Economic Crisis :ಶ್ರೀಲಂಕಾದ ಹಾದಿಯಲ್ಲೇ ನೇಪಾಳದ ಆರ್ಥಿಕತೆ; ಸದ್ಯ ಭಾರತದ ಮುಂದಿರೋ ಸವಾಲುಗಳೇನು?

By Suvarna News  |  First Published Apr 15, 2022, 5:46 PM IST

*ಹದಗೆಟ್ಟ ನೆರೆಯ ರಾಷ್ಟ್ರಗಳ ಆರ್ಥಿಕತೆ ಭಾರತಕ್ಕೆ ಹೊಸ ತಲೆನೋವು
*ಶ್ರೀಲಂಕಾಕ್ಕೆ ನೆರವು ನೀಡಿದ ಬಳಿಕ ಈಗ ನೇಪಾಳದ ಸಹಾಯಕ್ಕೆ ನಿಲ್ಲಬೇಕಾದ ಅನಿವಾರ್ಯತೆ
*ಭಾರತದ ರಫ್ತು ವ್ಯವಹಾರದ ಮೇಲೂ ಪ್ರತಿಕೂಲ ಪರಿಣಾಮ 
 


Business Desk: ನೆರೆಯ ರಾಷ್ಟ್ರಗಳಾದ ಶ್ರೀಲಂಕಾ (Sri Lanka) ಹಾಗೂ ನೇಪಾಳದಲ್ಲಿನ (Nepal) ಆರ್ಥಿಕ ಬಿಕ್ಕಟ್ಟು ಭಾರತದ (India) ಮೇಲೆ ಅನೇಕ ವಿಧಗಳಲ್ಲಿ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈಗಾಗಲೇ ಶ್ರೀಲಂಕಾಕ್ಕೆ ಆಹಾರ (Food), ಇಂಧನ ಸೇರಿದಂತೆ ಅಗತ್ಯ ನೆರವು ಒದಗಿಸಿರೋ ಭಾರತ ಈಗ ನೇಪಾಳದ ಸಹಾಯಕ್ಕೂ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಈಗಾಗಲೇ ಕೋವಿಡ್-19 ಹಾಗೂ ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮದಿಂದ ಸಾಕಷ್ಟು ಹೊಡೆತ ಅನುಭವಿಸಿರೋ ಭಾರತದ ಆರ್ಥಿಕತೆಗೆ ಮತ್ತಷ್ಟು ಹೊರೆಯಾಗೋ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧ ಗಟ್ಟಿಗೊಳಿಸಲು ಭಾರತಕ್ಕೆ ಇದೊಂದು ಸುವರ್ಣಾವಕಾಶ ಎಂಬ ಮಾತೂ ಕೇಳಿಬಂದಿದೆ.

'ನೆರೆಯ ರಾಷ್ಟ್ರಗಳಲ್ಲಿ ತಲೆದೋರಿರುವ ಬಿಕ್ಕಟ್ಟು ಭಾರತಕ್ಕೆ ಮತ್ತೆ ಪ್ರಾದೇಶಿಕ ವಿಚಾರಗಳಲ್ಲಿ ಪ್ರಾಮುಖ್ಯತೆ ಗಳಿಸಲು ನೆರವು ನೀಡಲಿದೆ. ಕಳೆದ ಕೆಲವು ವರ್ಷಗಳಿಂದ ಭಾರತದ ಸ್ಥಾನವನ್ನು ಚೀನಾ ಕಸಿದುಕೊಂಡಿತ್ತು. ಈ ಬಾರಿ ಭಾರತದ ನಡೆಗೆ ಶ್ರೀಲಂಕಾ ಹಾಗೂ ನೇಪಾಳದ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Tap to resize

Latest Videos

ಉಕ್ರೇನ್ ರಷ್ಯಾ ಬಿಕ್ಕಟ್ಟು, ಚೀನಾ ಲಾಕ್‌ಡೌನ್‌: ಭಾರತದಲ್ಲಿ ಟಿವಿ ಬೆಲೆ ಏರಿಕೆ ಸಾಧ್ಯತೆ

ಭಾರತ ಹಾಗೂ ಅದರ ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧ ವೃದ್ಧಿಸುವ ಉದ್ದೇಶದಿಂದ ವಿದೇಶಾಂಗ ಸಚಿವಾಲಯ ಏಪ್ರಿಲ್ 12ರಂದು ಆಯೋಜಿಸಿದ್ದ ಮೊದಲ ಅಂತರ ಸಚಿವಾಲಯದ ಸಮನ್ವಯ ಗುಂಪು (IMCG) ಸಭೆಯಲ್ಲಿ ಸಚಿವಾಲಯಗಳು ಹಾಗೂ ಇಲಾಖೆಗಳು ತಮ್ಮ ಅಂತಾರಾಷ್ಟ್ರೀಯ ಚಟುವಟಿಕೆಗಳು,ಕಾರ್ಯಕ್ರಮಗಳು ಹಾಗೂ ಯೋಜನೆಗಳಲ್ಲಿ ಭಾರತದ ನೆರೆಯ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡುವಂತೆ ಕೋರಲಾಯಿತು.

