ತುಂಬಾ ಸಿಂಪಲ್: ಇಳಿದ ಡೀಸೆಲ್, ಏರದ ಪೆಟ್ರೋಲ್!

By Web DeskFirst Published Dec 16, 2018, 12:40 PM IST
Highlights

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಹೆಚ್ಚಳ| ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ| ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಸ್ಥಿತ್ಯಂತರ| ದೇಶದ ಮಹಾನಗರಗಳಲ್ಲಿ ಡೀಸೆಲ್ ಬೆಲೆಯಲ್ಲಿ ಇಳಿಕೆ 


ನವದೆಹಲಿ(ಡಿ.16): ಸತತ ಎರಡು ತಿಂಗಳುಗಳ ಕಾಲ ಇಳಿಯತ್ತ ಮುಖ ಮಾಡಿ, 90 ರ ಗಡಿ ದಾಟಿದ್ದ ಪೆಟ್ರೋಲ್ ಮತ್ತು75ರ ಗಡಿ ದಾಟಿದ್ದ ಡೀಸೆಲ್ ಬೆಲೆ ಇದೀಗ ಕ್ರಮವಾಗಿ 80 ಮತ್ತು 65ರ ಆಸುಪಾಸಿನಲ್ಲಿದೆ.

ಆದರೆ ಇದೀಗ ಮತ್ತೆ ತೈಲ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು, ಪೈಸೆಗಳ ಲೆಕ್ಕಾಚಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರಿಕೆಯಾಗಿರುವುದೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ವಳವಾಗಲು ಕಾರಣ ಎನ್ನಲಾಗಿದೆ.

ಆದರೆ ಕಳೆದ ಎರಡು ತಿಂಗಳಿನಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಡೀಸೆಲ್ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದೆ. 

ಇಂದಿನ ವಹಿಆವಾಟಿನಲ್ಲಿ ಡೀಸೆಲ್ ಬೆಲೆಯಲ್ಲಿ ಒಟ್ಟು 13 ಪೈಸೆ ಇಳಿಕೆ ಕಂಡು ಬಂದಿದ್ದು, ಪೆಟ್ರೋಲ್ ಬೆಲೆಯಲ್ಲಿ ಸ್ಥಿತ್ಯಂತರವಿದೆ.

ದೇಶದ ಇಂದಿನ ಮಹಾನಗರಗಳಲ್ಲಿ ಇಂದಿನ ತೈಲದರ ಗಮನಿಸುವುದಾದರೆ...


ರಾಷ್ಟ್ರ ರಾಜಧಾನಿ ನವದೆಹಲಿ-

ಪೆಟ್ರೋಲ್- 70.34 ರೂ.

ಡೀಸೆಲ್- 64.38 ರೂ.

ವಾಣಿಜ್ಯ ರಾಜಧಾನಿ ಮುಂಬೈ-

ಪೆಟ್ರೋಲ್- 75.96 ರೂ.

ಡೀಸೆಲ್-  67.38 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-

ಪೆಟ್ರೋಲ್- 72.43 ರೂ.

ಡೀಸೆಲ್- 66.14 ರೂ.

ತಮಿಳುನಾಡು ರಾಜಧಾನಿ ಚೆನ್ನೈ-

ಪೆಟ್ರೋಲ್- 72.99 ರೂ.

ಡೀಸೆಲ್- 67.97 ರೂ.

ರಾಜ್ಯ ರಾಜಧಾನಿ ಬೆಂಗಳೂರು-

ಪೆಟ್ರೋಲ್- 70.91 ರೂ.

ಡೀಸೆಲ್- 64.73 ರೂ. 

ಬರೋಬ್ಬರಿ 13 ರೂ. ಇಳಿದ ಪೆಟ್ರೋಲ್: ಲೆಕ್ಕಕ್ಕೇ ಇಲ್ಲ ಫ್ಯುಯೆಲ್!

ಇದು ಎಲೆಕ್ಷನ್ ಎಫೆಕ್ಟಾ?: ಪೆಟ್ರೋಲ್ ದರ ಏರಿಕೆ!

ಅಯ್ಯೋ ರಾಮ: ಪೆಟ್ರೋಲ್ ದರ ಏರಿಕೆಗೆ ಮರುಜನ್ಮ!

click me!