ಪೆಟ್ರೋಲ್ ಬೆಲೆ ಏರಿಕೆ ಕುರಿತು ಪ್ರತಿಭಟನೆ, 1 ರೂಪಾಯಿಗೆ ಲೀಟರ್ ಪೆಟ್ರೋಲ್ ಮಾರಾಟ!

Published : Apr 15, 2022, 08:23 PM IST
ಪೆಟ್ರೋಲ್ ಬೆಲೆ ಏರಿಕೆ ಕುರಿತು ಪ್ರತಿಭಟನೆ, 1 ರೂಪಾಯಿಗೆ ಲೀಟರ್ ಪೆಟ್ರೋಲ್ ಮಾರಾಟ!

ಸಾರಾಂಶ

ಇಂಧನ ದರಗಳಲ್ಲಿ ವಿಪರೀತ ಏರಿಕೆಯ ಕುರಿತು ಪ್ರತಿಭಟನೆ ನಡೆಸುವ ಸಲುವಾಗಿ ಮಹಾರಾಷ್ಟ್ರದ ಸೊಲ್ಲಾಪುರ ನಗರದಲ್ಲಿ ಲೀಟರ್ ಪೆಟ್ರೋಲ್ ಗೆ 1 ರೂಪಾಯಿಯಂತೆ ಮಾರಾಟ ಮಾಡಲಾಗಿದೆ. 500 ಮಂದಿ ವಾಹನ ಚಾಲಕರು ಲೀಟರ್ ಗೆ 1 ರೂಪಾಯಿ ದರದಲ್ಲಿ ಪೆಟ್ರೋಲ್ ಖರೀದಿ ಮಾಡಿದರು.  

ಮುಂಬೈ (ಏ.15): ಇಂಧನ ಬೆಲೆ (Fuel Price Hike) ಏರಿಕೆಯನ್ನು ವಿರೋಧಿಸಿ ಮಹಾರಾಷ್ಟ್ರದ ಸೋಲಾಪುರ ನಗರದ (Solapur City) ಪೆಟ್ರೋಲ್ ಬಂಕ್ (Petrol Bunk) ಒಂದರಲ್ಲಿ ಗುರುವಾರ, 500 ಖರೀದಿದಾರರಿಗೆ ಲೀಟರ್ ಗೆ 1 ರೂಪಾಯಿ ದರದಂತೆ ಪೆಟ್ರೋಲ್ ಮಾರಾಟ ಮಾಡಲಾಗಿದೆ. ಡಾ ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ "ಡಾ ಅಂಬೇಡ್ಕರ್ ವಿದ್ಯಾರ್ಥಿಗಳು ಮತ್ತು ಯುವ ಪ್ಯಾಂಥರ್ಸ್" ಗುಂಪಿನಿಂದ ಈ ಅಭಿಯಾನವನ್ನು ಆಯೋಜಿಸಲಾಗಿತ್ತು.

ಪ್ರತಿ ಖರೀದಿದಾರರಿಗೆ ಕೇವಲ ಒಂದು ಲೀಟರ್ ಇಂಧನವನ್ನು ನೀಡಲಾಯಿತು. ಆದರೂ, ಜನರು ಪೆಟ್ರೋಲ್ ಪಂಪ್‌ಗೆ ಜಮಾಯಿಸಿದ್ದರಿಂದ ಸರ್ಪಗಾವಲಿನ ರೀತಿಯಲ್ಲಿ ಸರತಿ ಸಾಲು ಕಂಡಿತು. ಗುಂಪನ್ನು ನಿಯಂತ್ರಿಸಲು ಪೊಲೀಸರನ್ನೂ ನಿಯೋಜಿಸಲಾಗಿತ್ತು.

