶ್‌ ಗೋಯಲ್‌ ಅವರು ಈ ಹೇಳಿಕೆ ನೀಡಿದ್ದಾರೆ. 
 
ಚೆನ್ನೈನಲ್ಲಿ ನಡೆದ ರಫ್ತುದಾರರ ಸಮಾವೇಶದಲ್ಲಿ (Exporters Conclave) ಮಾತನಾಡಿದ ಕೇಂದ್ರ ಸಚಿವ ಪಿಯೂಶ್‌ ಗೋಯಲ್, "2047 ರ ವೇಳೆಗೆ ದೇಶವು 30 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಿನ ಆರ್ಥಿಕತೆಯನ್ನು ಹೊಂದಲು ನಾವು ಬಯಸುತ್ತೇವೆ. ಮುಂದಿನ 8 ವರ್ಷಗಳಲ್ಲಿ, ನಾವು 3x ಕಾರ್ಯಕ್ಷಮತೆಯನ್ನು ನೋಡಲು ಬಯಸುತ್ತೇವೆ. ಇದರಿಂದ 2 ಟ್ರಿಲಿಯನ್ ಡಾಲರ್ ರಫ್ತು (Export) ಆರ್ಥಿಕತೆಯಾಗಬಹುದು.ಇನ್ನು, ಭಾರತ ಇದನ್ನು ಸಾಧಿಸಬಹುದು ಮಾತ್ರವಲ್ಲ, 2030 ರ ವೇಳೆಗೆ ಇದನ್ನು ಮೀರಬಹುದು ಎಂದೂ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Tap to resize

Latest Videos

ಇದನ್ನು ಓದಿ: ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ; ಡಾಲರ್ ಬಲವಾಗುತ್ತಿದೆ: Nirmala Sitharaman

ಇನ್ನು, ಮುಂದಿನ 12 ತಿಂಗಳಲ್ಲಿ ರಷ್ಯಾಕ್ಕೆ ಸುಮಾರು 8-10 ಬಿಲಿಯನ್‌ ಅಮೆರಿಕ ಡಾಲರ್‌ ಹೆಚ್ಚುವರಿ ರಫ್ತು ಮತ್ತು ಯೂರೋಪ್ ಒಕ್ಕೂಟಕ್ಕೆ 15-20 ಬಿಲಿಯನ್‌ ಅಮೆರಿಕ ಡಾಲರ್‌ ಹೆಚ್ಚುವರಿ ರಫ್ತು ನಡೆಯಲಿದೆ ಎಂದೂ ಅವರು ಹೇಳಿದರು. ಈ ವರ್ಷ ಭಾರತೀಯ ಕರೆನ್ಸಿಯ ಮೌಲ್ಯದಲ್ಲಿ ಶೇಕಡಾ 8 ರಷ್ಟು ಕುಸಿತವನ್ನು ಸಮರ್ಥಿಸಿಕೊಂಡ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರೂಪಾಯಿ ದುರ್ಬಲವಾಗಿಲ್ಲ, ಆದರೆ ಡಾಲರ್ ಬಲಗೊಂಡಿದೆ ಎಂದು ನಿನ್ನೆ ಹೇಳಿದ್ದರು. ಅವರ ಇ ಹೇಳಿಕೆ ಸಾಮಾಜಿಕ ಜಾಳತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ.

ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund) (ಐಎಂಎಫ್) (IMF) ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಿರ್ಮಲಾ ಸೀತಾರಾಮನ್, "ಮೊದಲು ನಾನು ಇದನ್ನು ರೂಪಾಯಿ ಮೌಲ್ಯದ ಕುಸಿತವಲ್ಲ, ಡಾಲರ್ ಬಲವರ್ಧನೆ ಎಂದು ನೋಡುತ್ತೇನೆ. ಡಾಲರ್ ನಿರಂತರವಾಗಿ ಬಲಗೊಳ್ಳುತ್ತಿದೆ’’ ಎಂದು ಹೇಳಿದ್ದರು.

ಇದನ್ನೂ ಓದಿ: ದೇಶದ ಆರ್ಥಿಕತೆ ಭದ್ರವಾಗಿದೆ: ಸಮರ್ಥಿಸಿಕೊಂಡ ವಿತ್ತ ಸಚಿವೆ

ಇನ್ನು, ಕೇಂದ್ರ ಸಚಿವೆಯ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್, ಸರ್ಕಾರದ "ಅಸಮರ್ಥತೆ ಮತ್ತು ತಪ್ಪು ನೀತಿಗಳಿಗೆ" ಜನರು ಇನ್ನೂ ಎಲ್ಲಿಯವರೆಗೆ ಬೆಲೆ ತೆರುತ್ತಾರೆ ಎಂದು ಪ್ರಶ್ನೆ ಮಾಡಿದೆ. 

click me!