
ನವದೆಹಲಿ(ಜೂ.12): ಕೊರೋನಾದಿಂದಾಗಿ ಸಂಕಷ್ಟಕ್ಕೀಡಾಗಿರುವ ಸಾವಿರಾರು ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಿಂದ ನೌಕರರ ಭವಿಷ್ಯನಿಧಿ ಸಂಸ್ಥೆ- ಇಪಿಎಫ್ಒ ಇತ್ತೀಚೆಗೆ ಉದ್ಯೋಗಿಯ ಠೇವಣಿ ಆಧಾರಿತ ವಿಮೆ (ಇಡಿಎಲ್ಐ)ಯೋಜನೆಯ ಗರಿಷ್ಠ ಮೊತ್ತವನ್ನು 7 ಲಕ್ಷ ರು.ಗಳಿಗೆ ಏರಿಕೆ ಮಾಡಿದೆ. ಈ ಸೌಲಭ್ಯವನ್ನು ಪಡೆಯಲು ನೌಕರರು ಯಾವುದೇ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗಿಲ್ಲ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಇಪಿಎಫ್ ಯೋಜನೆಯ ಎಲ್ಲಾ ಗ್ರಾಹಕರಿಗೆ ಇಡಿಎಲ್ಐ ಯೋಜನೆಯ ಅಡಿಯಲ್ಲಿ ವಿಮಾ ಸೌಲಭ್ಯ ಒದಗಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಉದ್ಯೋಗಿ ಸ್ವಾಭಾವಿಕವಾಗಿ, ಕಾಯಿಲೆಯಿಂದ ಅಥವಾ ಅಪಘಾತದಿಂದ ಸಾವಿಗೀಡಾದ ಸಂದರ್ಭದಲ್ಲಿ ನಾಮಿನಿಗೆ 7 ಲಕ್ಷ ರು. ಹಣ ಲಭ್ಯವಾಗಲಿದೆ.
ಈ ಸಂಬಂಧ ಇಪಿಎಫ್ಒ ಇತ್ತೀಚೆಗೆ ಉದ್ಯೋಗಿ ಸಾವಿಗೀಡಾದ ಸಂದರ್ಭದಲ್ಲಿ ನೀಡುವ ಕನಿಷ್ಠ ಮೊತ್ತವನ್ನು ಕನಿಷ್ಠ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಹಾಗೂ ಗರಿಷ್ಠ ಮಿತಿಯನ್ನು 6 ಲಕ್ಷದಿಂದ 7 ಲಕ್ಷಕ್ಕೆ ಏರಿಕೆ ಮಾಡಿದೆ. ಸಾವಿಗೂ ಮುನ್ನ ಕಳೆದ 12 ತಿಂಗಳಿನಲ್ಲಿ ಉದ್ಯೋಗಿ ಪಡೆದಿದ್ದ ವೇತನಕ್ಕೆ ಅನುಗುಣವಾಗಿ ವಿಮಾ ಕವರ್ ಇರಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.