ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಹೆಚ್ಚಳ: 6 ದಿನಕ್ಕೆ 3.31 ರು. ಏರಿಕೆ

By Suvarna News  |  First Published Jun 12, 2020, 11:29 AM IST

ಉದ್ಯಾನ ನಗರಿ ಬೆಂಗಳೂರಿನಲ್ಲಿ ಲೀ. ಪೆಟ್ರೋಲ್‌ ದರವು 75.77 ರು.ನಿಂದ 76.37 ರು.ಗೆ ಹಾಗೂ ಡೀಸೆಲ್‌ ಬೆಲೆ 68.09 ರು.ನಿಂದ 68.69ಕ್ಕೆ ಜಿಗಿದಿದೆ.


ಬೆಂಗಳೂರು (ಜೂ.12): ಸತತ 6ನೇ ದಿನವಾದ ಶುಕ್ರವಾರವೂ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀ.ಗೆ 57 ಪೈಸೆಯಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ 6 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯು ಕ್ರಮವಾಗಿ 3.31 ರು. ಹಾಗೂ 3.42 ರು. ಏರಿಕೆಯಾದಂತಾಗಿದೆ.

ಇದರೊಂದಿಗೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ಲೀ. ಪೆಟ್ರೋಲ್‌ ದರವು 76.39 ರು.ನಿಂದ 76.98 ರು.ಗೆ ಹಾಗೂ ಡೀಸೆಲ್‌ ಬೆಲೆ 68.66 ರು.ನಿಂದ 69.22ಕ್ಕೆ ಜಿಗಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಂಪನಿಗಳು ಈ ಹೆಚ್ಚಳ ಮಾಡುತ್ತಿವೆ.

Latest Videos

undefined

ಪೆಟ್ರೋಲ್‌ದೆ ವಿಷ್ವದ ದುಬಾರಿ ಟ್ಯಾಕ್ಸ

ದೇಶದೆಲ್ಲೆಡೆ ತೈಲೋತ್ಪನ್ನಗಳ ಬೆಲೆಯಲ್ಲಿ ಏರಿಕೆ ಕಂಡಿದ್ದು, ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ಹಾಗೂ ಇತರೆ ತೆರಿಗೆಗೆ ಅನುಗುಣವಾಗಿ ವಿಭಿನ್ನವಾಗಿರಲಿದೆ.

82 ದಿನಗಳ ವಿರಾಮದ ನಂತರ ತೈಲ ಕಂಪನಿಗಳು ಭಾನುವಾರ ಬೆಲೆಯನ್ನು ಪರಿಷ್ಕರಿಸಲು ಆರಂಭಿಸಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದೆ. 

ದಿಲ್ಲಿಯಲ್ಲಿ 74 ರೂ. ಇದ್ದರೆ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 24.57 ರೂ. ಆಗಿದ್ದು, ಜೀಸೆಲ್ ಬೆಲೆ 59 ಪೈಸೆ ಹೆಚ್ಚಾಗಿ 72.81 ರೂ. ಆಗಿದೆ. 
 

click me!