ಹಣದುಬ್ಬರ ತೀವ್ರವಾಗಿ ಏರಿಕೆಯಾಗಿದೆ ಎಂದು ಸಂಘಟನೆಯ ರಾಜ್ಯ ಘಟಕದ ಮುಖಂಡ ಮಹೇಶ ಸರ್ವಗೌಡ ಹೇಳಿದರು. "ನರೇಂದ್ರ ಮೋದಿ ಸರ್ಕಾರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 120 ರೂ.ಗೆ ತಲುಪಿದೆ, ಆದ್ದರಿಂದ, ಜನರಿಗೆ ಪರಿಹಾರ ನೀಡಲು ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲು, ನಾವು ಒಂದು ರೂಪಾಯಿ ದರದಲ್ಲಿ ಪೆಟ್ರೋಲ್ ನೀಡಲು ನಿರ್ಧರಿಸಿದ್ದೇವೆ." ಎಂದು ತಿಳಿಸಿದರು. ಕಳೆದ ಒಂಬತ್ತು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಮಾರ್ಚ್ 22 ಮತ್ತು ಏಪ್ರಿಲ್ 6 ರ ನಡುವೆ ಪ್ರತಿ ಲೀಟರ್‌ಗೆ 10 ರೂಪಾಯಿ ಹೆಚ್ಚಿಸಲಾಗಿದೆ.

"ಈ ಬೆಲೆಗೆ ಪೆಟ್ರೋಲ್ ಖರೀದಿಸಲು ನಾನು ಸಂತೋಷಪಟ್ಟಿದ್ದೇನೆ. ಹಣದುಬ್ಬರದ ನಡುವೆ ನಾನು ಸ್ವಲ್ಪ ಹಣವನ್ನು ಉಳಿಸಿದ್ದೇನೆ, ಹಣದುಬ್ಬರ ಪ್ರತಿ ದಿನ ಹೊಸ ಎತ್ತರವನ್ನು ಏರುತ್ತಿದೆ' ಎಂದು ಖರೀದಿದಾರರೊಬ್ಬರು ಹೇಳಿದರು.

Fact Check: ಇಂಡಿಯನ್‌ ಆಯಿಲ್‌ನಿಂದ ಗ್ರಾಹಕರಿಗೆ 6 ಸಾವಿರ ರೂ ಮೌಲ್ಯದ ಗಿಫ್ಟ್ ವೋಚರ್

ಭಾರತದಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳು: ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 105.41 ರೂಪಾಯಿ ಆಗಿದ್ದು,  ಮುಂಬೈನಲ್ಲಿ ದಾಖಲೆಯ 120.51 ರೂ ಆಗಿದೆ. ಡೀಸೆಲ್ ಬೆಲೆಯು ದೆಹಲಿಯಲ್ಲಿ ಲೀಟರ್‌ಗೆ ರೂ 96.67 ಮತ್ತು ಮುಂಬೈನಲ್ಲಿ ಲೀಟರ್‌ಗೆ ರೂ 104.77 ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

Petrol, Diesel Price Today: ಹಲವು ಜಿಲ್ಲೆಗಳಲ್ಲಿ ಇಂಧನ ದರ ಇಳಿಕೆ, ಕೆಲವೆಡೆ ಏರಿಕೆ!

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಅಧಿಸೂಚನೆಯ ಪ್ರಕಾರ,  ದೇಶದ ಇತರ ಭಾಗಗಳಲ್ಲಿ, ಅಂದರೆ ಕೋಲ್ಕತ್ತಾದಲ್ಲಿ ಭಾನುವಾರ ಪೆಟ್ರೋಲ್ ಲೀಟರ್‌ಗೆ 115.12 ರೂ ಮತ್ತು ಡೀಸೆಲ್ ಲೀಟರ್‌ಗೆ 99.83 ರೂ. ಚೆನ್ನೈನಲ್ಲಿಯೂ  ಒಂದು ಲೀಟರ್ ಪೆಟ್ರೋಲ್ ಬೆಲೆ 110.89 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 100.94 ರೂ. ಆಗಿದೆ. ಲಕ್ನೋದಲ್ಲಿ, ಪೆಟ್ರೋಲ್ ಬೆಲೆ ಲೀಟರ್‌ಗೆ 105.25 ರೂ ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 96.83 ರೂ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 111.09 ರೂ., ಡೀಸೆಲ್ ದರ ಲೀಟರ್‌ಗೆ 94.79 ರೂ. ಗಾಂಧಿನಗರದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 105.29 ರೂ. ಮತ್ತು ಡೀಸೆಲ್ ಲೀಟರ್‌ಗೆ 99.64 ರೂ. ಆಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!