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಭಾರತಕ್ಕೆ ಸವಾಲು
ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹಾಲು, ಇಂಧನ, ಔಷಧ ಸೇರಿದಂತೆ ದಿನಬಳಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪ್ರಸ್ತುತ ಶ್ರೀಲಂಕಾದಲ್ಲಿ ಒಂದು ಲೀಟರ್ ಹಾಲಿನ ಬೆಲೆ 300ರೂ. ಇದು ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಪರಿಣಾಮ ಈಗಾಗಲೇ ಅಲ್ಲಿನ ಪ್ರಧಾನ ಮಂತ್ರಿ ಮಹಿಂದ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ಸಾವರ್ಜನಿಕರು ರಸ್ತೆಗಿಳಿದಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಭಾರತ ಶ್ರೀಲಂಕಾಕ್ಕೆ ನಿರಂತರವಾಗಿ ನೆರವು ನೀಡುತ್ತಲಿದೆ. ಹಣಕಾಸಿನ ಸಹಾಯದ ಜೊತೆಗೆ ಪ್ರಧಾನಿ ಮಹಿಂದ ರಾಜಪಕ್ಸೆ ಜೊತೆಗೆ ಬಿಕ್ಕಟ್ಟು ನಿವಾರಣೆಗೆ ರಾಜಕೀಯ ಮಾತುಕತೆಗಳನ್ನು ಕೂಡ ನಡೆಸಿದ್ದು, ಫಲಾಪ್ರದವಾಗಿಲ್ಲ ಎಂದು ಹೇಳಲಾಗಿದೆ. ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ಭಾರತದ ರಫ್ತು ವ್ಯವಹಾರದ ಮೇಲೂ ಪರಿಣಾಮ ಬೀರಿದೆ. ಭಾರತದ ರಫ್ತುದಾರರು ಶ್ರೀಲಂಕಾಕ್ಕೆ ಸರಕುಗಳನ್ನು ಸಾಗಿಸಲು ಹಿಂದೆಮುಂದೆ ನೋಡುವಂಥ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಶ್ರೀಲಂಕಾದಲ್ಲಿನ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಹಾಗೂ ಖಾಸಗಿ ಸಂಸ್ಥೆಗಳು ಹಣದ ಮುಗ್ಗಟ್ಟು ಎದುರಿಸುತ್ತಿವೆ. ಹೀಗಾಗಿ ಸರಕು ಕಳುಹಿಸಿದ್ರೆ ಹಣ ಬರುತ್ತದೆ ಎಂಬ ಭರವಸೆ ಭಾರತೀಯ ಉದ್ಯಮಿಗಳಿಗಿಲ್ಲ. 

ಇನ್ನು ಶ್ರೀಲಂಕಾಕ್ಕೆ ಭಾರತೀಯ ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಭೇಟಿ ನೀಡುತ್ತಿದ್ದರು. ಆದ್ರೆ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ನಿರ್ಮಾಣವಾದ ಬಳಿಕ ಭಾರತೀಯರು ಮುಂಗಡ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿದ್ದಾರೆ. ಅಲ್ಲಿನ ಹೋಟೆಲ್ ಗಳು ಹಾಗೂ ರೆಸಾರ್ಟ್ ಗಳು ದರ ತಗ್ಗಿಸಿದ್ದರೂ ಭಾರತೀಯ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಶ್ರೀಲಂಕಾದಲ್ಲಿರೋ ತಮಿಳರು ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಮೀನುಗಾರಿಕ ಬೋಟ್ ಗಳ ಮೂಲಕ ತಮಿಳುನಾಡಿಗೆ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. 

Entrepreneurs In India:ಭಾರತದ ಉದ್ಯಮರಂಗದಲ್ಲಿ ಮೇಲ್ವರ್ಗದವರೇ ಜಾಸ್ತಿ; ಪರಿಶಿಷ್ಟ ಪಂಗಡದವರ ಪಾಲು ಕೇವಲ ಶೇ. 2.1!

ನೇಪಾಳದಲ್ಲೂ ಆರ್ಥಿಕ ಬಿಕ್ಕಟ್ಟು
ಇನ್ನು ನೇಪಾಳದ ಆರ್ಥಿಕ ಪರಿಸ್ಥಿತಿ ಕೂಡ ಶ್ರೀಲಂಕಾದ ಹಾದಿ ಹಿಡಿದಿದೆ. ನೇಪಾಳದ ಆರ್ಥಿಕ ಆರೋಗ್ಯ ಹದಗೆಟ್ಟಿರೋದನ್ನು ಸ್ವತಃ ಅಲ್ಲಿನ ವಿತ್ತ ಸಚಿವಾರದ ಜನಾರ್ಧನ್ ಶರ್ಮಾ ಅವರೇ ಒಪ್ಪಿಕೊಂಡಿದ್ದಾರೆ. ನೇಪಾಳದಲ್ಲಿ ಹಣದುಬ್ಬರ ಎರಡಂಕಿ ತಲುಪಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಕೇಂದ್ರೀಯ ಬ್ಯಾಂಕ್ ವಿದೇಶಿ ವಿನಿಮಯ ಉಳಿಸೋ ಸಲುವಾಗಿ ಕಳೆದ ವಾರ ಅತ್ಯಗತ್ಯವಲ್ಲದ ಸರಕುಗಳ ಆಮದನ್ನು ಕಳೆದ ವಾರ ನಿರ್ಬಂಧಿಸಿದೆ. ನೇಪಾಳದಲ್ಲಿ ಆರು ತಿಂಗಳ ಆಮದಿಗೆ ಸಾಕಾಗುವಷ್ಟು ವಿದೇಶಿ ವಿನಿಮಯವಷ್ಟೇ ಉಳಿದಿದೆ. ಇದು ಭಾರತದ ರಫ್ತುದಾರರಿಗೆ ಶಾಕ್ ನೀಡಿದೆ. ಭಾರತೀಯ ಸರಕುಗಳಿಗೆ ನೇಪಾಳ 9ನೇ ಅತೀದೊಡ್ಡ ರಫ್ತುತಾಣವಾಗಿದೆ. 


 

click me!